ನವದೆಹಲಿ :ಕರೊನಾ ಚಿಕಿತ್ಸೆಗೆ ಬಳಸುವ ಔಷಧಿಯನ್ನು ಅಕ್ರಮವಾಗಿ ಸಂಗ್ರಹಿಸಿ ವಿತರಿಸಿದ್ದ ಆರೋಪದ ಮೇಲೆ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​ ವಿರುದ್ಧದ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ. ಆದಾಗ್ಯೂ, ಈ ಕುರಿತು ದೆಹಲಿ ಹೈಕೋರ್ಟ್​ಗೇ ಗಂಭೀರ್ ಅರ್ಜಿ ಸಲ್ಲಿಸಬಹುದು ಎಂದಿದೆ.
ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ, ಕರೊನಾ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳು ಸಾಕಷ್ಟು ಪೂರೈಕೆ ಇಲ್ಲದ ಸಮಯದಲ್ಲಿ, ಫ್ಯಾಬಿಫ್ಲು ಮಾತ್ರೆಗಳನ್ನು ಗಂಭೀರ್​ ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ವಿತರಿಸಿದ್ದರು. ದೆಹಲಿ ಹೈಕೋರ್ಟ್​ನಲ್ಲಿ ಈ ವಿಚಾರ ಬಂದಾಗ, ಕರೊನಾ ದುರಂತದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ರಕ್ಷಕರ ರೀತಿ ವರ್ತಿಸುವುದನ್ನು ಮುಖಂಡರು ನಿಲ್ಲಿಸಬೇಕು ಎಂದು ಕೋರ್ಟ್​ ಹೇಳಿತ್ತು. ಡ್ರಗ್​ ಕಂಟ್ರೋಲ್​ ಅಧಿಕಾರಿಗಳಿಗೆ ಇಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿತ್ತು.
ಇದನ್ನೂ ಓದಿ:ಕೊಲೆ, ಸಾಕ್ಷಿನಾಶ: ಪೊಲೀಸ್​​ ಇನ್ಸ್​ಪೆಕ್ಟರ್, ಕಾಂಗ್ರೆಸ್​ ನಾಯಕನ ಬಂಧನ
ಹೈಕೋರ್ಟ್​ನ ಈ ಹೇಳಿಕೆಯ ವಿರುದ್ಧ ಗಂಭಿರ್ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಜನಸೇವೆಗಾಗಿ ಮಾಡಿದ ಕೆಲಸದ ಬಗ್ಗೆ ಹೈಕೋರ್ಟ್​ ಆಡಿರುವ ಮಾತುಗಳು ಗಂಭೀರ್​ ಅವರನ್ನು ತಪ್ಪಿತಸ್ಥರೆಂಬಂತೆ ಕಾಣಿಸುತ್ತವೆ ಎಂದು ಅವರ ವಕೀಲರು ವಾದಿಸಿದರು. ಗಂಭೀರ್​ ವಿರುದ್ಧ ಕಾರ್ಯಾಚರಣೆ ನಡೆಯದಂತೆ ಆದೇಶಿಸಬೇಕಾಗಿ ಕೋರಿದರು.
ಆದರೆ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಎಂ.ಆರ್​.ಷಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಆ ರೀತಿಯ ಆದೇಶ ಮಾಡುವುದಿಲ್ಲ ಎಂದಿತು. “ಜನರು ಔಷಧಿಗಾಗಿ ಅಲೆದಾಡುತ್ತಿರುವಾಗ ಒಂದು ಟ್ರಸ್ಟ್​ ಅಥವಾ ಜನರ ಗುಂಪಿಗೆ ಔಷಧಿಗಳನ್ನು ವಿತರಿಸಲು ಅವಕಾಶ ನೀಡಲಾಗುವುದಿಲ್ಲ. ಹಾಗೆ ಬಿಟ್ಟರೆ, ಎಲ್ಲರೂ ಔಷಧಿಗಳನ್ನು ಖರೀದಿಸಿ ತಂತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ವಿತರಿಸುತ್ತಾರೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.(ಏಜೆನ್ಸೀಸ್)
ಟ್ರ್ಯಾಕ್ಟರ್ ಏರಿ ಸಂಸತ್ತಿಗೆ ಬಂದ ರಾಹುಲ್ ಗಾಂಧಿ!

ಪ್ರೀ-ಕ್ವಾರ್ಟರ್​ಫೈನಲ್ಸ್​​​ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + seventeen =
Remember me
