ಮುಂಬೈ:ಅಡ್ಮಿಟ್​ ಕಾರ್ಡ್​ನಲ್ಲಿ ಪೊಷಕರ ಕಾಲಂನಲ್ಲಿ ತಂದೆಯಾಗಿ ನಟ ಇಮ್ರಾನ್​​ ಹಶ್ಮಿ ಮತ್ತು ತಾಯಿಯಾಗಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಹೆಸರು ಬರೆದಿರುವ ಬಿಹಾರದ ಕಾಲೇಜು ವಿದ್ಯಾರ್ಥಿಗೆ ಸನ್ನಿ ಲಿಯೋನ್​ ನೀಡಿದ ಉತ್ತರ ಭಾರಿ ವೈರಲ್​ ಆಗಿದೆ.
ಧನರಾಜ್​ ಮಹತೋ ಡಿಗ್ರಿ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿ ಕುಂದನ್​ ಕುಮಾರ್​ (20) ಅಡ್ಮಿಟ್​ ಕಾರ್ಡ್​​​ ವೈರಲ್ ಆದ ಬೆನ್ನಲ್ಲೇ ಟ್ವೀಟ್​ ಮೂಲಕ ಸನ್ನಿ ಲಿಯೋನ್​ ಪ್ರತಿಕ್ರಿಯಿಸಿದ್ದಾರೆ. ಈ ಮಗು ನಿಜಕ್ಕೂ ಅದ್ಭುತ… ಇದು ದೊಡ್ಡ ಕನಸು ಕಾಣುವ ದಾರಿ ಅಹ್ಹಹ್ಹಾ ಎಂದು ಅಡ್ಮಿಟ್​ ಕಾರ್ಡ್​ ಫೋಟೋವನ್ನು ಶೇರ್​ ಮಾಡಿ ವಿದ್ಯಾರ್ಥಿಯ ಬಗ್ಗೆಯೇ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
This kids awsome !!!!! Way to dream big :)))))))) XO hahahahahttps://t.co/VEkTnsv4VT
— Sunny Leone (@SunnyLeone)December 12, 2020

ಇದಕ್ಕೂ ಮುಂಚೆ ಇಮ್ರಾನ್​ ಸಹ ಪ್ರತಿಕ್ರಿಯೆ ನೀಡಿದ್ದರು. ಅವನು ನಿಜಕ್ಕೂ ನನ್ನ ಮಗನಲ್ಲ ಎಂದು ನಾನು ಆಣೆ ಮಾಡುತ್ತೇನೆಂದು ಹಾಸ್ಯ ಚಟಾಕಿ ಹಾರಿಸಿದ್ದರು.
ಅಡ್ಮಿಟ್​ ಕಾರ್ಡ್​ ವೈರಲ್​ ಆಗುತ್ತಿದ್ದಂತೆ ಅದನ್ನು ನೋಡಿದ ಮುಜಾಫರ್​ಪುರದಲ್ಲಿರುವ ಬಿಹಾರದ ಬಾಬಾ ಸಾಹೇಬ್​ ಭೀಮ್​ರಾವ್​ ಅಂಬೇಡ್ಕರ್ ವಿಶ್ವವಿದ್ಯಾಲಯ ದಿಗ್ಭ್ರಾಂತಗೊಂಡಿದೆ. ವಾಸ್ತವವಾಗಿ ಪರೀಕ್ಷಾರ್ಥಿ ಕುಂದನ್ ಕುಮಾರ್​ ಧನರಾಜ್​ ಮಹತೋ ಡಿಗ್ರಿ ಕಾಲೇಜಿನ ವಿದ್ಯಾರ್ಥಿ.
ಕುಂದನ್​ ಕುಚೇಷ್ಟೇಯಿಂದ ತಂದೆಯ ಹೆಸರನ್ನು ಇಮ್ರಾನ್​ ಹಶ್ಮಿ ಹಾಗೂ ತಾಯಿಯ ಹೆಸರನ್ನು ಸನ್ನಿ ಲಿಯೋನ್​ ಎಂದು ಹೇಳಿದ್ದಾನೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಇದಕ್ಕೂ ನಿಜಕ್ಕೂ ತುಂಟಾಟವಾಗಿದೆ. ಇದಕ್ಕೆ ವಿದ್ಯಾರ್ಥಿಯೇ ನೇರ ಹೊಣೆಯಾಗಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್​ ರಾಮ್​ ಕೃಷ್ಣ ಠಾಕೂಲ್​ ಹೇಳಿದ್ದಾರೆ.
ಇಮ್ರಾನ್​ ಮತ್ತು ಸನ್ನಿ ಮಿಲನ್​ ಲುಥರಿಯಾ ನಿರ್ದೇಶನದ ಬಾದ್ಷಾಹೋ ಚಿತ್ರದ ಪಿಯಾ ಮೋರ್​ ಹಾಡಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದನ್ನು ಬಿಟ್ಟರೆ, ಮತ್ತೆ ಅವರಿಬ್ಬರು ಯಾವ ಚಿತ್ರದಲ್ಲೂ ಒಂದಾಗಿಲ್ಲ. ಇದೀಗ ಅಡ್ಮಿಟ್​ ಕಾರ್ಡ್​ ಘಟನೆ ಮತ್ತೆ ಅವರಿಬ್ಬರನ್ನೂ ಒಂದೇ ಹಾಳೆಯಲ್ಲಿ ಒಟ್ಟಿಗೆ ಸೇರಿಸಿದೆ.(ಏಜೆನ್ಸೀಸ್​)
ವಿಷ್ಣುವರ್ಧನ್ ಬಗ್ಗೆ ಕೀಳುಮಟ್ಟದ ಹೇಳಿಕೆ; ತೆಲುಗು ನಟನ ವಿರುದ್ಧ ಸಿಡಿದೆದ್ದ ಚಂದನವನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − nine =
Remember me
