ನವದೆಹಲಿ:ಮೇಲ್ನೋಟಕ್ಕೆ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ ಎಂಬ ವರದಿ ನೀಡುವ ಮೂಲಕ ಹಿಂಡನ್​ಬರ್ಗ್​ ವರದಿ ಪ್ರಕರಣದಲ್ಲಿ ಅದಾನಿ ಗ್ರೂಪ್​ಗೆ ಸುಪ್ರೀಂಕೋರ್ಟ್​ ಸಮಿತಿ ಕ್ಲೀನ್​ಚಿಟ್​ ನೀಡಿದೆ.
ಸೆಬಿ (SEBI) ಮಾರುಕಟ್ಟೆ ನಿಯಂತ್ರಕ ವ್ಯವಸ್ಥೆಯ ಭಾಗವಾಗಿ ಯಾವುದೇ ನಿಯಮಗಳನ್ನು ಅನುಸರಿಸುವಲ್ಲಿ ಅದಾನಿ ಗ್ರೂಪ್​ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ನೇಮಿಸಿರುವ ತಜ್ಞರ ಸಮಿತಿ ವರದಿ ನೀಡಿದ್ದು, ಅದಾನಿ ಗ್ರೂಪ್​ಗೆ ಕ್ಲೀನ್​ಚಿಟ್​ ನೀಡಿದೆ.
ಅದಾನಿ ಗ್ರೂಪ್​ ಕಡೆಯಿಂದ ಬೆಲೆಯಲ್ಲೂ ಯಾವುದೇ ವಂಚನೆ ನಡೆದಿಲ್ಲ. ತನ್ನ ಚಿಲ್ಲರೆ ಹೂಡಿಕೆದಾರರ ಸುರಕ್ಷತೆಗಾಗಿ ಅಗತ್ಯವಾದ ಕ್ರಮವನ್ನು ತೆಗೆದುಕೊಂಡಿದೆ. ಅಲ್ಲದೆ, ಆರ್ಥಿಕ ಅಪಾಯವನ್ನು ತಗ್ಗಿಸಲು ಅದಾನಿ ಗ್ರೂಪ್​ ತೆಗೆದುಕೊಂಡ ಕ್ರಮಗಳು ಸ್ಟಾಕ್​ ಮೇಲಿನ ನಂಬಿಕೆಯನ್ನು ಗಳಿಸಲು ನೆರವಾಗಿದೆ. ಅದಾನಿ ಗ್ರೂಪ್​ ಸ್ಟಾಕ್​ಗಳು ಇದೀಗ ಸ್ಥಿರವಾಗಿವೆ ಎಂದು ಸಮಿತಿ ತಿಳಿಸಿದೆ.
ಇದನ್ನೂ ಓದಿ:1200 ರೂ. ಬೆಲೆಯ ಐಪಿಎಲ್​​ ಟಿಕೆಟ​​ನ್ನು 8 ಸಾವಿರಕ್ಕೆ ಪೊಲೀಸರೇ ಮಾರುತ್ತಿದ್ದಾರೆ; ಆರ್​ಸಿಬಿ ಅಭಿಮಾನಿಗಳ ಆಕ್ರೋಶ
* ಒಂದೇ ಪಾರ್ಟಿಗಳ ನಡುವೆ ಅನೇಕ ಬಾರಿ ಕೃತಕ ವ್ಯಾಪಾರ ಅಥವಾ ಯಾವುದೇ ವಾಶ್​ ಟ್ರೇಡಿಂಗ್​ ಮಾದರಿ ಕಂಡುಬಂದಿಲ್ಲ.* ಅಬ್ಯುಸಿವ್​ ಟ್ರೇಡಿಂಗ್ (ನೋಂದಾಯಿತ ತೆರೆದ ಷೇರುಗಳ ಖರೀದಿ ಅಥವಾ ಮಾರಾಟದ ಮೇಲೆ ಪರಿಣಾಮ ಬೀರುವುದು)​ ನಲ್ಲಿ ಯಾವುದೇ ಸುಸಂಬದ್ಧ ಮಾದರಿ ಬೆಳಕಿಗೆ ಬಂದಿಲ್ಲ.* ಕನಿಷ್ಠ ಸಾರ್ವಜನಿಕ ಷೇರುದಾರರು, ಹೂಡಿಕೆಗಳ ಮೇಲೆ ಸಂಬಂಧಿತ ಪಕ್ಷಗಳಿಂದ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ.* ಕನಿಷ್ಠ ಸಾರ್ವಜನಿಕ ಷೇರುಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಕ ವೈಫಲ್ಯ ಕಂಡುಬಂದಿಲ್ಲ.
ಗೌತಮ್​ ಅದಾನಿ ಒಡೆತನದ ಅದಾನಿ ಸಮೂಹದ ಷೇರುಪೇಟೆ ಅಕ್ರಮ ಮತ್ತು ತೆರಿಗೆ ವಂಚನೆ ಕುರಿತು ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್​ರ್ಬಗ್​ ವರದಿ ಮಾಡಿದ ಬಳಿಕ ಅದಾನಿ ಗ್ರೂಪ್​ ವಿವಾದದ ಸುಳಿಗೆ ಸಿಲುಕಿಕೊಂಡಿತು.(ಏಜೆನ್ಸೀಸ್​)
ಕಾಂಗ್ರೆಸ್​ನ ನಿಜ ಮುಖ ಬಯಲಾಗಿದೆ: ಬಿ.ವೈ. ವಿಜಯೇಂದ್ರ ವಾಗ್ದಾಳಿ

ವಾಲುತ್ತಿದೆ ಜಗತ್ತಿನ ಅತಿ ಎತ್ತರದ ಶಿವನ ದೇವಾಲಯ; ASIನಿಂದ ಎಚ್ಚರಿಕೆ

ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾಳೆ ಬಿಜೆಪಿ ಮುಖಂಡನ ಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
