ಮುಂಬೈ :ಬಾಲಿವುಡ್​ ನಟ ಸುನೀಲ್​ ಶೆಟ್ಟಿ ವಾಸಿಸುವ ಮುಂಬೈನ ಅಪಾರ್ಟ್​ಮೆಂಟ್​ ಕಟ್ಟಡವನ್ನು ಬೃಹನ್​ಮುಂಬೈ ಮುನಿಸಿಪಲ್ ಕಾರ್ಪೋರೇಷನ್(ಬಿಎಂಸಿ) ಸೀಲ್ ಮಾಡಿದೆ. ಕಟ್ಟಡದ ಕೆಲವು ನಿವಾಸಿಗಳಲ್ಲಿ ಕೋವಿಡ್ 19 ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಪೃಥ್ವಿ ಅಪಾರ್ಟ್​ಮೆಂಟ್ಸ್​ ಕಟ್ಟಡವನ್ನು ಸೀಲ್ ಮಾಡಲಾಗಿದೆ. ಇಲ್ಲಿನ ನಿವಾಸಿಗಳಾಗಿರುವ ನಟ ಸುನಿಲ್ ಶೆಟ್ಟಿ ಅವರ ಇಡೀ ಕುಟುಂಬ ಸುರಕ್ಷಿತವಾಗಿದೆ ಎಂದು ಬಿಎಂಸಿ ಸಹಾಯಕ ಆಯುಕ್ತ ಪ್ರಶಾಂತ್ ಗಾಯಕ್​ವಾಡ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯಾವುದೇ ವಸತಿ ಸಮುಚ್ಛಯದಲ್ಲಿ ಐದಕ್ಕಿಂತ ಹೆಚ್ಚು ಕರೊನಾ ಕೇಸುಗಳು ವರದಿಯಾದಲ್ಲಿ ಅದನ್ನು ಸೀಲ್ ಮಾಡಿ, ಮೈಕ್ರೋಕಂಟೈನ್​ಮೆಂಟ್ ಜೋನ್​ ಆಗಿ ಘೋಷಿಸಲಾಗುತ್ತದೆ. ಬಿಎಂಸಿ ಪ್ರೋಟೋಕಾಲ್​ ಪ್ರಕಾರ ಸೊಸೈಟಿಯ ಗೇಟಿನ ಮೇಲೆ ಈ ಬಗ್ಗೆ ಫಲಕ ಹಾಕಿ, ಹೊರಗಿನವರಿಗೆ ಪ್ರವೇಶ ನಿರಾಕರಿಸಬೇಕಾಗಿರುತ್ತದೆ.(ಏಜೆನ್ಸೀಸ್)
ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 28 ಗೋವುಗಳ ರಕ್ಷಣೆ

98 ಕೋಟಿ ರೂ. ಆಸ್ತಿಯನ್ನು ವಕ್ಫ್​ ಬೋರ್ಡ್​ಗೆ ಕೊಟ್ಟರೇ, ನಟ ದಿಲೀಪ್​ ಕುಮಾರ್? ವೈರಲ್ ಪೋಸ್ಟ್​ನ ಅಸಲಿಯತ್ತೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 7 =
Remember me
