ನವದೆಹಲಿ:ವಿವಿಧ ಧರ್ಮ ಹಾಗೂ ಕೇರಳದ ಶಬರಿಮಲೆ ದೇವಾಲಯ ಸೇರಿ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯದ ಬಗ್ಗೆ ಚರ್ಚಿ​ಸಲು ಜನವರಿ 17 ರಂದು ಸಭೆ ಕರೆಯುವಂತೆ ನಾಲ್ಕು ಹಿರಿಯ ವಕೀಲರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಇಂದು ಬೆಳಗ್ಗೆ ವಿಚಾರಣೆ ಆರಂಭಿಸಿದಾಗ ನಾವು ಶಬರಿಮಲೆ ಪ್ರಕರಣದ ಪರಿಶೀಲನಾ ಮನವಿಯನ್ನು ಆಲಿಸುತ್ತಿಲ್ಲ. ಈ ಹಿಂದೆ 5 ನ್ಯಾಯಾಧೀಶರ ಪೀಠವು ಉಲ್ಲೇಖಿಸಿರುವ ವಿಷಯಗಳನ್ನು ನಾವು ಪರಿಗಣಿಸುತ್ತಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ 9 ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿತು.
ಮುಸ್ಲಿಂ, ಪಾರ್ಸಿ ಮತ್ತು ದಾವೂಡಿ ಬೊಹ್ರಾ ಮಹಿಳೆಯರ ಪ್ರಕರಣಗಳ ಅರ್ಜಿಗಳ ವಿಚಾರಣೆ ನಡೆಸಲಿದೆ ಎಂದು ತಿಳಿಸಿದ ಪೀಠ, ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಮತ್ತು ಎ.ಎಂ. ಸಿಂಘ್ವಿ ಅವರು ಮತ್ತು ವಕೀಲರೊಂದಿಗೆ ಕೋರ್ಟ್​ನ ಪ್ರಧಾನ ಕಾರ್ಯದರ್ಶಿ ಸಂವಹನ ನಡೆಸಲಿ ಎಂದು ಸೂಚಿಸಿತು.
ಹಾಗೆಯೇ ಸಭೆಯು ಆಯಾಯ ಪ್ರಕರಣಗಳಲ್ಲಿ ವಾದ ಮಾಡಲು ವಕೀಲರ ಸಮಯವನ್ನು ನಿಗದಿಪಡಿಸಲಿ. ಮುಂದಿನ ವಿಚಾರಣೆ ಮೂರು ವಾರಗಳ ನಂತರ ನಡೆಯಲಿದ್ದು ಯಾವ ಪ್ರಕರಣ, ಯಾವ ವಕೀಲರು ವಾದ ಮಾಡುತ್ತಾರೆ ಎಂಬುದನ್ನು ನಿಗದಿಗೊಳಿಸಿ ಎಂದಿತು.
ಹಾಗೆಯೇ ಶಬರಿ ಮಲೆ ಪ್ರಕರಣದಲ್ಲಿ ನವೆಂಬರ್​ 14ರಂದು ನೀಡಿದ ತೀರ್ಪಿನ ಬಗ್ಗೆ ಗಮನವಿರಲಿ ಎಂದು ವಕೀಲರಿಗೆ ಪೀಠ ಸೂಚಿಸಿತು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 18 =
Remember me
