ನವದೆಹಲಿ:ಪ್ರಪಂಚದಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ ಎಂಬುದನ್ನು ನಾವು-ನೀವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಈಗಾಗಲೇ ಐಶ್ವರ್ಯಾ ರೈ, ಅನುಷ್ಕಾ ಶರ್ಮಾ, ಪ್ರಿಯಾಂಕ ಚೋಪ್ರಾ, ಶಾರೂಖ್​ ಖಾನ್, ಸಲ್ಮಾನ್​ ಖಾನ್ ಹಾಗೂ ಟೈಗರ್​ ಶ್ರಾಫ್​ ರೀತಿ ಇರುವವರನ್ನು ನೋಡಿದ್ದೇವೆ. ಅಷ್ಟೇ ಏಕೆ ಡಾ. ರಾಜ್​ಕುಮಾರ್, ವಿಷ್ಣುವರ್ಧನ್​, ರವಿಚಂದ್ರನ್, ಶಂಕರ್​ನಾಗ್​ರನ್ನು ಹೋಲುವವರನ್ನು ನೋಡಿ ಆಶ್ಚರ್ಯ ಪಟ್ಟಿದ್ದೇವೆ. ತುಂಬಾ ಹೋಲಿಕೆ ಇಲ್ಲದಿದ್ದರೂ ಬಹುತೇಕ ಅವರಂತೆ ಕಾಣುತ್ತಾರೆ. ಇದರಿಂದ ಒಂದು ಕ್ಷಣ ಗೊಂದಲಕ್ಕೆ ಒಳಗಾಗಿ ಬಿಡುತ್ತೇವೆ. ಅದೇ ರೀತ ಗೊಂದಲ ಇದೀಗ ಧನಶ್ರೀ ವರ್ಮಾ ವಿಚಾರದಲ್ಲಿ ನಡೆದಿದೆ.
ಧನಶ್ರೀ ವರ್ಮಾ ಬಗ್ಗೆ ಕ್ರೀಡಾಭಿಮಾನಿಗಳಿಗಂತೂ ತಿಳಿದಿದೆ. ಏಕೆಂದರೆ, ಅವರು ಟೀಮ್​ ಇಂಡಿಯಾ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಅವರ ಪತ್ನಿ. ಅವರೊಬ್ಬ ಸೋಶಿಯಲ್​ ಮೀಡಿಯಾ ಸೆನ್ಷೆಷನಲ್​ ಸ್ಟಾರ್​. ನೃತ್ಯ ಸಂಯೋಜಕಿ ಆಗಿರುವ ಧನಶ್ರೀ ಓರ್ವ ಯೂಟ್ಯೂಬರ್​ ಕೂಡ ಹೌದು. ಯುಟ್ಯೂಬ್​ನಲ್ಲಿ ವಿವಿಧ ಡ್ಯಾನ್ಸ್​ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತ ಗಮನ ಸೆಳೆಯುತ್ತಿರುತ್ತಾರೆ.
ತಾಜಾ ಸಂಗತಿ ಏನೆಂದರೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಅದರಲ್ಲಿ ಧನಶ್ರೀ ವರ್ಮಾ ಅವರು ಬೇರೆ ಯಾರೊಂದಿಗೋ ಇರುವುದನ್ನು ನೋಡಿ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಆದರೆ, ಅಸಲಿ ಕತೆಯೇ ಬೇರೆ ಇದೆ. ಅದೇನು ಅಂತ ತಿಳಿಯಲು ಮುಂದೆ ಓದಿ.
ನಟಿ ಸುರಭಿ ಚಂದನಾ ಅವರು ಕಳೆದ ಮಾರ್ಚ್​ ತಿಂಗಳಲ್ಲಿ ತಮ್ಮ ಬಾಯ್​ಫ್ರೆಂಡ್​ ಕರಣ್​ ಶರ್ಮರನ್ನು ವರಿಸಿದರು. ಸದ್ಯ ಇಬ್ಬರು ತಮ್ಮ ವೈವಾಹಿಕ ಜೀವನವನ್ನು ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ಮಧುರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸುರಭಿ ಚಂದನಾ ಅವರು ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದರು. ಸ್ವಿಮ್ಮಿಂಗ್​ ಪೂಲ್​ನಲ್ಲಿ ತಮ್ಮ ಪತಿ ಕರಣ್​ ಶರ್ಮ ಜತೆ ಎಂಜಾಯ್​ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆದರೆ, ಸುರಭಿ ಅವರನ್ನು ನೋಡಿ ಕೆಲವರು ಧನಶ್ರೀ ವರ್ಮಾ ಅಂತ ಮಿಸ್ಟೇಕ್​ ಮಾಡಿಕೊಂಡಿದ್ದಾರೆ. ಅಲ್ಲದೆ, ಸುರಭಿ ಕೂಡ ಧನಶ್ರೀ ವರ್ಮಾರನ್ನು ಹೋಲುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಚಾಹಲ್​ ಪತ್ನಿ ಧನಶ್ರೀ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.
She is not dhanashree 😍#Dhanashree🥺#CHAHAL#Dhanshreeverma#IPL2024#RishabhPant#DCvGT@Imaginary_Ones@playsomo#SB19#earthquake#KARINA#BinanceSalman khan#SRHvRCBpic.twitter.com/aY7vUKHTyW
— cryptoway (@cryptoway01)April 24, 2024

ಇನ್ನು ಧನಶ್ರೀ ಅವರು ನಿರಂತರವಾಗಿ ಟ್ರೋಲಿಗರಿಗೆ ಗುರಿಯಾಗುತ್ತಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಪ್ರತೀಕ್ ಉಟೇಕರ್ ಅವರೊಂದಿಗಿರುವ ತಮ್ಮ ಫೋಟೋ ವೈರಲ್​ ಆಗಿ ಟ್ರೋಲ್ ಆಗಿದ್ದರು. ಫೋಟೋದಲ್ಲಿ ಧನಶ್ರೀ, ಪ್ರತೀಕ್​ ಅವರನ್ನು ತಬ್ಬಿಕೊಂಡಿದ್ದರು. ಈ ಕಾರಣದಿಂದ ಧನಶ್ರೀಯನ್ನು ಟ್ರೋಲ್​ ಮಾಡಲಾಗಿತ್ತು. ಇದಿಷ್ಟೇ ಅಲ್ಲದೆ, ಕ್ರಿಕೆಟಿಗ ಶ್ರೇಯಸ್​ ಅಯ್ಯರ್​ ಜತೆಯು ಧನಶ್ರೀ ಹೆಸರು ತಳುಕು ಹಾಕಿ ಕೊಂಡಿತ್ತು. ಚಾಹಲ್​ಗೆ ಡಿವೋರ್ಸ್​ ನೀಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು ಮತ್ತು ಟ್ರೋಲ್​ ಸಹ ಆಗಿತ್ತು. ಇದೀಗ ಮತ್ತೊಮ್ಮೆ ಧನಶ್ರೀ ಟ್ರೋಲಿಗರಿಗೆ ಆಹಾರವಾಗಿದ್ದಾರೆ.(ಏಜೆನ್ಸೀಸ್​)
ಅಂದು 100 ರೂಪಾಯಿ ಹಿಡಿದು ಮನೆ ಬಿಟ್ಟು ಹೋದಾತ ಇಂದು 200 ಕೋಟಿ ರೂ. ಆಸ್ತಿಯ ಒಡೆಯ!

ಒಂದೇ ಬೈಕ್​ನಲ್ಲಿ ಏಳು ಮಂದಿ! ಭಾವುಕರಾಗಿ ಟ್ವೀಟ್​ ಮಾಡಿದ ಹುಬ್ಬಳ್ಳಿ ಹುಲಿ ವಿಶ್ವನಾಥ್​ ಸಜ್ಜನರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
