ನವದೆಹಲಿ: ಕೋಟ್ಯಂತರ ರೂಪಾಯಿ ಸಾಲ ಮರುಪಾವತಿಸದೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಸೋಮವಾರ ಭಾರಿ ಹಿನ್ನಡೆಯಾಗಿದೆ. 40 ದಶಲಕ್ಷ ಅಮೆರಿಕ ಡಾಲರ್​ ಅನ್ನು ಮಕ್ಕಳ ಹೆಸರಿಗೆ ವರ್ಗಾಯಿಸಿ ನ್ಯಾಯಾಂಗ ನಿಂದನೆ ಎಸಗಿದ ಪ್ರಕರಣದಲ್ಲಿ ವಿಜಯ್ ಮಲ್ಯ ದೋಷಿ ಎಂಬ ತೀರ್ಪಿನ ಮರುಪರಿಶೀಲನೆಗೆ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ನ್ಯಾಯಪೀಠದಲ್ಲಿ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಕಳೆದ ವಾರ ವಾದ-ಪ್ರತಿವಾದ ಆಲಿಸಿದ ಬಳಿಕ ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸಿತ್ತು.
ಇದನ್ನೂ ಓದಿ:ಸಿದ್ಧಾರ್ಥ್‌ ಸ್ಥಿತಿಗಿಂತ ನನ್ನ ಸ್ಥಿತಿ ಭಿನ್ನವಾಗಿಲ್ಲ, ತನಿಖಾ ಸಂಸ್ಥೆ ಮತ್ತು ಬ್ಯಾಂಕುಗಳು ಕಿರುಕುಳ ನೀಡುತ್ತಿವೆ: ವಿಜಯ್‌ ಮಲ್ಯ
ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ 2017ರ ಮೇ ತಿಂಗಳಲ್ಲಿ ನೀಡಿತ್ತು. ವಿಜಯ್ ಮಲ್ಯ ಅವರು ಕಿಂಗ್ ಫಿಶರ್​ ಏರ್​ಲೈನ್ಸ್ ಮೂಲಕ 9,000 ಕೋಟಿ ರೂಪಾಯಿಗೂ ಅಧಿಕ ಬ್ಯಾಂಕ್ ಸಾಲ ಪಡೆದುಕೊಂಡಿದ್ದರು. ಕಿಂಗ್ ಫಿಶರ್ ನಷ್ಟ ಅನುಭವಿಸಿದೆ ಎಂಬ ಕಾರಣ ಮುಂದಿಟ್ಟ ಮಲ್ಯ ಸಾಲ ಮರುಪಾವತಿಸಲು ಹಿಂದೇಟು ಹಾಕಿದ್ದರು. ಬಳಿಕ ಅವರು ಇಂಗ್ಲೆಂಡ್​ನಲ್ಲಿ ತಲೆಮರೆಸಿಕೊಂಡಿದ್ದಾರೆ. ಅಲ್ಲಿನ ಕೋರ್ಟ್​ನಲ್ಲೂ ಅವರ ಗಡಿಪಾರಿನ ಕೇಸ್ ನಡೆಯುತ್ತಿದೆ. (ಏಜೆನ್ಸೀಸ್)
Supreme Court dismisses a plea filed by fugitive businessman Vijay Mallya, seeking a review of its May 2017 order holding him guilty of contempt for transferring USD 40 million to his children, in violation of the court's orderpic.twitter.com/JxmEhu1CCq
— ANI (@ANI)August 31, 2020

ವಿಜಯ್​ ಮಲ್ಯಗೆ ಸದ್ಯಕ್ಕೆ ಸಿಕ್ತು ರಿಲೀಫ್​!: ಲಂಡನ್​ ಕೋರ್ಟ್​ನಲ್ಲಿ ಏನಾಯಿತು ವಿಚಾರಣೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 11 =
Remember me
