ನವದೆಹಲಿ:ಇತ್ತೀಚೆಗಷ್ಟೆ ವಾರಾಣಸಿಯ ಜ್ಞಾನವಾಪಿ ಮಸೀದಿ ಇಡೀ ದೇಶದಲ್ಲೇ ತಲ್ಲಣ ಸೃಷ್ಟಿಸಿತ್ತು. ಅಲ್ಲಿ ಪುರಾತತ್ವ ಇಲಾಖೆಗೆ ಸಿಕ್ಕಿದ್ದು ಶಿವಲಿಂಗವೋ ಅಲ್ಲವೋ ಎಂಬ ಪ್ರಶ್ನೆ ವಿವಾದವನ್ನೇ ಹುಟ್ಟು ಹಾಕಿತ್ತು. ಇದೇ ಜ್ಞಾನವಾಪಿ ಪ್ರಕರಣದಿಂದಾಗಿ ನೂಪುರ್​ ಶರ್ಮಾ ಜಗತ್ತಿನಾದ್ಯಂತ ಮುಸಲ್ಮಾನರ ವಿರೋಧ ಕಟ್ಟಿಕೊಂಡದ್ದು.
ಈಗ ಸುಪ್ರೀಂ ಕೋರ್ಟ್​, ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದಲ್ಲಿ ಸಿಕ್ಕ ಶಿವಲಿಂಗದ ರಕ್ಷಣೆ ಆದೇಶವನ್ನು ಮುಂದುವರೆಸಿದೆ. ಈ ಆದೇಶ ಮುಂದಿನ ಆದೇಶ ಬರುವವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ಸಿಜೆಐ ಚಂದ್ರಚೂಡ, ಜಸ್ಟೀಸ್​ ಸೂರ್ಯ ಕಾಂತ, ಜಸ್ಟೀಸ್​ ಪಿಎಸ್ ನರಸಿಂಹ ಇದ್ದ ತ್ರಿಸದಸ್ಯ ಪೀಠ ಹೇಳಿದೆ. ಜೊತೆಗೆ, ಅಂಜುಮಾನ್​ ಇಂತೆಝಾಮಿಯಾ ಮಸೀದಿ, ಅಲ್ಲಾಹಾಬಾದ್​ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ​ಗೆ ತಮ್ಮ ಉತ್ತರವನ್ನು ಮೂರು ವಾರಗಳ ಒಳಗಾಗಿ ಸಲ್ಲಿಸುವಂತೆ ಹಿಂದು ಪರ ಪಕ್ಷದವರಿಗೆ ನಿರ್ದೇಶಿಸಿದೆ.
ಮೇ 17 ರಂದು ಸರ್ವೋಚ್ಚ ನ್ಯಾಯಾಲಯ ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಶಿವಲಿಂಗ ಕಂಡುಬಂದ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಮಧ್ಯಂತರ ಆದೇಶವನ್ನು ನೀಡಿತ್ತು.
ಮೇ 20 ರಂದು ಸುಪ್ರೀಂ ಕೋರ್ಟ್​ ಪ್ರಕರಣದ ಸಂಕೀರ್ಣತೆ ಮತ್ತು ಸೂಕ್ಷ್ಮತೆಯನ್ನು ಗಮನದಲ್ಲಿ ಇಟ್ಟುಕೊಂಡು ಹಿಂದೂ ಭಕ್ತರು ಸಲ್ಲಿಸಿದ ಸಿವಿಲ್ ಮೊಕದ್ದಮೆಯನ್ನು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಿಂದ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿತ್ತು. 25-30 ವರ್ಷಕ್ಕಿಂತ ಹೆಚ್ಚು ಅನುಭವವಿರುವ ಹಿರಿಯ ನ್ಯಾಯಾಧೀಶರು ಈ ಪ್ರಕರಣವನ್ನು ನಿಭಾಯಿಸ ಬೇಕು ಎಂದು ಹೇಳಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 3 =
Remember me
