ಪ್ರತಾಪಗಢ:ನರ್ಸಿಂಗ್ ಹೋಂನಲ್ಲಿ ಕಿಡ್ನಿಸ್ಟೋನ್​ ಆಪರೇಷನ್​ ಬಳಿಕ ಕಿಡ್ನಿಯೇ ನಾಪತ್ತೆಯಾಗಿರುವ ಆರೋಪ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಆಕೆ ಅವನನ್ನು ರಾತ್ರಿಯಿಡೀ ಮಾತನಾಡಿಸುತ್ತಲೇ ಇದ್ದಳು: ಬೆಳಿಗ್ಗೆ ಎದ್ದಾಗ ಗೊತ್ತಾಯ್ತ ಆತ ಮೃತಪಟ್ಟಿದ್ದಾನೆಂದು..
ಜಿಲ್ಲೆಯ ಲಾಲ್ಗಂಜ್ ಕೊಟ್ವಾಲಿ ಪ್ರದೇಶದ ದೇವಪುರ್ ಚೌಕರ್‌ನಲ್ಲಿ ವಾಸಿಸುವ ಸಂಗೀತಾ ವರ್ಮಾ ತನ್ನ 18 ವರ್ಷದ ಮಗ ಸಚಿನ್​ಗೆ ನಗರದ ನರ್ಸಿಂಗ್ ಹೋಂನಲ್ಲಿ ಕಿಡ್ನಿಸ್ಟೊನ್ ಆಪರೇಷನ್​ ಮಾಡಿಸಿದ್ದರು. ಆ ಬಳಿಕ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವಂತೆ ಹೇಳಿ ಆತನನ್ನು ಡಿಸ್ಚಾರ್ಜ್​ ಮಾಡಲಾಗಿತ್ತು. ಮನೆಗೆ ತೆರಳಿದ ಹಲವು ದಿನಗಳವರೆಗೆ ಬಾಲಕ ಚೆನ್ನಾಗಿಯೇ ಇದ್ದ.ಆದರೆ ಈ ನಡುವೆ ಔಷಧಿ ನಿಲ್ಲಿಸಿದ ನಂತರ ಆತನಿಗೆ ಆತನಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಗ ಆತ ಎರಡು ವಿಭಿನ್ನ ಕೇಂದ್ರಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್​ ಮಾಡಿಸಿಕೊಂಡಿದ್ದಾನೆ. ಈ ವೇಳೆ ಆತನ ಒಂದು ಕಿಡ್ನಿ ಇಲ್ಲದಿರುವುದು ಕಂಡುಬಂದಿದೆ. ನೊಂದ ಕುಟುಂಬಸ್ಥರು ಕೊತ್ವಾಲಿ ಪೊಲೀಸರಿಗೆ ಈ ಕುರಿತು ದೂರು ನೀಡುವ ಮೂಲಕ ಕ್ರಮಕ್ಕೆ ಆಗ್ರಹಿಸಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದರು.
ಇದನ್ನೂ ಓದಿ:ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ
ಕೊನೆಗೆ ಕುಟುಂಬಸ್ಥರು ಶನಿವಾರ ಸಂಬಂಧಿಕರು ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದು, ಆಪರೇಷನ್​ ನಡೆಸಿದ ವೈದ್ಯರನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಕುರಿತು ವೈದ್ಯರು ಪ್ರತಿಕ್ರಿಯೆ ನೀಡಿದ್ದು, ರೋಗಿಯು ಆಪರೇಷನ್‌ಗಾಗಿ ಆಸ್ಪತ್ರೆಗೆ ಬಂದಾಗ ಅವನ ಮೂತ್ರಪಿಂಡವು ಕುಗ್ಗಿತ್ತು. ಆಪರೇಷನ್​ ಬಳಿಕ ಮತ್ತಷ್ಟು ಕುಗ್ಗಿರಬೇಕು. ಅದಕ್ಕಾಗಿಯೇ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಇದು ಗೋಚರಿಸುವುದಿಲ್ಲ. ಎಂಆರ್‌ಐನಲ್ಲಿ ಮೂತ್ರಪಿಂಡವು ಖಂಡಿತವಾಗಿಯೂ ಗೋಚರಿಸುತ್ತದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
