ಬೆಂಗಳೂರು:ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ 9 ಮಂದಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರಲ್ಲಿ ಒಬ್ಬರಾಗಿರುವ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಪ್ರಮಾಣ ಸ್ವೀಕರಿಸುವ ಮೂಲಕ ದೇಶದ ಪ್ರಪ್ರಥಮ ಮಹಿಳಾ ಸಿಜೆಐ ಆಗುವತ್ತ ಮೊದಲ ಹೆಜ್ಜೆ ಇಡಲಿದ್ದಾರೆ. ಸದ್ಯದ ಸೇವಾ ಹಿರಿತನದ ಲೆಕ್ಕಾಚಾರದ ಪ್ರಕಾರ, ಬಿ.ವಿ.ನಾಗರತ್ನ 2027ರಲ್ಲಿ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಸ್ಥಾನ ಅಲಂಕರಿಸುತ್ತಾರಾದರೂ, ಅಲ್ಪಾವಧಿಗೆ ಮಾತ್ರ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. 2027ರ ಸೆ.24ರಂದು ದೇಶದ ಪ್ರಥಮ ಸಿಜೆಐ ಆಗಿ ನೇಮಕಗೊಳ್ಳುವ ಬಿ.ವಿ. ನಾಗರತ್ನ ಅದೇ ವರ್ಷ ಅ.29ರಂದು ನಿವೃತ್ತಿ ಹೊಂದಲಿದ್ದಾರೆ. ಅಂದರೆ, 1 ತಿಂಗಳು, 5 ದಿನ ಅಥವಾ 36 ದಿನಗಳು ಮಾತ್ರ ಬಿ.ವಿ.ನಾಗರತ್ನ ಅವರ ಸೇವಾವಧಿಯಾಗಿರಲಿದೆ.
ಸಿಜೆಐ ಪಟ್ಟಿ ಹೀಗಿದೆ: ಸುಪ್ರೀಂಕೋರ್ಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಸೇವಾ ಹಿರಿತನದ ಆಧಾರದಲ್ಲಿ ಸಿಜೆಐಗಳ ಪಟ್ಟಿ ತೀರ್ವನವಾಗಿದ್ದು, ಹಾಲಿ ಸಿಜೆಐ ಎನ್.ವಿ.ರಮಣ 2022ರ ಆ.26ರಂದು ನಿವೃತ್ತರಾಗುತ್ತಾರೆ. ಬಳಿಕ ನ್ಯಾಯಮೂರ್ತಿ ಯು.ಯು. ಲಲಿತ್ ಆ.27ರಿಂದ ನ.8ರವರೆಗೆ ಸಿಜೆಐ ಆಗಲಿದ್ದಾರೆ. 2022ರ ನ.9ರಿಂದ 2024ರ ನ.10ರವರೆಗೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸಿಜೆಯಾದರೆ, 2024ರ ನ.11ರಿಂದ 2025ರ ಮೇ 13ರ ವರೆಗೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಸಿಜೆಐ ಹುದ್ದೆ ಅಲಂಕರಿಸಲಿದ್ದಾರೆ. ನ್ಯಾಯಮೂರ್ತಿ ಬಿ.ಆರ್.ಗವಾಯಿ 2025ರ ಮೇ 14ರಿಂದ ಅದೇ ವರ್ಷ ನ.23ರವರೆಗೆ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅವರ ಬಳಿಕ ನ್ಯಾಯಮೂರ್ತಿ ಸೂರ್ಯಕಾಂತ್ 2025ರ ನ.24ರಿಂದ 2027ರ ಫೆ.9ರ ವರೆಗೆ ಸಿಜೆಐ ಆಗಲಿದ್ದಾರೆ.
ಹೊಸಬರಲ್ಲಿ ಮೂವರಿಗೆ ಅವಕಾಶ:ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿರುವ 9 ಮಂದಿಯಲ್ಲಿ ಮೂವರಿಗೆ ಸಿಜೆಐ ಹುದ್ದೆಗೇರುವ ಅವಕಾಶವಿದೆ. 2027ರ ಫೆ.9ರಂದು ನ್ಯಾಯಮೂರ್ತಿ ಸೂರ್ಯಕಾಂತ್ ನಿವೃತ್ತಿ ಹೊಂದಿದ ನಂತರ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಬಿ.ವಿ.ನಾಗರತ್ನ ಹಾಗೂ ಪಿ.ಎಸ್.ನರಸಿಂಹ ಸಿಜೆಐ ಆಗುವ ಅವಕಾಶ ಹೊಂದಿದ್ದಾರೆ.
ತಂದೆ-ಮಗಳು ಇಬ್ಬರೂ ಸಿಜೆಐ:ಸದ್ಯ ಹಿರಿಯ ನ್ಯಾಯಮೂರ್ತಿಯಾಗಿರುವ ಡಿ.ವೈ.ಚಂದ್ರಚೂಡ್ 2022ರ ನವಂಬರ್​ನಲ್ಲಿ ಸಿಜೆಐ ಆಗಲಿದ್ದಾರೆ. ಅವರ ತಂದೆ ವೈ.ವಿ.ಚಂದ್ರಚೂಡ್ 1978ರಿಂದ 1985ರ ಅವಧಿಯಲ್ಲಿ ಸಿಜೆಐ ಆಗಿದ್ದ ಹಿನ್ನೆಲೆಯಲ್ಲಿ ತಂದೆ-ಮಗ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದ ಇತಿಹಾಸ ಸೃಷ್ಟಿಯಾಗಲಿದೆ. ಮತ್ತೊಂದೆಡೆ, ನಾಗರತ್ನ ತಂದೆ ಇ.ಎಸ್.ವೆಂಕಟರಾಮಯ್ಯ 1989ಲ್ಲಿ ಸಿಜೆಐ ಆಗಿ ಕರ್ತವ್ಯ ನಿರ್ವಹಿಸಿದ್ದು, 2027ರಲ್ಲಿ ನಾಗರತ್ನ ಸಿಜೆಯಾದರೆ ತಂದೆ-ಮಗಳು ದೇಶದ ಉನ್ನತ ನ್ಯಾಯಾಲಯದ ಮುಖ್ಯಸ್ಥರ ಹುದ್ದೆಗೇರಿದ ಇತಿಹಾಸವೂ ಸೃಷ್ಟಿಯಾಗಲಿದೆ. ನಾಗರತ್ನ ನಿವೃತ್ತಿಯ ನಂತರ ಪಿ.ಎಸ್.ನರಸಿಂಹ ಹುದ್ದೆ ಅಲಂಕರಿಸಲಿದ್ದು, 2027ರ ಅ.30ರಿಂದ 2028ರ ಮೇ 3ರವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ.
ವಿಆರ್​ಎಲ್ ಸಹಯೋಗದಲ್ಲಿ ಮೂಡಿಬಂದ ಬ್ರೈಲ್​ ಮ್ಯಾಗಜಿನ್​; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಿಡುಗಡೆ
ಶಿಕ್ಷಕರ ದಿನಾಚರಣೆಯ ಮರುದಿನವೇ ಶಾಲೆ ಶುರು; 6, 7, 8ರ ಭೌತಿಕ ತರಗತಿ ಆರಂಭಕ್ಕೆ ಅಸ್ತು


ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:three × five =
Remember me
