ಲಖನೌ:ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ಆತಂಕ ದಿನೇದಿನೆ ಹೆಚ್ಚಾಗುತ್ತಿದೆ. ಸೋಂಕಿತ ಪ್ರಕರಣಗಳ ಜತೆಗೆ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ಅನೇಕ ರಾಜ್ಯಗಳು ಕಠಿಣ ಕ್ರಮಗಳ ಮೊರೆ ಹೋಗುತ್ತಿವೆ.
ಇದೀಗ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದೆ. ಮಾಸ್ಕ್​ ಧರಿಸದೆ ಎರಡನೇ ಬಾರಿ ಸಿಕ್ಕಿಕೊಂಡರೆ 10 ಸಾವಿರ ರೂ. ದಂಡ ವಿಧಿಸಿ ಎಂದು ಸಿಎಂ ಯೋಗಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಭಾನುವಾರದ ಲಾಕ್​ಡೌನ್​ನಂತಹ ಕಠಿಣ ಕ್ರಮವನ್ನು ಜಾರಿ ಮಾಡಲಾಗಿದೆ.
ಇದನ್ನೂ ಓದಿರಿ:ಮದುವೆ ಡ್ರೆಸ್​ ಬದಲು ಮೈತುಂಬಾ ಬ್ಯಾಂಡೇಜ್​ ಹಾಕ್ಕೊಂಡು ಬಂದ ಮದುಮಗ- ವಧು ನೀಡಿದಳು ಸಮಜಾಯಿಷಿ
ಮಾಸ್ಕ್​ ಇಲ್ಲದೆ ಮೊದಲ ಬಾರಿ ಸಿಕ್ಕಿಕೊಂಡರೆ 1000 ರೂಪಾಯಿ ದಂಡ ವಿಧಿಸಲಾಗುವುದು. ಒಂದು ವೇಳೆ ಎರಡನೇ ಬಾರಿ ಸಿಕ್ಕಿಕೊಂಡರೆ 10 ಸಾವಿರ ದಂಡ ತೆರಬೇಕಾಗುತ್ತದೆ. ಭಾನುವಾರ ಅಗತ್ಯ ಸೇವೆಗಳು ಮತ್ತು ಕೆಲವೊಂದು ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳು ಲಾಕ್​ ಆಗಲಿದೆ.
ನಿನ್ನೆಯಷ್ಟೇ ಮೇ 15ರವರೆಗೆ ಶಾಲೆಗಳನ್ನು ಬಂದ್​ ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಬೋರ್ಡ್​ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉತ್ತರ ಪ್ರದೇಶದಲ್ಲಿ ಗುರುವಾರ 22,439 ಹೊಸ ಪ್ರಕರಣಗಳು ಮತ್ತು 104 ಸಾವು ವರದಿಯಾಗಿದ್ದು, ಎರಡನೇ ಅಲೆಯ ಆತಂಕ ಹೆಚ್ಚಾಗಿದೆ.(ಏಜೆನ್ಸೀಸ್​)
“ಮಹಿಳೆಯೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ ಆಗುವ ಕಾಲ ಬಂದಿದೆ”

ಸರ್ಕಾರಿ ಶಾಲಾ ಶಿಕ್ಷಕನಿಂದ ವಿದ್ಯಾರ್ಥಿನಿ ಕಿಡ್ನ್ಯಾಪ್​: ಆರೋಪಿ ಕೊಟ್ಟ ಕಾರಣ ಕೇಳಿ ದಂಗಾದ ಪೊಲೀಸರು!

ಮದುವೆ ಡ್ರೆಸ್​ ಬದಲು ಮೈತುಂಬಾ ಬ್ಯಾಂಡೇಜ್​ ಹಾಕ್ಕೊಂಡು ಬಂದ ಮದುಮಗ- ವಧು ನೀಡಿದಳು ಸಮಜಾಯಿಷಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 3 =
Remember me
