ನವದೆಹಲಿ:ವಾರಾಣಸಿಯ ಕಾಶಿ ವಿಶ್ವನಾಥ ಕಾರಿಡಾರ್​ಗೆ ಜೋಡಿಸಿಕೊಂಡಿರುವ ಜ್ಞಾನವಾಪಿ ಮಸೀದಿಯ ಸಮೀೆ ಮತ್ತು ವಿಡಿಯೋಗ್ರಫಿ ನಡೆಸಲು ವಾರಾಣಸಿ ಸೀನಿಯರ್​ ಡಿವಿಷನ್​ ನ್ಯಾಯಾಲಯ ನೀಡಿದ ಆದೇಶದ ಹಿನ್ನೆಲೆಯಲ್ಲಿ ಕೋರ್ಟ್​ ಕಮಿಷನರ್​ ಉಸ್ತುವಾರಿಯಲ್ಲಿ ಶುಕ್ರವಾರದಂದು ಭಾರೀ ಭದ್ರತೆಯ ನಡುವೆ ಮಸೀದಿ ಸಮೀಕ್ಷೆ ಮತ್ತು ವಿಡಿಯೋಗ್ರಫಿಯನ್ನು ನಡೆಸಲಾಗಿದೆ.
ಮುಸ್ಲಿಂ ಶ್ರದ್ಧಾಳುಗಳು ವಿಡಿಯೋಗ್ರಫಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ, ಕಾಶಿ ಕಾರಿಡಾರ್​-ಜ್ಞಾನವಾಪಿ ಮಸೀದಿ ಆವರಣದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಡಿಯೋಗ್ರಫಿ ಆಗಲೇಬೇಕು ಎಂದು ಕೋರ್ಟ್​ ಆದೇಶವಿರುವುದರಿಂದ ಪ್ರತಿಭಟನಾಕಾರರ ವಿರುದ್ಧ ಸ್ಥಳಿಯ ಹಿಂದು ಶ್ರದ್ಧಾಳುಗಳುಗಳು ಘೋಷಣೆ ಕೂಗಿದರು. ಎರಡೂ ಸಮುದಾಯಗಳ ಹಿರಿಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲಾಗಿದೆ. ಈ ನಡುವೆ ಕೋರ್ಟ್​ ಕಮಿಷನರ್​ ಅಜಯ್​ ಮಿಶ್ರಾ ತಂಡದ ಸಮೀೆ ಕಾರ್ಯ ನಾಳೆಗೆ ಪೂರ್ಣಗೊಳ್ಳಲಿದೆ. ಸಮೀಕ್ಷಾ ತಂಡ ಸ್ಥಳಕ್ಕೆ ಬರುವ ಮುನ್ನ ಮಾತನಾಡಿದ್ದ ಅಂಜುಮನ್​ ಇಂತೇಜಾಮಿಯಾ ಮಸೀದಿ ವ್ಯವಸ್ಥಾಪಕ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್​.ಎಂ. ಯಾಸಿನ್​, ವಿಡಿಯೋಗ್ರಫಿ, ಸಮೀೆಗಾಗಿ ಯಾರಿಗೂ ಮಸೀದಿ ಪ್ರವೇಶಿಸಲು ಬಿಡುವುದಿಲ್ಲ. ನ್ಯಾಯಾಲಯದ ಈ ನಿರ್ಧಾರವನ್ನು ಜ್ಞಾನವಾಪಿ ಮಸೀದಿಯ ಆಡಳಿತ ಸಮಿತಿ ವಿರೋಧಿಸುತ್ತದೆ. ಇದನ್ನು ಸಾಂವಿಧಾನಿಕವಾಗಿ ವಿರೋಧಿಸಲಾಗುವುದು ಎಂದು ಹೇಳಿದ್ದರು.
ಪ್ರಕರಣದ ಹಾದಿಆಗಸ್ಟ್​ 17, 2021:ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ಮಂದಿರದಲ್ಲಿ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಐವರು ಮಹಿಳೆಯರಿಂದ ವಾರಾಣಸಿ ಕೋರ್ಟ್​ಗೆ ಅರ್ಜಿಆಗಸ್ಟ್​ 18, 2021 :ಮಂದಿರದ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ವಿಡಿಯೋಗ್ರಫಿ ನಡೆಸುವುಂತೆ ಸ್ಥಳಿಯಾಡಳಿತಕ್ಕೆ ಮೂರು ದಿನಗಳ ಕಾಲಾವಕಾಶ ನೀಡಿದ ಕೋರ್ಟ್​ ನಂತರದಲ್ಲಿ ಕೋರ್ಟ್​ ಕಮಿಷನರ್​ ನೇಮಕಗೊಂಡರೂ, ಕಾರಣಾಂತರಗಳಿಂದಾಗಿ ವಿಡಿಯೋಗ್ರಫಿ ಪ್ರಕ್ರಿಯೆ ನಡೆಯುವುದಿಲ್ಲಏಪ್ರಿಲ್​ 8, 2022 :ಅಜಯ್​ ಮಿಶ್ರಾ ಎಂಬವರನ್ನು ಕೋರ್ಟ್​ ಕಮಿಷನರ್​ ಎಂದು ನೇಮಕಗೊಳಿಸಲಾಗುತ್ತದೆ. ಏಪ್ರಿಲ್​ 19ರಂದು ಸಮೀೆ ನಡೆಸಲು ಆದೇಶಿಸಲಾಗುತ್ತದೆ.ಏಪ್ರಿಲ್​ 18, 2022 :ಭದ್ರತಾ ಕಾರಣಗಳಿಗಾಗಿ ಪ್ರಕ್ರಿಯೆಗೆ ತಡೆ ನೀಡಲು ಜಿಲ್ಲಾಡಳಿತ ಕೋರ್ಟ್​ಗೆ ಮನವಿ ಸಲ್ಲಿಸುತ್ತದೆಏಪ್ರಿಲ್​ 19, 2022 :ಅರ್ಜಿ ಸ್ವೀಕರಿಸಿ ವಿಚಾರಣೆಯನ್ನು ಏಪ್ರಿಲ್​ 26ಕ್ಕೆ ನಿಗದಿ ಮಾಡಲಾಗುತ್ತದೆಏಪ್ರಿಲ್​ 26, 2022 :ಮೇ 6ರಂದು ಮಸೀದಿ ಸಮೀೆ ನಡೆಸುವ ಜತೆಗೆ ವೀಡಿಯೋಗ್ರಫಿ ನಡೆಸುವಂತೆ ಕೋರ್ಟ್​ ಆದೇಶ ನೀಡುತ್ತದೆ
90ರ ದಶಕದಲ್ಲೆ ಕೋರ್ಟ್​ ಮುಂದೆಸದರಿ ಪ್ರಕರಣಕ್ಕೆ ಮೂರು ದಶಕಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಜ್ಞಾನವಾಪಿಮಸೀದಿ ಆವರಣದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು 1991ರಲ್ಲಿ ಕಾಶಿಯ ಹರಿಹರ ಪಾಂಡೆ, ಸೋಮನಾಥ ವ್ಯಾಸ್​ ಮತ್ತು ರಾಮರಂಗ್​ ವರ್ಮ ಎಂಬ ಮೂವರು ಸಿವಿಲ್​ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಹರಿಹರ ಪಾಂಡೆ, ಸೋಮನಾಥ ವ್ಯಾಸ್​ ಮತ್ತು ಸಂಪೂರ್ಣಾನಂದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ರಾಮರಂಗ್​ ಶರ್ಮಾ ಸೇರಿದ್ದಾರೆ. ಈಗ ಹರಿಹರ ಪಾಂಡೆ ಮಾತ್ರ ಬದುಕುಳಿದಿದ್ದಾರೆ. ಶೃಂಗಾರ ಗೌರಿ ಎಂದೇ ದಾಖಲಾಗಿರುವ ಈ ಪ್ರಕರಣದಲ್ಲಿ ಈಗ ಅರ್ಜಿ ಸಲ್ಲಿಸಿರುವ ರಾಖಿ, ಲ್ಮ, ಸೀತಾ, ಮಂಜು, ರೇಖಾ ಪೂಜೆಗೆ ಅನುಮತಿ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ. 1669ರಲ್ಲಿ ಔರಂಗಜೇಬನು ಕಾಶಿ ವಿಶ್ವನಾಥ ದೇವಾಲಯವನ್ನು ಒಡೆದು ಮಸೀದಿಯ ಆಕಾರ ನೀಡಿದ್ದರಿಂದ ಶೃಂಗಾರ ಗೌರಿ ಮಂದಿರಕ್ಕೆ ಹಿಂದುಗಳ ಪ್ರವೇಶ ನಿಂತು ಹೋಯಿತು ಎಂದು ಸ್ಥಳಿಯ ಶ್ರದ್ಧಾಳುಗಳು ವಾದಿಸಿದ್ದಾರೆ. ಇದಕ್ಕೆ ಪೂರಕವಾಗಿ ಇತಿಹಾಸಕಾರರ ಅಧ್ಯಯನಗಳನ್ನೂ ಕೋರ್ಟ್​ ಮುಂದೆ ಪ್ರಸ್ತುತಪಡಿಸಲಾಗಿದೆ.
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹಾಸ್ಯಕಲಾವಿದ ಮೋಹನ್ ಜೂನೇಜ ಇನ್ನಿಲ್ಲ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 8 =
Remember me
