ಬೆಂಗಳೂರು:ಬಿಗ್​ಬಾಸ್​​ ಮನೆಯ ಆಟ ರಂಗೆರಿದೆ. ಮೊದಲ ವಾರದ ಜಗಳ, ನಗು, ಆಟ, ಮನೆ ರೂಲ್ಸ್​​ ಇಟ್ಟುಕೊಂಡು ಮಾತನಾಡಿದ್ದರು ಕಿಚ್ಚ ಸುದೀಪ್​​. ಒಂಟಿಮನೆಯಲ್ಲಿ ಸ್ಪರ್ಧಿಗಳ ಪೈಕಿ ಮೊದಲ ವಾರದಲ್ಲೇ ಅತಿ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಎಂದರೆ ಅದು ಡ್ರೋನ್​ ಪ್ರತಾಪ್​. ನಿನ್ನೆ ಕಣ್ಣಿರಿಟ್ಟಿದ್ದ ಪ್ರತಾಪ್, ಸೂಪರ್​ ಸಂಡೆ WITH ಸುದೀಪದಲ್ಲಿ ​ ಇಂದು ಕುಣಿಸು ಕುಪ್ಪಳಿಸಿದ್ದಾರೆ.
ಮನೆಯಲ್ಲಿರುವ ಕೆಲವು ಸ್ಪರ್ಧಿಗಳು ಕಾರಣಗಳಿಂದಾಗಿ ಅವರನ್ನು ಟಾರ್ಗೆಟ್​ ಮಾಡಲಾಗಿತ್ತು. ಆ ನೋವಿನಿಂದಾಗಿ ಪ್ರತಾಪ್​ ಕಣ್ಣೀರು ಹಾಕಿದ್ದರು. ಆದರೆ ಶನಿವಾರದ ಎಪಿಸೋಡ್​ನಲ್ಲಿ ಪ್ರತಾಪ್​ ಅವರಿಗೆ ಕಿಚ್ಚ ಸುದೀಪ್​ ಕಡೆಯಿಂದ ಬೆಂಬಲ ಸಿಕ್ಕಿತು.
ಸುದೀಪ್​ ತುಂಬಿದ ಧೈರ್ಯದಿಂದ ಪ್ರತಾಪ್​ ಸಂಪೂರ್ಣ ಬದಲಾಗಿದ್ದಾರೆ. ಅವರ ಝಲಕ್ ತೋರಿಸಲು ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇಂದು ಮೊದಲ ವಾರದ ಎಲಿಮಿನೇಷನ್​ ನಡೆಯಲಿದೆ.
A post shared by Colors Kannada Official (@colorskannadaofficial)
ಪ್ರತಾಪ್​ ಅವರು ಎಲ್ಲರೊಂದಿಗೆ ಬೆರೆಯಬೇಕು ಎಂಬುದು ಬಹುತೇಕರ ಅಭಿಪ್ರಾಯ ಆಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಪ್ರತಾಪ್​ ಅವರು ತನಿಶಾ, ಸಂಗೀತಾ ಶೃಂಗೇರಿ ಜತೆ ಸೇರಿ ರ‍್ಯಾಂಪ್​ ವಾಕ್​ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭರ್ಜರಿಯಾಗಿ ಡ್ಯಾನ್ಸ್​ ಕೂಡ ಮಾಡಿದ್ದಾರೆ. ಅವರಲ್ಲಿ ಆಗಿರುವ ಬದಲಾವನೆ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಮನೆಮಂದಿ ಜತೆ ಪ್ರೇಕ್ಷಕರು ಆಶ್ಚರ್ಯದಿಂದ ಪ್ರತಾಪ್​ ಅವರ ಬದಲಾವಣೆಯನ್ನು ನೋಡುತ್ತಿದ್ದಾರೆ.
‘ಪ್ರತಾಪ್​ ಓಪನ್ಅಪ್​ ಆಗಬೇಕು ಎಂದು ತುಕಾಲಿ ಅವರೇ ನೀವು ಹೇಳ್ತಾಯಿದ್ರಿ. ಓಪನ್​ಅಪ್​ ಮಾಡಿಸುವುದು ಎಂದರೆ ಹೀಗೆ ಸರ್​.. ನಮ್ಮದು ವರ್ತೂರು ಟೊಮ್ಯಾಟೋ ಅಲ್ಲ. ನಾಟಿ ಟೊಮ್ಯಾಟೋ.. ವೆರಿ ನಾಟಿ’ ಎಂದು ಕಿಚ್ಚ ಸುದೀಪ್​ ಅವರು ಹೇಳಿದ ಡೈಲಾಗ್​ ಹೇಳಿದ್ದಾರೆ. ಪ್ರತಾಪ್​ ಅವರ ಈ ಬದಲಾವಣೆಯನ್ನು ನೀವೂ ನೋಡಬೇಕು ಎಂದರೆ ಇಂದು ಸಂಜೆ ಪ್ರಸಾರವಾಗಲಿರುವ ಎಪಿಸೋಡ್​​ಗಾಗಿ ಕಾಯಲೇ ಬೇಕಾಗಿದೆ.
ಮನೆಯಲ್ಲಿ ಈ ಮೊದಲು ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದ್ದ ವಾರದ ಕತೆ ಕಿಚ್ಚನ ಜೊತೆ ಕುರಿತಾಗಿ ಬಿಗ್​ಬಾಸ್​​ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಕ್ರಿಕೆಟಿಗ ಯುವರಾಜ್ ಸಿಂಗ್ ಪತ್ನಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + five =
Remember me
