ವಾಷಿಂಗ್ಟನ್‌:ಸೂರ್ಯನಿಗೆ ಅತ್ಯಂತ ಹತ್ತಿರದಿಂದ ತೆಗೆದಿರುವ ಚಿತ್ರಗಳನ್ನು ನಾಸಾ ತನ್ನ ಟ್ವಿಟರ್‌ ಖಾತೆಯಲ್ಲಿ ಷೇರ್‌ ಮಾಡಿದೆ. ಈ ಚಿತ್ರವನ್ನು ಸೂರ್ಯನಿಂದ ಸುಮಾರು 4.8 ಕೋಟಿ ಕಿಲೋ ಮೀಟರ್‌ ದೂರದಿಂದ ಕ್ಲಿಕ್ಕಿಸಲಾಗಿದೆ.
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಹಾಗೂ ಯೂರೋಪಿಯನ್‌ ಬಾಹ್ಯಾಕಾಶ ಏಜೆನ್ಸಿಗಳ ಜಂಟಿ ಸಹಯೋಗದಲ್ಲಿ ಸೂರ್ಯನ ಸುತ್ತ ಗಿರಕಿ ಹೊಡೆಯುವ ಆರ್ಬಿಟರ್‌ನಿಂದ ಈ ಫೋಟೋ ತೆಗೆದುಕೊಳ್ಳಲಾಗಿದೆ.
ಸಂಪೂರ್ಣ ಸೌರಮಂಡಲದಲ್ಲಿನ ವಾತಾವರಣವನ್ನು ಸೂರ್ಯನ ತಾಪಮಾನ ಹೇಗೆ ನಿಯಂತ್ರಿಸುತ್ತದೆ ಎಂದು ಅರಿಯಲು ವಿಜ್ಞಾನಿಗಳಿಗೆ ಈ ಚಿತ್ರಗಳು ನೆರವಾಗಲಿವೆ. ಈ ಫೋಟೋದ ಆಧಾರದ ಮೇಲೆ ಭೂಮಿ ಹಾಗೂ ಸೂರ್ಯನ ಕುರಿತಂತೆ ಹಲವಾರು ಸಂಶೋಧನೆಗಳು ನಡೆಯಲಿವೆ ಎಂದಿದ್ದಾರೆ ಸಂಶೋಧಕರು.
ಅದೇ ರೀತಿ ಸೂರ್ಯನ ಕುರಿತಾದ ಹಲವಾರು ಕುತೂಹಲಗಳಿಗೆ ತೆರೆ ಬೀಳಲಿದ್ದು, ಈ ಚಿತ್ರ ನಮಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಡಲಿದೆ ಎಂದಿದ್ದಾರೆ.
☀️ As today's spacewalk continues, scientists back on Earth are about to reveal the closest images ever taken of the Sun from our joint@ESASolarOrbitermission with@ESA. Watch LIVE:https://t.co/cr1hhIVsO1pic.twitter.com/itWqMGhSab
— NASA (@NASA)July 16, 2020

ಈ ಲಿಂಕ್‌ ಕ್ಲಿಕ್‌ ಮಾಡಿದರೆ ಸಂಪೂರ್ಣ ವಿವರ ಪಡೆಯಬಹುದು.https://www.nasa.gov/solarorbiterfirstlight/
ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಪ್ರತಾಪ್ ಎಸ್ಕೇ‍ಪ್‌! ದಾಖಲಾಯ್ತು ಇನ್ನೊಂದು ಎಫ್‌ಐಆರ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
