ನವದೆಹಲಿ :ಕೋವಾಕ್ಸಿನ್ ಕರೊನಾ ಲಸಿಕೆಯನ್ನು ಮೇ 1 ರಿಂದಲೇ ಕರ್ನಾಟಕ ಸೇರಿದಂತೆ 18 ರಾಜ್ಯಗಳ ಸರ್ಕಾರಗಳಿಗೆ ನೇರವಾಗಿ ಪೂರೈಸುತ್ತಿರುವುದಾಗಿ ಉತ್ಪಾದಕ ಭಾರತ್ ಬಯೋಟೆಕ್​ ಹೇಳಿದೆ. ಲಸಿಕಾ ಅಭಿಯಾನದ ಯಶಸ್ಸಿಗಾಗಿ ನಿಯಮಿತ ಪೂರೈಕೆಯನ್ನು ಮುಂದುವರಿಸುವುದಾಗಿ ಹೈದರಾಬಾದ್​ ಮೂಲದ ಕಂಪೆನಿ ಭರವಸೆ ನೀಡಿದೆ.
ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ್​, ಛತ್ತೀಸ್‌ಗಡ, ದೆಹಲಿ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತ್ರಿಪುರ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಿಗೆ ಲಸಿಕೆ ಪೂರೈಸಿರುವುದಾಗಿ ಬಯೋಟೆಕ್​​ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಿದೆ. ‘ನೀವೂ, ನಿಮ್ಮ ಪ್ರೀತಿಪಾತ್ರರೂ ಲಸಿಕೆ ಪಡೆಯಿರಿ’ ಎಂದು ಜನರಿಗೆ ಹೇಳಿದೆ.
COVAXIN® has been directly supplied to 18 states since May 1st.Unflinching in our efforts, we will continue the steady supply of our#vaccine.
Get yourself and your loved ones vaccinated.#BharatBiotech#COVAXIN#COVID19Vaccine#COVID19pic.twitter.com/B3mlFT6KoT
— BharatBiotech (@BharatBiotech)May 11, 2021

ಕೇಂದ್ರ ಸರ್ಕಾರದಿಂದ ಲಭ್ಯವಾಗಿರುವ ಹಂಚಿಕೆಯ ಮಾಹಿತಿಗೆ ಅನುಸಾರವಾಗಿ ಲಸಿಕೆಯನ್ನು ನೇರವಾಗಿ ಸರಬರಾಜು ಮಾಡಲು ಆರಂಭಿಸಲಾಗಿದೆ ಎಂದು ಕಂಪೆನಿಯ ಜಂಟಿ ಎಂಡಿ ಸುಚಿತ್ರ ಎಲ್ಲಾ ಈ ಮುನ್ನ ತಿಳಿಸಿದ್ದರು. ರಾಜ್ಯ ಸರ್ಕಾರಗಳಿಗೆ ಕೋವಾಕ್ಸಿನ್ ಲಸಿಕೆಯ ಬೆಲೆಯನ್ನು ಡೋಸ್​ಗೆ 400 ರೂಪಾಯಿಯಂತೆ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಖರೀದಿ ದರವು ಡೋಸ್​ಗೆ 150 ರೂ.ಗಳಾಗಿವೆ.(ಏಜೆನ್ಸೀಸ್)
“ಸೆಂಟ್ರಲ್ ವಿಸ್ತಾ ಖರ್ಚಲ್ಲಿ 62 ಕೋಟಿ ಡೋಸ್​ ಕರೊನಾ ಲಸಿಕೆ ನೀಡಬಹುದು”

ನೋಂದಣಿ ಕಾರ್ಯ ಸ್ಥಗಿತ : ಮೇ 23 ರವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಬಂದ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + two =
Remember me
