ನವದೆಹಲಿ:ಬಿಲ್ಕಿಸ್​ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಿಗೆ ಕ್ಷಮಾಪಣಾ ನೀಡಿರುವ ಕುರಿತು ಸುಪ್ರೀಂ ಕೋರ್ಟ್​ ಗುಜರಾತ್​ ಸರ್ಕಾರಕ್ಕೆ ಚಾಟಿ ಬೀಸಿದೆ.
2002ರಲ್ಲಿ ಗೋದ್ರಾ ಗಲಭೆ ವೇಳೆ ಬಿಲ್ಕಿಸ್​ ಬಾನೋ ಮೇಲೆ ಅತ್ಯಾಚಾರ ಎಸಗಿ ಹಾಗೂ ಆಕೆಯ ಕುಟುಂಬಸ್ಥರನ್ನು ಹತ್ಯೆಗೈದ 11 ಆರೋಪಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವಧಿಗೂ ಮುನ್ನ ಆರೋಪಿಗಳಿಗೆ ಕ್ಷಮಾಪನಾ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗಳಿಗೆ ಅವಧಿಗೂ ಮುನ್ನವೇ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಕಳೆದ ವರ್ಷ ನವೆಂಬರ್​ನಲ್ಲಿ ಸಂತ್ರಸ್ತೆ ಬಿಲ್ಕಿಸ್​ ಬಾನೊ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು.
ಇನ್ನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್​ ಹಾಗೂ ಬಿ.ವಿ.ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠವು ಆರೋಪಿಗಳಿಗೆ ಕ್ಷಮಾಧಾನ ನೀಡಿರುವ ಕುರಿತು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ನ್ಯಾಯಪೀಠ ಒಬ್ಬ ಗರ್ಭಿಣಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಮತ್ತು ಆಕೆಯ ಕುಟುಂಬರ್ಸತರನ್ನು ಕೊಲೆ ಮಾಡಲಾಗಿದೆ. ನೀವು ಸಂತ್ರಸ್ತೆಯ ಪ್ರಕರಣವನ್ನು ಸೆಕ್ಷನ್​​ 302(ಕೊಲೆ) ಪ್ರಕರಣಕ್ಕೆ ಹೋಲಿಸಲು ಸಾಧ್ಯ ಇಲ್ಲ.
ಇದನ್ನೂ ಓದಿ:ಮುಸ್ಲಿಮರ ಮೀಸಲಾತಿ ರದ್ದು; ಕಾಲಾವಕಾಶ ಕೋರಿದ ಕರ್ನಾಟಕ ಸರ್ಕಾರ, ವಿಚಾರಣೆ ಮುಂದೂಡಿದ ನ್ಯಾಯಾಲಯ
ಸೇಬನ್ನು ಕಿತ್ತು ಇತರೆ ಹಣ್ಣುಗಳಿಗೆ ಹೋಲಿಸಿದ ಹಾಗೆ ಹತ್ಯಾಕಾಂಡವನ್ನು ಕೊಲೆ ಪ್ರಕರಣಕ್ಕೆ ಹೋಲಿಸಲು ಸಾಧ್ಯವಿಲ್ಲ. ಅಸಮಾನರನ್ನು ಸಮಾನರೆಂದು ಪರಿಗಣಿಸಲು ಸಾಧ್ಯ ಇಲ್ಲ. ಸಾಮಾನ್ಯವಾಗಿ ಅಪರಾಧಗಳು ಸಮಾಜ ಹಾಗೂ ಸಮುದಾಯಗಳ ವಿರುದ್ಧ ನಡೆಯುತ್ತವೆ ಎಂದು ಅಭಿಪ್ರಾಯಪಟ್ಟಿದೆ.
ಇಲ್ಲಿ ಸರ್ಕಾರ ಆರೋಪಿಗಳಿಗೆ ಯಾವ ಆಧಾರದ ಮೇಲೆ ಕ್ಷಮಾಧಾನ ನೀಡಿದೆ ಎಂಬುದು ಅರ್ಥವಾಗುತ್ತಿಲ್ಲ. ಇಂದು ಬಿಲ್ಕಿಸ್​ ಬಾನೊಗೆ ಆಗಿರುವಂತದ್ದು ನಾಳೆ ನಮ್ಮಗಾಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ.
ನೀವು ಆರೋಪಿಗಳನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಿರುವ ಬಗ್ಗೆ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಇಲ್ಲವಾದಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರಬೇಕು ಎಂದು ಕೇಂದ್ರ-ಗುಜರಾತ್​ ಸರ್ಕಾರಕ್ಕೆ ಚಾಟಿ ಬೀಸಿದೆ.
ಇನ್ನು ಕೇಂದ್ರ-ಗುಜರಾತ್​ ಸರ್ಕಾರಕ್ಕೆ ಕಡತವನ್ನು ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿದೆ. 11 ಜನ ಆರೋಪಿಗಳಿಗೆ ನೀಡಿರುವ ನೋಟಿಸ್​ಗೆ ಪ್ರತಿಕ್ರಿಯಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − thirteen =
Remember me
