ನವದೆಹಲಿ:ಐತಿಹಾಸಿಕ ರಾಮ ಮಂದಿರ ಉದ್ಘಾಟನೆ ಸಮಾರಂಭದ ನೇರ ಪ್ರಸಾರಕ್ಕೆ ಯಾವುದೇ ಕಾರಣಕ್ಕೂ ಅನುಮತಿಯನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್​ ತಮಿಳುನಾಡು ಸರ್ಕಾರಕ್ಕೆ ಸೋಮವಾರ (ಜ.22) ನೋಟಿಸ್​ ಹೊರಡಿಸಿದೆ.
ಇದು ಇದು ಏಕರೂಪದ ಸಮಾಜ. ಇಲ್ಲಿ ಇತರೆ ಸಮುದಾಯಗಳು ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಏಕಪಕ್ಷೀಯವಾಗಿ ಅನುಮತಿಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸೋಮವಾರದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ತಮಿಳುನಾಡು ಸರ್ಕಾರಕ್ಕೆ ತಿಳಿಹೇಳಿದೆ.
ಅಯೋಧ್ಯೆಯ ರಾಮ ಮಂದಿರಲ್ಲಿ ಇಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ನೇರ ಪ್ರಸಾರವನ್ನು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ನಿಷೇಧಿಸಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸರ್ಕಾರದ ವಿರುದ್ಧ ಸುಪ್ರೀಂಕೊರ್ಟ್​ನಲ್ಲಿ ಅರ್ಜಿ ದಾಖಲಿಸಲಾಗಿತ್ತು. ಪ್ರಾಣ ಪ್ರತಿಷ್ಠಾ ಹಿನ್ನೆಲೆಯಲ್ಲಿ ಎಲ್ಲ ಬಗೆಯ ಪೂಜೆ, ಅರ್ಚನಾ ಮತ್ತು ಆನಂದನಂ (ಬಡವರಿಗೆ ಆಹಾರ ನೀಡುವುದು) ಮತ್ತು ಭಜನೆಯನ್ನು ಸರ್ಕಾರ ನಿಷೇಧಿಸಿದೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ತಮಿಳುನಾಡು ಸರ್ಕಾರದ ಈ ಆದೇಶವು ಸಂವಿಧಾನದ ಅಡಿಯಲ್ಲಿ ಭಾರತೀಯ ನಾಗರಿಕರಿಗೆ ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ನೇರಪ್ರಸಾರಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನಿರಾಕರಿಸುವಂತಿಲ್ಲ ಎಂದು ತೀರ್ಪು ಪ್ರಕಟಿಸಿದೆ.
ಕಾಮಾಕ್ಷಿ ಅಮ್ಮನ್ ದೇವಸ್ಥಾನದಿಂದ ಎಲ್ಇಡಿ ಪರದೆಗಳನ್ನು ಕೆಳಗಿಳಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಆಡಳಿತರೂಢ ಡಿಎಂಕೆ ಪಕ್ಷವನ್ನು ಹಿಂದು ವಿರೋಧಿ ಎಂದು ಜರಿದಿದ್ದಾರೆ. ಪೊಲೀಸ್​ ಬಲವನ್ನು ಪ್ರಯೋಗಿಸಿ, ಪ್ರಧಾನಿ ಮೋದಿ ವಿರುದ್ಧ ದ್ವೇಷ ಕಾರುತ್ತಿದೆ ಮತ್ತು ಜನರ ಆಕಾಂಕ್ಷೆಗಳನ್ನು ದಮನ ಮಾಡುತ್ತಿದ್ದು, ನೇರಪ್ರಸಾರವನ್ನು ನಿಷೇಧಿಸಿದೆ ಎಂದು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಯಾವಾಗ ನಿರ್ಮಲಾ ಸೀತಾರಾಮನ್​ ಆಕ್ರೋಶ ಹೊರಹಾಕಿದರೋ ಆಗ ದೇಶಾದ್ಯಂತ ತಮಿಳುನಾಡು ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಯಿತು. ಇದೀಗ ಸುಪ್ರೀಂಕೋರ್ಟ್​ ಸಹ ಸರ್ಕಾರಕ್ಕೆ ಚಾಟಿ ಬೀಸಿದೆ.
ಇದೇ ಸಂದರ್ಭದಲ್ಲಿ ಇಂದು ನಡೆಯುವ ಐತಿಹಾಸಿಕ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅಯೋಧ್ಯೆ ಪಟ್ಟಣವನ್ನು ಹೂವುಗಳು ಮತ್ತು ಬೀದಿದೀಪಗಳಿಂದ ಅಲಂಕರಿಸಲಾಗಿದ್ದು, ಭೂ ಕೈಲಾಸದಂತೆ ಕಂಗೊಳಿಸುತ್ತಿದೆ. ಭವ್ಯವಾದ ರಾಮಮಂದಿರ ಉದ್ಘಾಟನೆಗೆ ಹಲವಾರು ಗಣ್ಯರು ಉತ್ತರ ಪ್ರದೇಶದಕ್ಕೆ ಬೆಳಿಗ್ಗೆಯಿಂದಲೇ ಆಗಮಿಸುತ್ತಿದ್ದಾರೆ. ಸೂಪರ್​ ಸ್ಟಾರ್​ ರಜಿನಿಕಾಂತ್​, ಬಾಲಿವುಡ್ ಐಕಾನ್ ಅಮಿತಾಭ್ ಬಚ್ಚನ್, ಅವರ ಪುತ್ರ ಮತ್ತು ನಟ ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ರಾಮ್ ಚರಣ್, ಚಿರಂಜೀವಿ ಮತ್ತು ಇತರರು ಅಯೋಧ್ಯೆಗೆ ಆಗಮಿಸಿದ್ದಾರೆ.(ಏಜೆನ್ಸೀಸ್​)
ರಾಹುಲ್​ಗೆ ದೇವಸ್ಥಾನಕ್ಕೆ ನೋ ಎಂಟ್ರಿ: ನಾನು ಮಾಡಿದ ತಪ್ಪಾದ್ರೂ ಏನು? ಬೇಸರ ಹೊರಹಾಕಿದ ರಾಗಾ

BBKS10: ಸಂಗೀತಾ-ಕಾರ್ತಿಕ್ ಬಗ್ಗೆ ತನಿಷಾ ಹೇಳಿದ್ರು ‘ಬೆಂಕಿ’ ವಿಷಯ!

ಶ್ರೀರಾಮನ ಕಥೆ ಹೇಳಿ ಹಣ ಸಂಗ್ರಹ; ರಾಮಮಂದಿರ ನಿರ್ಮಾಣಕ್ಕೆ 52 ಲಕ್ಷ ರೂ. ದೇಣಿಗೆ ನೀಡಿದ 14 ವರ್ಷದ ಬಾಲಕಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + 13 =
Remember me
