ಮುಂಬೈ:ನಟಿ ಸುಮೋನಾ ಚಕ್ರವರ್ತಿ ಕಪಿಲ್ ಶರ್ಮಾ ಅವರು ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಷೋನಲ್ಲಿ ಕಪಿಲ್ ಶರ್ಮಾ ಅವರ ಪತ್ನಿ ಪಾತ್ರದಲ್ಲಿ ನಡಿಸುತ್ತಿದ್ದರು. ಆದರೆ ಅದೊಮ್ಮೆ ತಾವು ಕಪಿಲ್​ ಅವರ ಹಾಸ್ಯಕ್ಕೆ ಗುರಿಯಾಗಿ ಅವಮಾನ ಎದುರಿಸಿರುವ ಕುರಿತು ಸಂದರ್ಶನವೊಂದರಲ್ಲಿ ಈ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ?
ದಿ ಹ್ಯಾಬಿಟ್ ಕೋಚ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ‘ಮೊದಲು ನಟನೆ ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ನಾನು ಹೇಳಬೇಕಿರುವ ಡೈಲಾಗ್​ ಮರೆತಿದ್ದೆ. ಆಗ ಕಪಿಲ್​ ಅವರು ನನ್ನ ಬಾಯಿ ಮತ್ತು ತುಟಿಗಳನ್ನು ಗೇಲಿ ಮಾಡಿದರು.ಆದರೆ ನಂತರದ ಸಂಚಿಕೆಗಳಲ್ಲಿ ನಾನು ಹಾಸ್ಯ ಮಾಡುವುದನ್ನು ಕಲಿತೆ. ಆದರೆ ಈ ಅವಮಾನ ಮತ್ತು ಕೆಟ್ಟ ಅನುಭವ ಮಾತ್ರ ಇದುವರೆಗೆ ಮರೆತಿಲ್ಲ ಎಂದಿದ್ದಾರೆ.
ಇದನ್ನೂ ಓದಿ:“ನಂದ ಲವ್ಸ ನಂದಿತಾ” ನಟಿಗೆ ಇದೆ ವಿಚಿತ್ರ ಕಾಯಿಲೆ; ನಿದ್ರೆ ಬರಲ್ಲ.. ವ್ಯಾಯಾಮ ಮಾಡುವಂತಿಲ್ಲ!
‘ಯಾರಾದರೂ ನಿಮ್ಮನ್ನು ನೋಡಿ ನಗುತ್ತಿದ್ದರೆ, ಅದು ಅವಮಾನ ಆಗುತ್ತದೆ. ಕಪಿಲ್ ಶರ್ಮಾ ಅವರೊಂದಿಗೆ ತೆರೆಮರೆಯಲ್ಲಿ ಎಲ್ಲವೂ ಮೋಜು ಮತ್ತು ಆಟವಾಗಿರುತ್ತದೆ. ಆದರೆ ಅವರಿಗೆ ಎಲ್ಲವೂ ಹಾಸ್ಯವಾಗಿಯೇ ಕಾಣುವುದು ದುರದೃಷ್ಟಕರ. ಏನೂ ಸಿಗದಾಗ ಅವರು ನನ್ನ ಶರೀರದ ಭಾಗವನ್ನು ಗೇಲಿ ಮಾಡಿದ್ದರು. ಈ ರೀತಿ ಕಮೆಂಟ್ ಮಾಡಿರುವ ಬಗ್ಗೆ ಎಲ್ಲರೂ ಆಡಿಕೊಳ್ಳುವಂತಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?
‘ಈ ಘಟನೆಯ ಬಳಿಕ ನನಗೆ ತೀವ್ರ ಅವಮಾನವಾಗಿ ಕುಸಿದು ಹೋದೆ. ಘಟನೆಯ ನಂತರ ಅರ್ಚನಾ ಪುರಣ್ ಸಿಂಗ್ ಅವರು ತಮ್ಮ ಕೂರಿಸಿ ಸಮಾಧಾನಪಡಿಸಿದರು. ಆದರೂ ನನ್ನ ನೋವು ಕಡಿಮೆ ಆಗಿರಲಿಲ್ಲ’ ಎಂದು ಸುಮೋನಾ ಹೇಳಿದ್ದಾರೆ.
ಇದನ್ನೂ ಓದಿ:VIDEO | ಮಮ್ಮಿ..ಮಮ್ಮಿ.. ಮಗುವಿನ ಕೂಗು ತಾಯಿಗೆ ಕೇಳಿಸಲಿಲ್ಲ; ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಮಹಿಳೆ ಸಾವು!
ಈ ಶೋನಲ್ಲಿ ಕಪಿಲ್ ಮತ್ತು ಸುಮೋನಾ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಸುಮೋನಾ ಮತ್ತು ಕಪಿಲ್ ಉತ್ತಮ ಸ್ನೇಹಿತರೇ. ತಮಾಷೆ ಮಾಡುವ ಮೂಲಕ ತಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಎಂದು ಸುಮೋನಾ ಹೇಳಿದ್ದಾರೆ.
“ನಂದ ಲವ್ಸ ನಂದಿತಾ” ನಟಿಗೆ ಇದೆ ವಿಚಿತ್ರ ಕಾಯಿಲೆ; ನಿದ್ರೆ ಬರಲ್ಲ.. ವ್ಯಾಯಾಮ ಮಾಡುವಂತಿಲ್ಲ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + seven =
Remember me
