ನವದೆಹಲಿ:ಪೆಗಾಸಸ್​ ಬೇಹುಗಾರಿಕೆ ಸಾಫ್ಟ್​ವೇರ್​ ಬಳಸಿ ಪತ್ರಕರ್ತರು ಮತ್ತು ವಿಪಕ್ಷ ನಾಯಕರ ಫೋನ್​ ನಂಬರ್​ಗಳನ್ನು ಟ್ಯಾಪ್​​ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು, ಸುಪ್ರೀಂ ಕೋರ್ಟ್​, ತಾಂತ್ರಿಕ ತಜ್ಞರ ಸಮಿತಿಯೊಂದನ್ನು ರಚಿಸುತ್ತಿದೆ. ಈ ಕುರಿತಾದ ಅಧಿಕೃತ ಆದೇಶವು ಮುಂದಿನ ವಾರ ಹೊರಬೀಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಹೇಳಿದ್ದಾರೆ.
ಇಂದು ಬೆಳಿಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಕೇಸ್​​ ಒಂದರ ವಿಚಾರಣೆ ವೇಳೆ ಪೆಗಾಸಸ್​ ವಿವಾದದ ಬಗ್ಗೆ ಸಿಬಿಐ ತನಿಖೆ ಕೋರಿರುವ ಅರ್ಜಿದಾರರನ್ನೂ ಪ್ರತಿನಿಧಿಸುತ್ತಿರುವ ವಕೀಲರಿಗೆ ಮುಖ್ಯ ನ್ಯಾಯಮೂರ್ತಿಗಳು ಈ ವಿಚಾರ ತಿಳಿಸಿದರು. ಸಮಿತಿಯನ್ನು ರಚಿಸಲಾಗುತ್ತಿದ್ದು, ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲು ಕೆಲವರು ವೈಯಕ್ತಿಕ ಕಾರಣಗಳಿಂದ ನಿರಾಕರಿಸಿದ್ದಾರೆ. ಆದ್ದರಿಂದ ಸಮಿತಿ ರಚನೆಯಲ್ಲಿ ವಿಳಂಬವಾಗುತ್ತಿದೆ ಎಂದರು.
ಇದನ್ನೂ ಓದಿ:ರೈತರ ವಿರುದ್ಧವೇ ರೈತರು ಬೀದಿಗಳಿದು ಪ್ರತಿಭಟನೆ! ಎಲ್ಲೆಡೆ ಪೊಲೀಸ್​ ಬಂದೋಬಸ್ತ್​
ಪೆಗಾಸಸ್​ ಕುರಿತ ಪ್ರಕರಣಗಳ ಕಳೆದ ಬಾರಿಯ ವಿಚಾರಣೆಯಲ್ಲಿ, ಕೇಂದ್ರ ಸರ್ಕಾರವು ವಿವರವಾದ ಹೇಳಿಕೆ ಸಲ್ಲಿಸಲು ನಿರಾಕರಿಸಿತ್ತು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸರ್ಕಾರಿ ಸಂಸ್ಥೆಗಳು ಬಳಸಬಹುದಾದ ಸಾಫ್ಟ್​ವೇರ್​ಗಳ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಕೂಡದು. ಆದ್ದರಿಂದ ತಮ್ಮ ಫೋನುಗಳನ್ನು ಕದ್ದಾಲಿಸಲಾಗುತ್ತಿದೆ ಎನ್ನುತ್ತಿರುವ ಅರ್ಜಿದಾರರ ಆರೋಪಗಳನ್ನು ಸಮಿತಿಯೊಂದನ್ನು ರಚಿಸಿ ಪರಿಶೀಲಿಸಲು ಮಾತ್ರ ಸಿದ್ಧ ಎಂದು ಸರ್ಕಾರ ನಿಲುವು ತಾಳಿತ್ತು. ತದನಂತರ ಕೋರ್ಟ್​ ತನ್ನ ಆದೇಶವನ್ನು ಕಾಯ್ದಿರಿಸಿತ್ತು.(ಏಜೆನ್ಸೀಸ್)
ಬಿಜೆಪಿ ನಾಯಕರ ಕಛೇರಿಯಲ್ಲಿ ಕಾರ್ಯಕರ್ತೆ ಮೇಲೆ ಲೈಂಗಿಕ ಶೋಷಣೆ ಆರೋಪ
ಅಗ್ನಿ ಅನಾಹುತದಿಂದ ಎಚ್ಚೆತ್ತ ಪಾಲಿಕೆ… ಅಪಾರ್ಟ್​ಮೆಂಟ್​ ಬಾಲ್ಕನಿಗಳ ಮೇಲೆ ಬಿಬಿಎಂಪಿ ಕಣ್ಣು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
