ನವದೆಹಲಿ:ವಿಧಾನಸಭೆಯ ಸ್ಪೀಕರ್​ಗೆ ಶಾಸಕರನ್ನು ಅಮಾನತು ಮಾಡುವ ಅಧಿಕಾರವಿದೆಯೇ ಎಂದು ಪರಿಶೀಲಿಸಿ ಎಂದು ಸುಪ್ರೀಂಕೋರ್ಟ್​ ಸಂಸತ್​ಗೆ ಸೂಚಿಸಿದೆ.
ಮಣಿಪುರದ ಸಚಿವ ಟಿ. ಶ್ಯಾಮ್​ಕುಮಾರ್​ ಅವರ ಅಮಾನತು ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಈ ಪ್ರಶ್ನೆ ಎತ್ತಿದ ನ್ಯಾಯಮೂರ್ತಿ ರೋಹಿಂಗ್ಟನ್​ ಫಾಲಿ ನಾರಿಮನ್​ ಅವರಿದ್ದ ಪೀಠ, ನಾಲ್ಕು ವಾರಗಳಲ್ಲಿ ಈ ಬಗ್ಗೆ ನಿರ್ಣಯಿಸಲು ಮಣಿಪುರದ ವಿಧಾನಸಭಾ ಅಧ್ಯಕ್ಷರಿಗೆ ಸೂಚಿಸಿತು.
2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಟಿ. ಶ್ಯಾಮ್​ಕುಮಾರ್​ ಆ್ಯಂಡ್ರೊ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ವೇಳೆ ಕಾಂಗ್ರೆಸ್​ 28 ಸ್ಥಾನಗಳನ್ನು ಪಡೆದಿತ್ತು. ಒಟ್ಟು 60 ಸ್ಥಾನ ಇರುವ ಮಣಿಪುರದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಇನ್ನೂ 3 ಸ್ಥಾನ ಪಡೆಯಬೇಕಾಗಿತ್ತು.
21 ಸ್ಥಾನ ಗೆದ್ದಿದ್ದ ಬಿಜೆಪಿ ಉಳಿದ ಪಕ್ಷಗಳೊಂದಿಗೆ ಸೇರಿದ ಮೇಲೆ ಅದರ ಬಲಾಬಲ 30 ಆಗಿತ್ತು. ಆದರೆ ಸರ್ಕಾರ ರಚಿಸಲು ಇನ್ನೂ ಒಬ್ಬ ಶಾಸಕರ ಬೆಂಬಲ ಅವಶ್ಯವಿತ್ತು. ಆಗ ಶ್ಯಾಮ್​ಕುಮಾರ್​ ಅವರು ಬಿಜೆಪಿ ಸೇರಿ ಸರ್ಕಾರ ರಚನೆಗೆ ಸಹಕರಿಸಿದ್ದರು. ಆದರೆ ಅವರು ಕಾಂಗ್ರೆಸ್​ಗೆ ರಾಜೀನಾಮೆ ನೀಡಿರಲಿಲ್ಲ.
ಇದೇ ಸ್ಥಿತಿ ಕರ್ನಾಟಕದಲ್ಲೂ ಆಗಿತ್ತು. ಕಳೆದ ಬಾರಿ ಪಕ್ಷ ವಿರೋಧಿ ನಡೆ ಅನುಸರಿಸಲಾಗಿದೆ ಎಂದು ಅಂದಿನ ಸ್ಪೀಕರ್​ ರಮೇಶ್​ಕುಮಾರ್​ ಅವರು ಬಂಡಾಯವೆದ್ದ 17 ಶಾಸಕರನ್ನು ಅಮಾನತು ಮಾಡಿದ್ದರು. ಮತ್ತೆ ಅವರು ಚುನಾವಣೆ ಎದುರಿಸಬೇಕಾಯಿತು. ಇದರಿಂದ ಕಾಂಗ್ರೆಸ್​ -ಜೆಡಿಎಸ್​ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ರಚನೆಯಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + seven =
Remember me
