ನವದೆಹಲಿ: ಕೇರಳದ ಶಬರಿಮಲೆಯೂ ಸೇರಿ ಲಿಂಗತಾರತಮ್ಯ ಇರುವ ಇನ್ನಿತರ ಧಾರ್ವಿುಕ ವಿಚಾರಗಳ ಕುರಿತು ಸಮಾಲೋಚನೆ ನಡೆಸಿ, ಸಲಹೆ ನೀಡುವಂತೆ ಪರ ಮತ್ತು ವಿರುದ್ಧದ ನಾಲ್ವರು ಹಿರಿಯ ವಕೀಲರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಜ. 17ಕ್ಕೆ ಮೊದಲ ಸಭೆ ನಡೆಸಿ ರ್ಚಚಿಸುವಂತೆ ನಿರ್ದೇಶನ ನೀಡಿರುವ ಪೀಠ, ಮೂರು ವಾರಗಳಲ್ಲಿ ಸಲಹಾ ವರದಿ ಸಲ್ಲಿಸಲು ನಿರ್ದೇಶನ ನೀಡಿದೆ. ಇಂಥ ಸಲಹೆ ಇಲ್ಲದೆ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ 9 ಸದಸ್ಯರ ವಿಸõತ ಪೀಠ ಸೋಮವಾರ ತಿಳಿಸಿದೆ.
ಮಸೀದಿಗೆ ಮುಸ್ಲಿಂ ಮಹಿಳೆಯರ ಪ್ರವೇಶ ಮತ್ತು ದಾವೂದಿ ಬೊಹ್ರಾ ಮುಸ್ಲಿಂ ಪಂಗಡದಲ್ಲಿ ಚಾಲ್ತಿಯಲ್ಲಿರುವ ಸ್ತ್ರೀಯರ ಜನನಾಂಗ ಛೇದನ, ಅನ್ಯ ಧರ್ವಿುಯರನ್ನು ವಿವಾಹವಾದ ಪಾರ್ಸಿ ಮಹಿಳೆಗೆ ಏಜರಿ (ಪಾರ್ಸಿಗಳ ಅಗ್ನಿ ದೇವಾಲಯ) ಪ್ರವೇಶ ನಿರ್ಬಂಧಕ್ಕೆ ಸಂಬಂಧಿಸಿದ ವಿಷಯಗಳನ್ನೂ (ನ.14ರಂದು ಐವರು ಸದಸ್ಯರ ಪೀಠ ಉಲ್ಲೇಖಿಸಿದ್ದು) ಕೂಲಂಕಷವಾಗಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ಹೇಳಿದೆ. ವಿಚಾರಣೆಯನ್ನು ಮೂರು ವಾರ ಮುಂದೂಡಿದೆ.
ಮಹಾಕಾರ್ಯದರ್ಶಿಗೆ ಸಮನ್ವಯದ ಹೊಣೆ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎ.ಎಂ. ಸಿಂಘ್ವಿ ಸೇರಿ ನಾಲ್ವರು ಹಿರಿಯ ವಕೀಲರಿಗೆ ಸಲಹೆ ನೀಡುವಂತೆ ಸೂಚಿಸಿರುವ ನ್ಯಾಯಪೀಠ, ಈ ವಕೀಲರ ಜತೆ
ಸಮನ್ವಯ ನಡೆಸಲು ಸುಪ್ರೀಂಕೋರ್ಟ್​ನ ಮಹಾಕಾರ್ಯದರ್ಶಿಗೆ ಸೂಚನೆ ನೀಡಿದೆ. ಸಂಕೀರ್ಣವಾಗಿರುವ ಈ ವಿಷಯದಲ್ಲಿ ಯಾವ ವಕೀಲರು ಯಾವ ವಿಚಾರ ಮಂಡಿಸಲಿದ್ದಾರೆ ಎಂಬುದನ್ನು ಅವರೇ ನಿರ್ಧರಿಸಿ ತಿಳಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಪಂಚಪೀಠ ಹೇಳಿದ್ದೇನು?
ಇದು ಹಿಂದು, ಮುಸ್ಲಿಂ ಮತ್ತು ಪಾರ್ಸಿ ಸಮುದಾಯದ ಪ್ರಶ್ನೆ ಮಾತ್ರವಲ್ಲ. ನಾಗರಿಕರಿಗೆ ಖಾತರಿ ಪಡಿಸಲಾಗಿರುವ ಧಾರ್ವಿುಕ ಹಕ್ಕು (ಸಂವಿಧಾನದ 25 ಮತ್ತು 26ನೇ ವಿಧಿ) ಮತ್ತು ಸಮಾನತೆಯ ಹಕ್ಕಿನ (ಸಂವಿಧಾನದ 14 ಮತ್ತು 15) ಸಂಘರ್ಷ ಕೂಡ ಆಗಿದೆ. ಹೀಗಾಗಿ ಈ ಬಗ್ಗೆ ಹೆಚ್ಚಿನ ವಿವರಣೆ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದ ಏಳು ಪ್ರಶ್ನೆಗಳಿಗೂ ಉತ್ತರಿಸಬೇಕಿದೆ. ಆದ್ದರಿಂದ ಶಬರಿಮಲೆ ತೀರ್ಪಿನ ಮರುಪರಿಶೀಲನಾ ಅರ್ಜಿ ಜತೆಗೆ ಇನ್ನಿತರ ವಿಷಯಗಳನ್ನು ವಿಸõತ ಪೀಠ ವಿಚಾರಣೆ ನಡೆಸುವುದೇ ಸೂಕ್ತ ಎಂದು ಐವರು ಸದಸ್ಯರ ಸಾಂವಿಧಾನಿಕ ಪೀಠ ಕಳೆದ ನ.14ರಂದು ಹೇಳಿತ್ತು. ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂದು 2018 ಸೆಪ್ಟೆಂಬರ್ 28ರ ತೀರ್ಪನ್ನು ಪ್ರಶ್ನಿಸಿ 65ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 20 =
Remember me
