ನವದೆಹಲಿ: ಬಾಲಿವುಡ್ ನಟ ಸನ್ನಿ ಡಿಯೋಲ್ ಕೆಲವು ದಿನಗಳ ಹಿಂದೆ ‘ಗದರ್ 2’ ಚಿತ್ರದ ಮೂಲಕ ಸುದ್ದಿಯಲ್ಲಿದ್ದರು. ಸದಾ ತನ್ನ ನಟನೆಯಿಂದಲೇ ಸುದ್ದಿಯಲ್ಲಿರುವ ಸನ್ನಿ ಡಿಯೋಲ್ ಸದ್ಯ ಬೇರೆ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ ನಟ ಸನ್ನಿ ಡಿಯೋಲ್ ಕಾಣೆಯಾಗಿದ್ದಾರೆ ಎನ್ನುವ ಕೆಲವು ಪೋಸ್ಟ್​ಗಳು ವೈರಲ್​ ಆಗಿವೆ.
ಪಂಜಾಬ್​​ನ ಪಠಾಣ್ ಕೋಟ್​​ನಲ್ಲಿ ಸನ್ನಿ ಡಿಯೋಲ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ ಗಳನ್ನು ಹಾಕಲಾಗಿದೆ. ಅವರನ್ನು ಪತ್ತೆ ಹಚ್ಚುವವರಿಗೆ 50 ಸಾವಿರ ರೂಪಾಯಿ ಬಹುಮಾನ ಸಿಗಲಿದೆ. ಇಂತಹ ಪೋಸ್ಟರ್ ಗಳನ್ನು ಹಾಕಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಸನ್ನಿ ಡಿಯೋಲ್ ನಾಪತ್ತೆಯಾಗಿದ್ದಾರೆ ಎಂದು ಪೋಸ್ಟರ್ ಹಾಕಲಾಗಿತ್ತು.
‘Gumshuda Ki Talash’ MP Sunny Deol ‘Missing’ posters have appeared in Pathankot. Angry locals said, ‘We will give a reward of ₹50,000 to whoever finds MP Sunny Deol or arranges a meeting for us.’”
“Missing” posters of BJP MP and Bollywood actor Sunny Deol have appeared in…pic.twitter.com/8LO1kws9L8
— Gagandeep Singh (@Gagan4344)December 12, 2023

ಸನ್ನಿ ಡಿಯೋಲ್ ಬಾಲಿವುಡ್‌ನ ಪ್ರಸಿದ್ಧ ನಟ ಮತ್ತು ಲೋಕಸಭಾ ಸದಸ್ಯರೂ ಹೌದು. ಸನ್ನಿ ಡಿಯೋಲ್ ಗುರುದಾಸ್‌ಪುರ-ಪಠಾಣ್‌ಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ. ಸನ್ನಿ ಡಿಯೋಲ್ ಸಂಸದರಾದಾಗಿನಿಂದ ಈ ಕ್ಷೇತ್ರದಲ್ಲಿ ಒಮ್ಮೆಯೂ ಕಾಣಿಸಿಕೊಂಡಿರಲಿಲ್ಲ. ಇದರಿಂದ ಕ್ಷೇತ್ರದ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದರೊಂದಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
2019 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಸ್ಥಾನಕ್ಕೆ ಸ್ಪರ್ಧಿಸಿ, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸುನೀಲ್ ಜಾಖರ್ ಅವರನ್ನು 82,459 ಮತಗಳ ಅಂತರದಿಂದ ಸೋಲಿಸಿದ ಸನ್ನಿ, ಗುರುದಾಸ್‌ಪುರದಲ್ಲಿ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಗಮನ ಕೊಡಲು ಅಸಮರ್ಥತೆಯನ್ನು ಪ್ರದರ್ಶಿಸಿದ್ದಾರೆ.
ಪಠಾಣ್‌ಕೋಟ್ ಜಿಲ್ಲೆಯ ಹಲ್ಕಾ ಭೋವಾ ನಿವಾಸಿಗಳು ಭಾನುವಾರ (ಡಿಸೆಂಬರ್ 10) ಸರ್ನಾ ಬಸ್ ನಿಲ್ದಾಣದಲ್ಲಿ ಸನ್ನಿ ಡಿಯೋಲ್ ಕಾಣೆಯಾಗಿದ್ದಾರೆ ಎಂದು ಪೋಸ್ಟರ್‌ಗಳನ್ನು ಹಾಕಿದ್ದಾರೆ. ಈ ಹಿಂದೆ ಪಠಾಣ್‌ಕೋಟ್ ಜಿಲ್ಲೆ ಮತ್ತು ಸುಜಾನ್‌ಪುರದಲ್ಲಿ ಸನ್ನಿ ಡಿಯೋಲ್ ನಾಪತ್ತೆ ಕುರಿತು ಪೋಸ್ಟರ್‌ಗಳನ್ನು ಹಾಕಲಾಗಿತ್ತು.
ಸನ್ನಿ ಡಿಯೋಲ್ ಪಂಜಾಬ್‌ನ ಪಠಾಣ್‌ಕೋಟ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಚುನಾವಣೆಯ ನಂತರ ಒಮ್ಮೆಯೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಅವರು ಅಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂಬುದು ಅಲ್ಲಿನ ಜನರ ಆರೋಪ. ಇದರಿಂದಾಗಿ ಈ ರೀತಿ ಪ್ರತಿಭಟನೆ ನಡೆಸಿದ್ದಾರೆ. 2024ರ ಚುನಾವಣೆಯಲ್ಲಿ ಇಂತಹವರಿಗೆ ಯಾವುದೇ ಪಕ್ಷ ಟಿಕೆಟ್ ನೀಡಬಾರದು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ನ್ಯೂ ಇಯರ್​ಗೆ ಬೆಂಗಳೂರಿಗರಿಗೆ ನಶೆ ಏರಿಸಲು ಬಂದಿದ್ದ ಡ್ರಗ್​ ಫೆಡ್ಲರ್​​ ಅರೆಸ್ಟ್​

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three + 11 =
Remember me
