ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಂಗದ ಕುರಿತು ಟೀಕೆ ಮಾಡಿ ಪೋಸ್ಟ್​ ಮಾಡಿದ್ಧಾರೆ ಎಂಬ ಆರೋಪದ ಮೇಲೆ ಸುಪ್ರೀಂ ಕೋರ್ಟ್​​ ಐಪಿಎಲ್​​​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿಗೆ ಛೀಮಾರಿ ಹಾಕಿದೆ.
ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿರುವ ಕುರಿತು ಬೇಷರತ್​ ಕ್ಷಮೆಯಾಚಿಸುವಂತೆ ಲಲಿತ್​ ಮೋದಿಗೆ ಸುಪ್ರೀಂ ಕೋರ್ಟ್​​ ಸೂಚಿಸಿದೆ.
ಲಲಿತ್​ ಮೋದಿ ಸಲ್ಲಿಸಿದ್ದ ಕೌಂಟರ್​ ಅಫಿಡೆವಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್.ಷಾ, ಸಿ.ಟಿ.ರವಿಕುಮಾರ್​ ಅವರಿದ್ದ ದ್ವಿಸದಸ್ಯ ಪೀಠವು ಅವರೇನು ಕಾನೂನಿಗಿಂತ ದೊಡ್ಡವರಲ್ಲ ಎಂದು ಚಾಟಿ ಬೀಸಿದೆ.
ಇದನ್ನೂ ಓದಿ:VIDEO| ದೇಶದಲ್ಲೇ ಮೊದಲ ಅಂಡರ್​ ವಾಟರ್​ ಮೆಟ್ರೋ ಸಂಚಾರ
ಸಾಮಾಜಿಕ ಜಾಲತಾಣ ಹಾಗೂ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಂಆಡಿರುವ ಟೀಕೆ ಕುರಿತು ಕ್ಷಮೆಯಾಚಿಸುವಂತೆ ಸುಪ್ರೀಂ ಕೋರ್ಟ್​ನ ದ್ವಿಸದಸ್ಯ ಪೀಠ ತಿಳಿಸಿದೆ.
ಕ್ಷಮೆಯಾಚಿಸುವ ಮೊದಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಈ ರೀತಿ ಮುಂದಿನ ದಿನಗಳಲ್ಲಿ ಮಾಡುವುದಿಲ್ಲ ಎಂದು ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳಬೇಕು ಎಂದು ಲಲಿತ್​ ಮೋದಿಗೆ ನ್ಯಾಯಾಪೀಠ ಸೂಚಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
