ನವದೆಹಲಿ:ಭಾರತೀಯ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಬಲ ತುಂಬಲಿರುವ ಬ್ರಹ್ಮೋಸ್ ಸೂಪರ್​ಸಾನಿಕ್ ಕ್ಷಿಪಣಿಯನ್ನು ನೌಕಾಪಡೆ ಭಾನುವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ನಡೆಸಿದೆ. ನೌಕಾಪಡೆಯ ದೇಶೀಯ ನಿರ್ವಿುತ ‘ಐಎನ್​ಎಸ್ ಚೆನ್ನೈ’ ವಿಧ್ವಂಸಕ ನೌಕೆಯಿಂದ ಕ್ಷಿಪಣಿಯನ್ನು ಉಡಾಯಿಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ಕ್ಷಿಪಣಿಗಳ ಪರೀಕ್ಷೆ ನಡೆಸಲಾಗಿದ್ದು ಬ್ರಹ್ಮೋಸ್ ಅದಕ್ಕೆ ಹೊಸ ಸೇರ್ಪಡೆಯಾಗಿದೆ. ಗಡಿ ಪ್ರದೇಶಗಳಲ್ಲಿ ಉಂಟಾಗಿರುವ ಸವಾಲುಗಳನ್ನು ಎದುರಿಸಲು ರಕ್ಷಣಾ ಪಡೆಗಳಿಗೆ ಇದು ಶಕ್ತಿವರ್ಧಕವಾಗಲಿದೆ. ಹಲವು ಉನ್ನತ ಮಟ್ಟದ ಹಾಗೂ ತೀರಾ ಸಂಕೀರ್ಣ ಕಾರ್ಯಾಚರಣೆ ನಡೆಸಿದ ನಂತರ ಕ್ಷಿಪಣಿಯು ಗುರಿ ಮೇಲೆ ಅತ್ಯಂತ ನಿಖರವಾಗಿ ದಾಳಿ ಮಾಡಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ನಡುವೆ ಗಡಿ ಬಿಕ್ಕಟ್ಟು ಉಂಟಾಗಿರುವ ಸಂದರ್ಭದಲ್ಲಿ ಡಿಆರ್​ಡಿಒ ಈ ಪರೀಕ್ಷೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಸೇನೆಗೆ ಬ್ರಹ್ಮೋಸ್ ಪ್ರಧಾನ ಅಸ್ತ್ರವಾಗಿದ್ದು, ಭೂಮಿ ಮೇಲಿನ ದೂರವ್ಯಾಪ್ತಿಯ ಗುರಿಗಳ ಮೇಲೆ ದಾಳಿ ಮಾಡುವ ಶಕ್ತಿ ಹೊಂದಿದೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ಬ್ರಹ್ಮೋಸ್ ಕ್ಷಿಪಣಿಯ ವಿನ್ಯಾಸ ರೂಪಿಸಿ, ಅಭಿವೃದ್ಧಿಪಡಿಸಿವೆ.
ಅಭಿನಂದನೆ:ಕ್ಷಿಪಣಿ ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ಡಿಆರ್​ಡಿಒ ವಿಜ್ಞಾನಿಗಳು, ಕ್ಷಿಪಣಿ ನಿರ್ವಿುಸಿದ ಭಾರತ-ರಷ್ಯಾ ಸಂಸ್ಥೆ ಬ್ರಹ್ಮೋಸ್ ಏರೋಸ್ಪೇಸ್ ಮತ್ತು ನೌಕಾಪಡೆಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಭಿನಂದಿಸಿದ್ದಾರೆ.
ಲಡಾಖ್​ನಲ್ಲಿ ನಿಯೋಜನೆ:ಚೀನಾದ ತಗಾದೆ ಹೆಚ್ಚಿರುವ ಲಡಾಖ್ ಮತ್ತು ಅರುಣಾಚಲ ಪ್ರದೇಶದ ವಾಸ್ತವ ಗಡಿ ರೇಖೆ (ಎಲ್​ಎಸಿ) ಉದ್ದಕ್ಕೂ ಹಲವು ಸ್ಥಳಗಳಲ್ಲಿ ಭಾರತ ಈಗಾಗಲೇ ಬ್ರಹ್ಮೋಸ್ ಸರಣಿಯ ಕ್ಷಿಪಣಿಗಳನ್ನು ನಿಯೋಜಿಸಿದೆ.
ಉಡಾವಣೆಗೆ ಅನುಕೂಲ:ಬ್ರಹ್ಮೋಸ್ ಕ್ಷಿಪಣಿಗಳನ್ನು ಜಲಾಂತರ್ಗಾಮಿಗಳು, ಹಡಗುಗಳು ಮತ್ತು ವಿಮಾನಗಳಲ್ಲದೆ ಭೂಮಿ ಮೇಲಿಂದಲೂ ಉಡಾಯಿಸಬಹುದಾಗಿದೆ. ಭಾರತೀಯ ವಾಯುಪಡೆ (ಐಎಎಫ್) 2019ರಲ್ಲಿ ಬ್ರ್ರ್ಮೋಸ್ ಕ್ಷಿಪಣಿಯ ವೈಮಾನಿಕ ಆವೃತ್ತಿಯನ್ನು ಎಸ್​ಯುು-30 ಎಂಕೆ1 ಸಮರ ವಿಮಾನದಿಂದ ಪರೀಕ್ಷಾರ್ಥ ಉಡಾವಣೆ ಮಾಡಿತ್ತು. ಭಾನುವಾರ ವಾಯುಪಡೆಯ ಆವೃತ್ತಿಯ ಪರೀಕ್ಷೆ ನಡೆದಿದೆ.
ಅಮೆರಿಕ ಕ್ಷಿಪಣಿಗಿಂತ ವೇಗ:ಬ್ರಹ್ಮೋಸ್ ಶಕ್ತಿಶಾಲಿ ಕ್ಷಿಪಣಿ. ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿಗಳಲ್ಲಿ ಒಂದೆನಿಸಿದೆ. ಅಮೆರಿಕದ ಸಬ್​ಸಾನಿಕ್ ಹಾರ್ಪನ್ ಕ್ರೂಯಿಸ್ ಕ್ಷಿಪಣಿಗಿಂತ ಮೂರೂವರೆ ಪಟ್ಟು ವೇಗದ ಕ್ಷಿಪಣಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − five =
Remember me
