ಮುಂಬೈ:ಬಾಲಿವುಡ್​ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್​​-ಅಮೀಶಾ ಪಟೇಲ್​ ಅಭಿನಯದ ಗದರ್​​-2 ಚಿತ್ರವು ಬಿಡುಗಡೆಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಸಿನಿ ರಸಿಕರ ಗಮನ ಸೆಳೆಯುತ್ತಿದ್ದು, ಇದೀಗ ಹೊಸ ದಾಖಲೆಯೊಂದನ್ನು ನಿರ್ಮಿಸಿದೆ.
ಬಿಡುಗಡೆಯಾದ ಎಂಟು ದಿನಗಳಲ್ಲಿ ಚಿತ್ರವೂ 308.50 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ದೇಶೀಯಾ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ಬಾಕ್ಸ್​ಆಫೀಸ್​ ಪಂಡಿತರು ಗದರ್​-2 ಚಿತ್ರದ ಯಶಸ್ಸನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಒಂದು ವಾರ ಕಳೆಯುವುದರಲ್ಲಿ 300 ಕೋಟಿ ರೂಪಾಯಿ ಕಮಾಯಿ ಮಾಡುವುದು ಎಂದರೆ ಸುಲಭದ ಮಾತಲ್ಲ. ದಕ್ಷಿಣ ಭಾರತದ ಸಿನಿಮಾಗಳ ಪ್ರಭಾವದ ಎದುರು ಬಾಲಿವುಡ್​ ಚಿತ್ರಗಳ ಮಾರುಕಟ್ಟೆ ಕೊಂಚ ಡಲ್​ ಆಗಿತ್ತು ಎಂದೇ ಹೇಳಬಹುದು. ಚಿತ್ರ ಇಷ್ಟರಮಟ್ಟಿಗೆ ಕಲೆಕ್ಷನ್​ ಮಾಡುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ.
H-I-S-T-O-R-I-C…#Gadar2puts up a SENSATIONAL TOTAL in Week 1… Will hit ₹ 300 cr TODAY [second Fri]… Fri 40.10 cr, Sat 43.08 cr, Sun 51.70 cr, Mon 38.70 cr, Tue 55.40 cr, Wed 32.37 cr, Thu 23.28 cr. Total: ₹ 284.63 cr.#Indiabiz.The#BOperformance of#Gadar2is a…pic.twitter.com/MXb5vqjGE6
ಇದನ್ನೂ ಓದಿ:ಕವಾಡಿಗರಹಟ್ಟಿ ವಿಷಜಲ ಪ್ರಕರಣ; ಮೃತರ ಸಂಖ್ಯೆ ಏಳಕ್ಕೆ ಏರಿಕೆ
ಗದರ್​-2 ಚಿತ್ರದ ಯಶಸ್ಸಿನಿಂದ ಬಾಲಿವುಡ್​ ಅಂಗಳದಲ್ಲಿ ಹೊಸ ಚೈತನ್ಯ ಮೂಡಿದ್ದು, ನಟ ಸನ್ನಿ ಡಿಯೋಲ್​ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸಿನಿಮಾದ ಅಬ್ಬರ ಸದ್ಯಕ್ಕೆ ನಿಲ್ಲುವ ಯಾವುದೇ ಸೂಚನೆ ಕಂಡು ಬಂದಿಲ್ಲ. ಶುಕ್ರವಾರವೂ ಸಹ ಅನೇಕ ಕಡೆ ಚಿತ್ರಮಂದಿರಗಳು ಹೌಸ್​ಫುಲ್​ ಆಗಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಕಲೆಕ್ಷನ್​ ಮಾಡುವ ಸಾಧ್ಯತೆ ದಟ್ಟವಾಗಿದೆ.
ಸಾಲು ಸಾಲು ರಜೆಯ ಲಾಭ ಪಡೆದ ಚಿತ್ರತಂಡವು ಅದನ್ನು ಸದುಪಯೋಗಪಡಿಸಿಕೊಂಡಿದೆ. ಅಕ್ಷಯ್​ ಕುಮಾರ್​ ನಟನೆಯ OMG-2 ಹಾಗೂ ಸೂಪರ್​ಸ್ಟಾರ್​ ರಜಿನಿಕಾಂತ್​ ಅಭಿನಯದ ಜೈಲರ್​ ಸಿನಿಮಾಗಳ ಪೈಪೋಟಿ ನಡುವೆ ಚಿತ್ರ ಮುನ್ನುಗ್ಗುತ್ತಿರುವುದು ಮತ್ತಷ್ಟು ವಿಶೇಷವೆನಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eighteen =
Remember me
