ನವದೆಹಲಿ:ಅಕ್ರಮ ಹಣ ವರ್ಗಾವನೆ ಪ್ರಕರಣದಲ್ಲಿ ಜೈಲು ಸೇರಿದ್ದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ ಶಾಸಕ, ಮಾಜಿ ಸಚಿವ ನವಾಬ್​ ಮಲಿಕ್​ಗೆ ಸುಪ್ರೀಂ ಕೋರ್ಟ್​ ಎರಡು ತಿಂಗಳ ಮಧ್ಯಂತರ ಜಾಮೀನು ನೀಡಿದೆ.
ಜಾರಿ ನಿರ್ದೇಶನಾಲಯದ ವಶದಲ್ಲಿರುವ ನವಾಬ್​ ಮಲಿಕ್​ ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆಯುತ್ತಿರುವ ಕಾರಣ ತಮಗೆ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್ ಮೊರರೆ ಹೋಗಿದ್ದರು. ಜುಲೈ 13ರಂದು ನ್ಯಾಯಾಲಯ ಇವರ ಅರ್ಜಿಯನ್ನು ವಜಾ ಮಾಡಿತ್ತು. ಬಾಂಬೆ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ನವಾಬ್​ ಮಲಿಕ್​ ಪರ ವಕೀಲರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಅನಿರುದ್ಧ ಬೋಸ್​ ಮತ್ತು ಬೇಲಾ.ಎಂ. ತ್ರಿವೇದಿ ಅವರಿದ್ದ ದ್ವಿಸದಸ್ಯ ಪೀಠವು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನಂತರ ನವಾಬ್​ ಮಲಿಕ್​ ಅವರಿಗೆ ಎರಡು ತಿಂಗಳ ಮಧ್ಯಂತರ ಜಾಮೀನನ್ನೂ ಮಂಜೂರು ಮಾಡಿದೆ.
ಇದನ್ನೂ ಓದಿ:ಎರಡ್ಮೂರು ವರ್ಷಗಳಿಂದ ಸುಮ್ಮನಿದ್ದ ಗುತ್ತಿಗೆದಾರರು ಈಗ ಯಾಕೆ ಆರೋಪಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
ಮೂತ್ರಪಿಂಡದ ಸೋಂಕು ಸೇರಿದಂತೆ ಇತರೆ ಖಾಯಿಲೆಗಳಿಂದ ಬಳಲುತ್ತಿರುವ ನವಾಬ್​ ಮಲಿಕ್​ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ 2022ರ ಫೆಬ್ರವರಿ ತಿಂಗಳಲ್ಲಿ ನವಾಬ್​ ಮಲಿಕ್​ರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು.
1993ರ ಬಾಂಬೆ ಸರಣಿ ಸ್ಪೋಟದ ಪ್ರಮುಖ ಆರೋಪಿ ದಾವೂದ್​ ಇಬ್ರಾಹಿಂ ಹಾಗೂ ಆತನ ಸಹಚರರ ಜೊತೆ ಅಕ್ರಮ ಚಟುವಟಿಕೆ ಹಾಗೂ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ನವಾಬ್​ ಮಲಿಕ್​ರನ್ನು ಜಾರಿ ನಿರ್ದೇಶನಾಲಯ ರಾಷ್ಟ್ರೀಯ ತನಿಖಾ ದಳದ(NIA) FIR ಆಧರಿಸಿ ವಶಕ್ಕೆ ಪಡೆದಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 2 =
Remember me
