ನವದೆಹಲಿ:ಆದಾಯ ತೆರಿಗೆ ಇಲಾಖೆಯ ಹೊಸ ವೆಬ್​ಸೈಟ್ ಆರಂಭಗೊಂಡು ಎರಡು ತಿಂಗಳು ಕಳೆದಿದ್ದರೂ ಇನ್ನೂ ಹಲವು ತಾಂತ್ರಿಕ ದೋಷಗಳು ನಿವಾರಣೆ ಆಗದ ಹಿನ್ನೆಲೆಯಲ್ಲಿ, ಈ ವೆಬ್​ಸೈಟ್ ನಿರ್ವಹಿಸುತ್ತಿರುವ ಇನ್ಪೋಸಿಸ್ ಕಂಪನಿಯ ಸಿಇಒ ಸಲೀಲ್ ಪಾರೇಖ್​ಗೆ
ಕೇಂದ್ರ ಹಣಕಾಸು ಸಚಿವಾಲಯ ಸಮನ್ಸ್ ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎದುರು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಪೋರ್ಟಲ್ ಆರಂಭವಾದಾಗಿನಿಂದಲೂ ಹಲವು ದೋಷಗಳು ಕಂಡುಬರುತ್ತಿವೆ. ಆ. 21ರಿಂದ ಈ ಸಮಸ್ಯೆ ತೀವ್ರಗೊಂಡಿದೆ. ಎರಡೂವರೆ ತಿಂಗಳು ಕಳೆದರೂ ತಾಂತ್ರಿಕ ಸಮಸ್ಯೆ ನಿವಾರಣೆ ಆಗದ ಕಾರಣ ಈ ಸಮನ್ಸ್ ನೀಡಲಾಗಿದೆ. ಜನವರಿ 2019ರಿಂದ 2021 ಜೂನ್ ವರೆಗೆ ಪೋರ್ಟಲ್ ಆರಂಭ ಹಾಗೂ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಇನ್ಪೋಸಿಸ್​ಗೆ 164.5 ಕೋಟಿ ರೂ. ಪಾವತಿ ಮಾಡಿದೆ.
ಫ್ರೀ ಕೊಟ್ರೂ ಊಟ-ತಿಂಡಿ-ನೀರು ಏನೂ ಬೇಡ ಎಂದು ಹೇಳಿ ಸಿಕ್ಕಿಬಿದ್ದ ಸ್ಮಗ್ಲರ್; ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಡ್ರಗ್ಸ್

ಪಾಂಡವರ ಕಾಲದ ದೇವಸ್ಥಾನದ ಬಸವನ ತಲೆ ಉರುಳಿಸಿದ ದುಷ್ಕರ್ಮಿಗಳು; ಪ್ರವಾಸಿಗರಿಗೆ ನಿರ್ಬಂಧ ವಿಧಿಸಲು ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 13 =
Remember me
