ಬಿಹಾರ:ಇಲ್ಲಿನ ಸುಪೌಲ್‌ನಲ್ಲಿ ಮಾರ್ಚ್ 22 ರಂದು ಬೆಳಗ್ಗೆ ಸೇತುವೆಯ ಗಿರ್ಡರ್ ಕುಸಿದಿದೆ. ಇದರಿಂದ ಒರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇನ್ನು ಅನೇಕ ಕಾರ್ಮಿಕರು ಜಲ ಸಮಾಧಿಯಾಗಿರಬಹುದು ಎಂಬ ವರದಿಗಳಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾಗಿಲ್ಲವಾದರೂ ನೆರೆಹೊರೆಯವರು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಜಮಾಯಿಸಿದ್ದಾರೆ. ಈ ಸೇತುವೆಯನ್ನು ಸುಪೌಲ್‌ನ ಬಾಕೋರ್‌ನಲ್ಲಿ ನಿರ್ಮಿಸಲಾಗುತ್ತಿದೆ. ಅಪಘಾತದ ನಂತರ ಕಂಪನಿಯ ಕಡೆಯವರು ಪರಾರಿಯಾಗಿದ್ದಾರೆ.
ಬೆಳಗ್ಗೆ 7 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಸದ್ಯ ಸುಪೌಲ್ ಜಿಲ್ಲಾಡಳಿತ ತಿಳಿಸಿದೆ. 9 ಮಂದಿ ಗಾಯಗೊಂಡಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೂ ನೆರವು ನೀಡಲಾಗುವುದು. ಸಂಪೂರ್ಣ ತನಿಖೆಗೆ ಆದೇಶ ನೀಡಲಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ.
#BREAKING: बिहार के सुपौल में पुल का स्लैब गिरने से बड़ा हादसा
एक की मौत सात घायल
NHAI के द्वारा निर्माणाधीन पुल का स्पेन गिरा, कुछ लोगों के स्पेन के नीचे दबने की चर्चा#Bihar#Supaul#BiharNews#Breaking#Accident#Bridge#collapse#incidentpic.twitter.com/K2ffXr32ST
— mishikasingh (@mishika_singh)March 22, 2024

ಡಿಸೆಂಬರ್2024ರೊಳಗೆ ನಿರ್ಮಾಣಪೂರ್ಣ
ಮಾಹಿತಿಯ ಪ್ರಕಾರ, ಬಾಕೋರ್ ಸೇತುವೆಯ ಮೂರು ಪಿಲ್ಲರ್‌ಗಳ ಗಿರ್ಡರ್‌ಗಳು ಕುಸಿದಿದ್ದರಿಂದ ಈ ಅಪಘಾತ ಸಂಭವಿಸಿದೆ. ದೇಶದಲ್ಲೇ ನಿರ್ಮಾಣವಾಗುತ್ತಿರುವ ಅತಿ ಉದ್ದದ ರಸ್ತೆ ಸೇತುವೆ ಇದಾಗಿದೆ. ಇದನ್ನು ಗ್ಯಾಮನ್ ಇಂಡಿಯಾ ಮತ್ತು ಟ್ರಾನ್ಸ್ ರೈಲ್ ಲೈಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಎಂಬ ಎರಡು ಕಂಪನಿಗಳು ನಿರ್ಮಿಸುತ್ತಿವೆ. ಈ ಸೇತುವೆಯು 10.5 ಕಿಮೀ ಉದ್ದವಿದೆ. ಭಾರತ್ ಮಾಲಾ ಯೋಜನೆಯಡಿ ಇದನ್ನು ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣದ ವೆಚ್ಚ ಸುಮಾರು 1200 ಕೋಟಿ ರೂ.
ಸುಪೌಲ್‌ನ ಬಾಕೋರ್ ಮತ್ತು ಮಧುಬನಿ ಜಿಲ್ಲೆಯ ಭೇಜಾ ನಡುವೆ ನಿರ್ಮಿಸಲಾಗುತ್ತಿರುವ ಈ ಸೇತುವೆಯು 2024 ರ ವೇಳೆಗೆ ಪೂರ್ಣಗೊಳ್ಳಲಿದೆ. ಆದರೆ ಅಪಘಾತದ ನಂತರ, ನಿರ್ಮಾಣ ಏಜೆನ್ಸಿಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಭಾಗಲ್‌ಪುರ ಸೇತುವೆಯೂ ಕುಸಿದಿತ್ತುಇದಕ್ಕೂ ಮುನ್ನ ಜೂನ್‌ 2023ರಲ್ಲಿ ಭಾಗಲ್‌ಪುರ ಜಿಲ್ಲೆಯ ಅಗಾವಾನಿಯಿಂದ ಸುಲ್ತಂಗಂಜ್‌ ನಡುವೆ ಗಂಗಾ ನದಿಯ ಮೇಲೆ ನಿರ್ಮಾಣವಾಗುತ್ತಿದ್ದ ನಾಲ್ಕು ಪಥದ ಸೇತುವೆಯ ದೊಡ್ಡ ಭಾಗ ಕುಸಿದಿತ್ತು. ಸೇತುವೆ ಕುಸಿಯುತ್ತಿರುವ ಸದ್ದು ಎರಡು ಕಿಲೋಮೀಟರ್ ವರೆಗೆ ಕೇಳಿಸಿತ್ತು. ಸೇತುವೆ ಕುಸಿತದ ವಿಡಿಯೋ ಕೂಡ ಬಹಿರಂಗವಾಗಿತ್ತು. ಇದನ್ನು 1710 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಿಎಂ ನಿತೀಶ್ ಕುಮಾರ್ ಅವರ ಈ ಕನಸಿನ ಯೋಜನೆ ಡಿಸೆಂಬರ್ 2023 ರಲ್ಲಿ ಉದ್ಘಾಟನೆಯಾಗಬೇಕಿತ್ತು.
ಈ ಸೇತುವೆಯಲ್ಲಿ ಸಂಭವಿಸುತ್ತಿರುವ ಅಪಘಾತ ಇದೇ ಮೊದಲಲ್ಲ. ಏಪ್ರಿಲ್ 30, 2022 ರಂದು, ಸೇತುವೆಯ 36 ಚಪ್ಪಡಿಗಳು ಸಹ ಕುಸಿದವು. ಈ ಸೇತುವೆಯ ಶಂಕುಸ್ಥಾಪನೆಯನ್ನು ನಿತೀಶ್ ಕುಮಾರ್ ಅವರು ಫೆಬ್ರವರಿ 23, 2014 ರಂದು ನೆರವೇರಿಸಿದರು.
ಕವಿತಾ ಎದುರು ಕೂರಿಸಿಕೊಂಡು ಕೇಜ್ರಿವಾಲ್ ವಿಚಾರಣೆ ನಡೆಸ್ತಾರಾ, ಇಂದು ಏನೆಲ್ಲಾ ಬೆಳವಣಿಗೆ ಆಗಬಹುದು?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 17 =
Remember me
