ಭುವನೇಶ್ವರ್​​:ಪೊಲೀಸರ ಮುಂದೆ ಶರಣಾದ ಇಬ್ಬರು ಮಹಿಳಾ ಮಾವೋವಾದಿಗಳು ಪೊಲೀಸರ ಬೆಂಬಲದೊಂದಿಗೆ ಮದುವೆಯಾಗಿರುವ ಘಟನೆ ಒಡಿಶಾದ ಕಂದಮಾಲ್​ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಮಹಿಳಾ ಮಾವೋವಾದಿಗಳಾಗಿದ್ದ ಸಪ್ನಿತಾ ಪತಮಾಹಿ ಅಲಿಯಾಸ್​ ನಂದಿನಿ ಮತ್ತು ಫುಲಬತಿ ಉಸೆಂದಿ ಅಲಿಯಾಸ್​ ಕರುಣಾ, ತಾವೇ ಆರಿಸಿಕೊಂಡ ಜೀವನ ಸಂಗಾತಿಯ ಜತೆ ಪೊಲೀಸರ ಬೆಂಬಲದೊಂದಿಗೆ ಸಂಬಂಧಿಕರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
2019ರಲ್ಲಿ ಕಂದಮಾಲ್​ ಪೊಲೀಸ್​ ವರಿಷ್ಠಾಧಿಕಾರಿ ಮುಂದೆ ಶರಣಾಗುವ ಮುನ್ನ ಸಪ್ನಿತಾ ಪತಮಾಹಿ ಸುಮಾರು ಒಂದೂವರೆ ವರ್ಷಗಳ ಕಾಲ ಮಾವೋವಾದಿ ಆಗಿದ್ದಳು. ಅದೇ ರೀತಿ ಸುಮಾರು 13 ವರ್ಷಗಳ ಕಾಲ ಮಾವೋವಾದಿಯಾಗಿದ್ದ ಫುಲಬತಿ ಉಸೆಂದಿ 2021ರಲ್ಲಿ ಡಿಜಿ ಪೊಲೀಸ್​ ಮುಂದೆ ಶರಣಾಗಿದ್ದಳು.
ಸರ್ಕಾರಿ ಯೋಜನೆ ಅನುಸಾರ ನಂದಿನಿ ಮತ್ತು ಕರುಣಾಗೆ ಒಡಿಶಾ ರಾಜ್ಯದ ಪೊಲೀಸರು ಪುನರ್ವಸತಿ ಕಲ್ಪಿಸಿಕೊಟ್ಟಿದ್ದರು. ಇದೀಗ ಇಬ್ಬರಿಗೂ ಮದುವೆ ಮಾಡಿಸುವ ಮೂಲಕ ಮಾವೋವಾದಿಗಳಾಗಿದ್ದ ಮಹಿಳೆಯರಿಬ್ಬರ ಬದುಕಲ್ಲಿ ಹೊಸ ಜೀವನ ಆರಂಭವಾಗುವಂತೆ ಮಾಡಿದ್ದಾರೆ.(ಏಜೆನ್ಸಿಸ್​)
ಹಾರ ಬದಲಾಯಿಸಿದ ಬೆನ್ನಲ್ಲೇ ಕುಸಿದು ಬಿದ್ದ ವಧು: ಆಸ್ಪತ್ರೆಗೆ ಕರೆದೊಯ್ದ ಕುಟುಂಬಕ್ಕೆ ಕಾದಿತ್ತು ಶಾಕ್​
ಒಂದೇ ಹುಡುಗನನ್ನು ಮದುವೆಯಾದ ಅವಳಿ ಸಹೋದರಿಯರು! ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ
ವರದಕ್ಷಿಣೆಯಾಗಿ ಬೈಕ್​ ಕೊಡದಿದ್ದಕ್ಕೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮಂಟಪದಿಂದ ವರ ಎಸ್ಕೇಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 2 =
Remember me
