ನವದೆಹಲಿ:ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್​ಎಸ್​)ದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಮತ್ತು ಬಚ್​ ವಿಲ್ಮೋರ್ ಭೂಮಿಗೆ ಬರುವುದು ಸದ್ಯಕ್ಕೆ ವಿಳಂಬವಾಗಲಿದೆ. ಮುಂದಿನ ವರ್ಷ ಅಂದರೆ, 2025ರ ಫೆಬ್ರವರಿಯಲ್ಲಿ ಬೋಯಿಂಗ್​ ಸ್ಟಾರ್​ಲೈನರ್ (Boeing’s Starliner)​ ಬದಲಾಗಿ ಸ್ಪೇಸ್​ಎಕ್ಸ್​ ಕ್ರ್ಯೂ​ ಡ್ರ್ಯಾಗನ್ (SpaceX’s Crew Dragon) ಸ್ಪೇಸ್​ ಕ್ಯಾಪ್ಸುಲ್​ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ ಎಂದು ನಾಸಾ (NASA)ತಿಳಿಸಿದೆ.
ಸ್ಟಾರ್​ಲೈನರ್​ ಸ್ಪೇಸ್​ ಕ್ಯಾಪ್ಸುಲ್​​ನ ಸುರಕ್ಷತಾ ಮೌಲ್ಯಮಾಪನದ ವೇಳೆ ಸಾಕಷ್ಟು ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಸಾ ಈ ನಿರ್ಧಾರವನ್ನು ಪ್ರಕಟಿಸಿದೆ. ಕಳೆದ ಜೂನ್​ ತಿಂಗಳಲ್ಲಿ ಬೋಯಿಂಗ್​ ಸ್ಟಾರ್​ಲೈನರ್​ ಕ್ಯಾಪ್ಸುಲ್​ ಮೂಲಕ ಇಬ್ಬರು ಗಗನಯಾತ್ರಿಗಳನ್ನು ಐಎಸ್​ಎಸ್​ಗೆ ಕಳುಹಿಸಲಾಯಿತು. ಇದು ಬೋಯಿಂಗ್​ ಸ್ಟಾರ್​ಲೈನರ್​ನ ಮೊದಲ ಸಿಬ್ಬಂದಿ ಕಾರ್ಯಾಚರಣೆಯಾಗಿದೆ.
ಆರಂಭದಲ್ಲಿ ಗಗನಯಾತ್ರಿಗಳ ಕಾರ್ಯಾಚರಣೆ ಕೇವಲ 8 ದಿನಗಳವರೆಗೆ ಮಾತ್ರ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸ್ಟಾರ್​ಲೈನರ್​ನಲ್ಲಿರುವ ಪ್ರೊಪಲ್ಶನ್ ಸಿಸ್ಟಮ್​ನಲ್ಲಿನ ತೊಂದರೆಯ ಕಾರಣದಿಂದಾಗಿ ಕಾರ್ಯಾಚರಣೆ ಅವಧಿಯನ್ನು ವಿಸ್ತರಿಸಲಾಯಿತು. ಕ್ಯಾಪ್ಸುಲ್​ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಬಳಿಕ ಮೊದಲೇ ಪ್ಲಾನ್​ ಮಾಡಿದಂತೆ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವ ಬಾಹ್ಯಾಕಾಶ ನೌಕೆಯ ಸಾಮರ್ಥ್ಯದ ಬಗ್ಗೆ ಇದೀಗ ಕಳವಳವನ್ನು ಹೆಚ್ಚಿಸಿವೆ.
ಥಸ್ಟರ್​ ವಿಫಲ ಮತ್ತು ಹೀಲಿಯಂ ಸೋರಿಕೆಯಂತಹ ಸಮಸ್ಯೆಗಳನ್ನು ಒಳಗೊಂಡಂತೆ ಸದ್ಯಕ್ಕೆ ಕ್ಯಾಪ್ಸುಲ್​ನಲ್ಲಿ ಕಾಣಿಸಿಕೊಂಡಿರುವ ತೊಂದರೆಗಳನ್ನು ನಿವಾರಿಸಲು ಬೋಯಿಂಗ್​ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ. ಇತ್ತೀಚಿಗೆ ಬಂದ ಪರೀಕ್ಷೆಯ ಡೇಟಾ ಪ್ರಕಾರ ಕ್ಯಾಪ್ಸುಲ್​ನಲ್ಲಿನ ಥ್ರಸ್ಟರ್‌ಗಳ ಮಿತಿಮೀರಿದ ಶಾಖವು ಟೆಫ್ಲಾನ್ ಸೀಲ್‌ಗಳ ತಿರುಚಿಗೆ ಕಾರಣವಾಗಿದೆ ಮತ್ತು ಪ್ರೊಪೆಲ್ಲಂಟ್ ಹರಿವನ್ನು ನಿರ್ಬಂಧಿಸಿದ್ದು, ಒತ್ತಡವನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಸ್ಟಾರ್‌ಲೈನರ್ ಕ್ಯಾಪ್ಸುಲ್​ ಹಿಂದಿರುಗುವಿಕೆಯಿಂದಾಗುವ ಅಪಾಯಗಳನ್ನು ಒಪ್ಪಿಕೊಳ್ಳಬೇಕೆ ಅಥವಾ ಅದರ ಬದಲು ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್​ನಂತಹ ಸುರಕ್ಷಿತ ಪರ್ಯಾಯವನ್ನು ಆರಿಸಿಕೊಳ್ಳಬೇಕೆ ಎಂಬುದರ ಕುರಿತು ನಾಸಾದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ನಾಸಾ, ಸ್ಟಾರ್‌ಲೈನರ್‌ನ ಕಾರ್ಯಾಚರಣೆಯನ್ನು ಬದಲಾಯಿಸಲು ನಿರ್ಧರಿಸಿದರೆ, ಬೋಯಿಂಗ್ ಕ್ಯಾಪ್ಸುಲ್​ ಅನ್ನು ಸಿಬ್ಬಂದಿಯಿಲ್ಲದೆ ವಾಪಸ್​ ಭೂಮಿ ಕರೆತರಲು ಕಾನ್ಫಿಗರ್ ಮಾಡಲಿದೆ. ಅಲ್ಲದೆ, ಇದು ಬೋಯಿಂಗ್​ಗೆ ಹಿನ್ನಡೆಯಾಗಲಿದೆ. ನಿರ್ವಹಣೆಯ ಸಮಸ್ಯೆಗಳು ಮತ್ತು ಇಂಜಿನಿಯರಿಂಗ್ ಸಮಸ್ಯೆಗಳನ್ನು ಒಳಗೊಂಡಂತೆ ಸ್ಟಾರ್ಲೈನರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ಟಾರ್‌ಲೈನರ್‌ ಕ್ಯಾಪ್ಸುಲ್​ ಅಭಿವೃದ್ಧಿ ಪಡಿಸಲು ಪ್ರಸ್ತುತ ಪರೀಕ್ಷಾ ಕಾರ್ಯಾಚರಣೆಗಾಗಿ 125 ಮಿಲಿಯನ್ ಡಾಲರ್​ ಸೇರಿದಂತೆ ಬೋಯಿಂಗ್‌ಗೆ 2016 ರಿಂದ 1.6 ಶತಕೋಟಿ ಡಾಲರ್​ ವೆಚ್ಚವಾಗಿದೆ.
ವಿಲ್ಮೋರ್ ಮತ್ತು ವಿಲಿಯಮ್ಸ್‌ಗಾಗಿ ಮುಂಬರುವ ಕ್ರೂ ಡ್ರ್ಯಾಗನ್ ಉಡಾವಣೆಯಲ್ಲಿ ಎರಡು ಸ್ಥಾನಗಳನ್ನು ಖಾಲಿ ಬಿಡಲು ನಾಸಾ ಸ್ಪೇಸ್‌ಎಕ್ಸ್‌ನೊಂದಿಗೆ ಸಂಭಾವ್ಯ ಯೋಜನೆಗಳನ್ನು ಚರ್ಚಿಸುತ್ತಿದೆ. 2025ರ ಆರಂಭದಲ್ಲಿ ಗಗನಯಾತ್ರಿಗಳನ್ನು ಭೂಮಿಗೆ ಮರಳಿ ತರಲು 2024ರ ಸೆಪ್ಟೆಂಬರ್​ನಲ್ಲಿ ಉಡಾವಣೆ ಮಾಡಲು ನಿಗದಿಪಡಿಸಲಾದ ಸ್ಪೇಸ್​ಎಕ್ಸ್​ನ ಕ್ರ್ಯೂ-9 ಮಿಷನ್ ಅನ್ನು ಬಳಸುವುದನ್ನು ಈ ಯೋಜನೆ ಒಳಗೊಂಡಿರುತ್ತದೆ. ಸ್ಟಾರ್​ಲೈನರ್​ ಕ್ಯಾಪ್ಸುಲ್ ಅನ್ನು ಐಎಸ್​ಎಸ್​ಗೆ ಗರಿಷ್ಠ 90 ರಿಂದ 63 ದಿನಗಳವರೆಗೆ ಡಾಕ್ ಮಾಡಲಾಗಿದೆ. ಮುಂಬರುವ ಕಾರ್ಯಾಚರಣೆಗಾಗಿ ಕ್ರ್ಯೂ ಡ್ರ್ಯಾಗನ್ ಬಳಸಬೇಕಾದ ಅದೇ ಪೋರ್ಟ್ ಅನ್ನು ಸ್ಟಾರ್​ಲೈನರ್​ ಆಕ್ರಮಿಸಿಕೊಂಡಿದ್ದು, ಈ ಯೋಜನೆಗಳನ್ನು ಸರಿಹೊಂದಿಸಲು ನಾಸಾ ಈಗಾಗಲೇ ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ಮಿಷನ್ ಅನ್ನು ಒಂದು ತಿಂಗಳಿಗಿಂತ ಹೆಚ್ಚು ವಿಳಂಬಗೊಳಿಸಿದೆ.
ಸದ್ಯಕ್ಕೆ ನಾಸಾದ ಸಿಬ್ಬಂದಿ ಸ್ಟಾರ್‌ಲೈನರ್ ಕ್ಯಾಪ್ಸುಲ್​ ಮೇಲ್ವಿಚಾರಣೆ ನಡೆಸುತ್ತಿದ್ದು, ಹೆಚ್ಚುವರಿ ಪರೀಕ್ಷೆಯನ್ನು ನಡೆಸಲು ಮತ್ತು ಹೆಚ್ಚಿನ ಡೇಟಾವನ್ನು ಸಂಗ್ರಹಿಸಲು ಹೆಚ್ಚಿನ ಸಮಯ ಬೇಕಾಗಿದೆ. ಸ್ಟಾರ್‌ಲೈನರ್ ಅಥವಾ ಕ್ರೂ ಡ್ರ್ಯಾಗನ್ ಅನ್ನು ಬಳಸಬೇಕೆ ಎಂಬ ನಿರ್ಧಾರವನ್ನು ಮುಂದಿನ ವಾರದಲ್ಲಿ ನಾಸಾ ತೆಗೆದುಕೊಳ್ಳಲಿದೆ. ಹೀಗಾಗಿ ವಿಲ್ಮೋರ್​ ಮತ್ತು ವಿಲಿಯಮ್ಸ್​ ಭೂಮಿಗೆ ಬರುವುದು ವಿಳಂಬವಾಗಲಿದೆ.(ಏಜೆನ್ಸೀಸ್​)
ಲಂಕಾ ಬೌಲರ್​ಗೆ ವಿಂಟೇಜ್​ ವಿರಾಟರೂಪ ತೋರಿದ ಕೊಹ್ಲಿ: ಮುಂದೈತೆ ಮಾರಿಹಬ್ಬ ಅಂದ್ರು ಫ್ಯಾನ್ಸ್​

ವಯನಾಡು ದುರಂತದಿಂದ ಅನಾಥರಾದ ಯುವತಿಯರಿಗೆ ಹೊಸ ಬದುಕು ನೀಡಲು ಮುಂದೆ ಬಂದ ಯುವಕರು!

ಸಾಧನೆಗೆ ಬಡತನ ಅಡ್ಡಿಯಲ್ಲ: ಏಕಕಾಲದಲ್ಲಿ ಮೂರು ಸರ್ಕಾರಿ ಕೆಲಸ ಗಿಟ್ಟಿಸಿದ ರೈತನ ಮಗಳು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen + eight =
Remember me
