ಮುಂಬೈ:ಬಾಲಿವುಇಡ್​ನಲ್ಲಿ ತನ್ನದೇ ಆಗಿರುವ ಚಾಪು ಮೂಡಿಸಿರುವ ಸುನೀಲ್‌ ಶೆಟ್ಟಿ  ಅವರು ಮುಂಬೈನಲ್ಲಿ ತಮ್ಮ ತಂದೆ ವೀರಪ್ಪ ಶೆಟ್ಟಿ  ಅವರು ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಮಾಲೀಕರಾಗಿದ್ದಾರೆ.   ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ಕಾರಣವಾಗಿದೆ.
ಮನೆಯಲ್ಲಿನ ಬಡತನ, ಹೆಚ್ಚಿದ ಜವಾಬ್ದಾರಿಗಳಿಂದಾಗಿ ವೀರಪ್ಪ ಶೆಟ್ಟಿ ಅವರು ಮುಂಬೈಗೆ ತೆರಳಿದ್ದರು. ಮುಂಬೈನ ಖಂಡಾಲದಲ್ಲಿರುವ ರೆಸ್ಟೋರೆಂಟ್‌ ಒಂದರಲ್ಲಿ ಅವರು ವೇಟರ್‌ ಆಗಿ ಸೇರಿಕೊಂಡು, ಬಳಿಕ ಅದರಲ್ಲಿಯೇ ಮ್ಯಾನೇಜರ್‌ ಆಗಿದ್ದರು.
ಈಗ ರೆಸ್ಟೋರೆಂಟ್‌ನ ಸೇರಿ ಮೂರು ಕಟ್ಟಡಗಳು ಇರುವ ಜಾಗವು ಫಾರ್ಮ್‌ಹೌಸ್‌ ಆಗಿ ಬದಲಾಗಿದ್ದು, ಮೂರೂ ಕಟ್ಟಡಗಳಿಗೆ ಸುನೀಲ್‌ ಶೆಟ್ಟಿ ಅವರೇ ಮಾಲೀಕರಾಗಿದ್ದಾರೆ. ಸುಮಾರು 83 ಕೋಟಿ ರೂ. ಕೊಟ್ಟು ಫಾರ್ಮ್‌ಹೌಸ್‌ಅನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. “ನನ್ನ ತಂದೆ ಬಡವರಾಗಿದ್ದರು. ಇಲ್ಲಿ ದಕ್ಷಿಣ ಭಾರತದ ರೆಸ್ಟೋರೆಂಟ್‌ನಲ್ಲಿ ಟೇಬಲ್‌ ಕ್ಲೀನ್‌ ಮಾಡುವುದು, ಊಟ-ತಿಂಡಿ ಸರಬರಾಜು ಮಾಡುವುದು ಅವರ ಕೆಲಸವಾಗಿತ್ತು. ಬಳಿಕ ಅವರು ಮ್ಯಾನೇಜರ್‌ ಕೂಡ ಆದರು. ಈಗ ರೆಸ್ಟೋರೆಂಟ್‌ ಸೇರಿ ಮೂರು ಕಟ್ಟಡಗಳನ್ನು ನಾನು ಖರೀದಿಸಿದ್ದೇನೆ” ಎಂಬುದಾಗಿ ಬಾಲಿವುಡ್‌ ನಟ ಹೇಳಿದ್ದಾರೆ. ಸುನೀಲ್‌ ಶೆಟ್ಟಿ ಅವರ ತಂದೆ 2017ರಲ್ಲಿ ನಿಧನರಾದರು.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:16 − 13 =
Remember me
