ನವದೆಹಲಿ:ಇಳಿವಯಸ್ಸು, ಮದುವೆಯಾಗಬೇಕಾದ ವಯಸ್ಸಿನಲ್ಲಿ ವಧು ಸಿಗಲಿಲ್ಲ. ಆದರೆ, ಆತನ ಆಸೆ ಕರಗಲೇ ಇಲ್ಲ. ಕೊನೆಗೆ ಮದುವೆಯಾಗಿದ್ದೇ ಆತನಿಗೆ ಮರಣ ಶಾಸನವಾಗಿ ಪರಿಣಮಿಸಿತು.
ಉತ್ತರಪ್ರದೇಶದ ಘಾಜಿಯಾಬಾದ್​ನ ಮುರಾದ್​ನಗರದ ಹೆದ್ದಾರಿಯಲ್ಲಿ ಅಶೋಕ್​ ಶರ್ಮಾ ಟೀ ಅಂಗಡಿ ಇಟ್ಟುಕೊಂಡಿದ್ದ. ತೀರಾ ಬಡವನೇನೂ ಅಲ್ಲ, ಎರಡೆರಡು ಕಡೆಗಳಲ್ಲಿ ಆತನಿಗೆ ಆಸ್ತಿಯಿತ್ತು. ವಯಸ್ಸು 50 ಆದರೂ ಮದುವೆ ಆಗಿರಲಿಲ್ಲ.
ಅದೊಂದು ದಿನ ವಾಹನ ಚಾಲಕ ಕಪಿಲ್​ ಎಂಬಾತ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಟೀ ಕುಡಿಯಲೆಂದು ಬಂದಿದ್ದ. ಆತನ ಜತೆಗಿನ ಮಾತುಕತೆಯಲ್ಲಿ ಅಶೋಕ್​ ಶರ್ಮಾ ಮದುವೆ ಮಾತುಕತೆ ಆಡಿದ್ದ. ಹೆಣ್ಣು ಸಿಗುತ್ತಿಲ್ಲ, ಎಲ್ಲಿಂದ ಮದುವೆಯಾಗಲಿ ಎಂದು ಪರಿತಪಿಸಿದ್ದ.
ಇದನ್ನೂ ಓದಿ;ಶೀಘ್ರದಲ್ಲಿಯೇ ಮಾರಾಟವಾಗಲಿವೆ ಮೂರು ಸರ್ಕಾರಿ ಬ್ಯಾಂಕ್​ಗಳು…!
ಇದಾದ ಒಂದು ವಾರದ ಬಳಿಕ ಅಶೋಕ್​ ಬಳಿಗೆ ತೆರಳಿದ ಕಪಿಲ್ ಮದುವೆಗೆ ಹೆಣ್ಣು ಇರುವುದಾಗಿ ತಿಳಿಸಿ ಶಾಲು (36) ಎಂಬಾಕೆಯ ಬಗ್ಗೆ ತಿಳಿಸಿದ್ದ. ಅಶೋಕ್​ ಕೂಡ ಈ ಪ್ರಸ್ತಾವನೆ ಒಪ್ಪಿ ಶಾಲುಳನ್ನು ಮದುವೆಯಾಗಿದ್ದ.
ಅಸಲಿ ವಿಷಯವೆಂದರೆ, ಶಾಲು ಈ ಮೊದಲೇ ಕಪಿಲ್​ಗೆ ಪರಿಚಯವಿದ್ದಳು. ಆಕೆ ಗಂಡ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಕೆಲಸಕ್ಕಾಗಿ ಕಪಿಲ್​ಗೆ ದುಂಬಾಲು ಬಿದ್ದಿದ್ದಳು. ಇದೇ ಅವರಿಬ್ಬರ ನಡುವೆ ಪರಿಚಯಕ್ಕೆ ಕಾರಣವಾಗಿತ್ತು.
ಶಾಲುಳನ್ನು ಮದುವೆ ಮಾಡಿಸಿದರೆ, ಅಶೋಕ್​ನ ಆಸೆಯೂ ತಿರುತ್ತೆ, ನಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಬಹುದು ಎಂಬ ಉದ್ದೇಶ ಕಪಿಲ್​ದ್ದಾಗಿತ್ತು. ಇದಕ್ಕೆ ಶಾಲು ಕೂಡ ಒಪ್ಪಿದ್ದಳು.
ಇದನ್ನೂ ಓದಿ;ಕರೊನಾ ಹರಡುವುದರಲ್ಲಷ್ಟೇ ಅಲ್ಲ, ದೆಹಲಿ ಗಲಭೆಯಲ್ಲೂ ತಬ್ಲಿಘಿಗಳ ಕೈವಾಡ…!
ಮದುವೆಯಾದ ಎರಡು ವರ್ಷಗಳವರೆಗೆ ಅಶೋಕ್​ ಕೊಲೆಗೆ ಈ ಜೋಡಿ ಯತ್ನಿಸುತ್ತಲೇ ಇತ್ತು. ಒಮ್ಮೆ ಕಾರಿನ ಬ್ರೇಕ್​ ಫೇಲ್​ ಮಾಡಿ ಆತನನ್ನು ಕೊಲೆಗೈಯಲು ಯತ್ನಿಸಿತ್ತು. ಇದಾದ ಬಳಿಕ ಇಲಿ ಪಾಷಾಣ ನೀಡಿದ್ದರು. ಆಧರೆ, ಇದೆಲ್ಲದರಿಂದ ಅಶೋಕ್​ ಪಾರಾಗಿ ಬದುಕುಳಿದಿದ್ದ.
ಅದೊಂದು ದಿನ ಅಶೋಕ್​ ಮೃತಪಟ್ಟಿದ್ದಾಗಿ ಶಾಲು ಹೇಳಿದ್ದಳು. ಸ್ನಾನ ಮಾಡುತ್ತಿದ್ದವನು ವಿದ್ಯುತ್​ ಸ್ಪರ್ಶಿಸಿ ಮೃತಪಟ್ಟಿದ್ದಾಗಿ ಪೊಲೀಸರಿಗೆ ಹೇಳೀಕೆ ನೀಡಿದ್ದಳು. ಆದರೆ, ಬಾತ್​ರೂಮ್​ನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ತನಿಖೆಯಿಂದ ಬಯಲಾಯಿತು. ಅಂಗವಿಕಲನಾಗಿದ್ದರೂ ಆಸ್ತಿಗಾಗಿ ಅಶೋಕ್​ನನ್ನು ಮದುವೆಯಾಗಿದ್ದೆ. ಆತನನ್ನು ಕೊಲೆ ಮಾಡಿ ಇಬ್ಬರೂ ಒಂದಾಗಿರಲು ಕಪಿಲ್​ ಸಂಚು ರೂಪಿಸಿದ್ದ ಎಂದು ಶಾಲು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮುರಾದ್​ನಗರ ಪೊಲೀಸರು ತಿಳಿಸಿದ್ದಾರೆ.
‘ನನ್ನ ಮಕ್ಕಳನ್ನ ಈ ವರ್ಷ ಶಾಲೆಗೆ ಕಳುಹಿಸಲ್ಲ’….. ಪಾಲಕರಿಗೆ ಇರುವ ಆಯ್ಕೆಗಳೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
