ರಾಷ್ಟ್ರದಲ್ಲಿ ಏಪ್ರಿಲ್​ 8 ರಂದು ಸೂಪರ್​ ಮೂನ್​ (ಪ್ರಕಾಶಮಾನ ಚಂದ್ರ) ಗೋಚರಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.ಅಂದು ಬೆಳಗ್ಗೆ 8 ಗಂಟೆಗೆ ಸೂಪರ್​ ಮೂನ್​ ಗೋಚರಿಸಲಿದೆ. ಸೂರ್ಯನ ಬೆಳಕು ಇರುವುದರಿಂದ ವೀಕ್ಷಣೆಗೆ ತೊಡಕಾಗಲಿದೆ. ಏ.7 ರ ರಾತ್ರಿ ಉತ್ತರ ಅಮೆರಿಕಾ ಹಾಗೂ ಇತರ ರಾಷ್ಟ್ರಗಳಲ್ಲಿ ಕೂಡ ಪ್ರಕಾಶಮಾನ ಚಂದ್ರ ಗೋಚರಿಸಲಿದೆ.
ಸೂಪರ್ ಮೂನ್ ಎಂದರೇನು?: ಭೂಮಿಗೆ ಸಮೀಪದಲ್ಲಿ ಚಂದ್ರ ಪರಿಭ್ರಮಿಸುವಾಗ ಸಾಮಾನ್ಯ ಗಾತ್ರಕ್ಕಿಂತ ದೊಡ್ಡಗಾತ್ರದಲ್ಲಿ ಕಾಣಿಸುತ್ತದೆ. ಅಲ್ಲದೆ ಅತ್ಯಂತ ಪ್ರಕಾಶಮಾನವಾಗಿ ಕೂಡ ಕಾಣುತ್ತದೆ. ಇದನ್ನು ಸೂಪರ್​ ಮೂನ್​ ಎನ್ನಲಾಗುತ್ತದೆ. ಏಪ್ರಿಲ್​ 7ರ ರಾತ್ರಿ ಹಾಗೂ ಏಪ್ರಿಲ್​ 8ರ ಬೆಳಗ್ಗೆ ಚಂದ್ರ ಭೂಮಿಯಿಂದ 3,56, 000 ಕಿ.ಮೀ.ದೂರದಲ್ಲಿ ಪರಿಭ್ರಮಿಸುತ್ತದೆ.
ಬಹುತೇಕ ದಿನಗಳಲ್ಲಿ ಈ ಅಂತರ 3,84,000 ಕಿ.ಮೀ. ಇರುತ್ತದೆ. ಹೀಗಾಗಿ ಭೂಮಿಗೆ ಹತ್ತಿರದಲ್ಲಿ ಚಂದ್ರ ಸುತ್ತುವಾಗ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣುತ್ತದೆ. ಖಗೋಳಶಾಸ್ತ್ರಜ್ಞರ ಪ್ರಕಾರ 20 ವರ್ಷಗಳಲ್ಲಿ 79 ಬಾರಿ ಸೂಪರ್​ ಮೂನ್​ ಗೋಚರಿಸಿದೆ. ಅಂದರೆ ಸರಾಸರಿ 3 ತಿಂಗಳಿಗೊಮ್ಮೆ ಒಂದು ಸೂಪರ್​ ಮೂನ್​ ಗೋಚರಿಸುತ್ತದೆ. (ಏಜೆನ್ಸೀಸ್​)
ಚೆಫ್​ ಆದ ದೀಪಿಕಾ … ರಣವೀರ್‌ಗೆ ಅಡುಗೆ ಮಾಡಿ ಬಡಿಸಿದ ಸಪೂರ ಸುಂದರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
