ನವದೆಹಲಿ:ಶುಕ್ರವಾರ ಬೆಳಿಗ್ಗೆ ಸುಪ್ರೀಂಕೋರ್ಟಿನ ಕಾರಿಡಾರುಗಳಲ್ಲಿ ಓಡಾಡುತ್ತಿದ್ದ ವಕೀಲರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಂದು ಸರ್ಪ್ರೈಸ್ ನೀಡಿದರು.
ಬೆಳಿಗ್ಗೆ 10.30ರ ಸುಮಾರಿಗೆ ನ್ಯಾಯಾಲಯದ ಆವರಣವನ್ನು ತಲುಪಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಹೆಣ್ಣುಮಕ್ಕಳನ್ನು ಸಂದರ್ಶಕರ ಗ್ಯಾಲರಿಯ ಮೂಲಕ ತಮ್ಮ ನ್ಯಾಯಾಲಯದ ಕೊಠಡಿಗೆ (ಮೊದಲ ನ್ಯಾಯಾಲಯ) ಕರೆದೊಯ್ದು ತಮ್ಮ ಕೆಲಸದ ಜಾಗವನ್ನು ತೋರಿಸಿದರು. ಈ ಸಂದರ್ಭ ಅವರು, ತಮ್ಮ ಮಕ್ಕಳಿಗೆ “ನೋಡಿ, ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ” ಎಂದು ಹೇಳಿರುವುದು ವರದಿಯಾಗಿದೆ.
ಸಿಜೆಐ ತಮ್ಮ ಕೆಲಸದ ಸ್ಥಳದ ಬಗ್ಗೆ ವಿವರಿಸುವಾಗ ತಮ್ಮ ಹೆಣ್ಣುಮಕ್ಕಳನ್ನು ನ್ಯಾಯಾಲಯದ ಇನ್ನೊಂದು ಭಾಗಕ್ಕೆ ಕರೆದೊಯ್ದು ನ್ಯಾಯಾಧೀಶರು ಕುಳಿತುಕೊಳ್ಳುವ ಸ್ಥಳ ಮತ್ತು ವಕೀಲರು ತಮ್ಮ ಪ್ರಕರಣಗಳನ್ನು ವಾದಿಸುವ ಸ್ಥಳವನ್ನು ಅವರಿಗೆ ತೋರಿಸಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರ ಇಬ್ಬರು ವಿಕಲಚೇತನ ಮಕ್ಕಳು ತಮ್ಮ ಕೆಲಸದ ಸ್ಥಳವನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ ನಂತರ ಅವರನ್ನು ನ್ಯಾಯಾಲಯಕ್ಕೆ ಕರೆತಂದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಂದ ಹಾಗೆ ಇವರು ನ್ಯಾಯಮೂರ್ತಿ ಚಂದ್ರಚೂಡರ ಸ್ವಂತ ಮಕ್ಕಳಲ್ಲ. ಅವರಿಬ್ಬರೂ ಚಂದ್ರಚೂಡರ ಆರೈಕೆಯಲ್ಲಿ ಇರುವ ವಿಕಲಚೇತನ ಮಕ್ಕಳು.(ಏಜೆನ್ಸೀಸ್)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
