ನವದೆಹಲಿ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವುದಾಗಿ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದಾರೆ.
ಪಟನಾ ಪೊಲೀಸ್​ನ ಐಜಿ ಸಂಜಯ್​ ಸಿಂಗ್​ ಈ ವಿಷಯ ತಿಳಿಸಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು ಸೇರಿ ಭಾರತೀಯ ದಂಡಸಂಹಿತೆಯ ವಿವಿಧ ವಿಧಿಗಳ ಪ್ರಕಾರ ರಿಯಾ ಚಕ್ರವರ್ತಿ ವಿರುದ್ಧ ಎಫ್​ಐಆರ್​ ದಾಖಲಿಸಿರುವುದಾಗಿ ಹೇಳಿದ್ದಾರೆ.
ಈ ಪ್ರಕರಣದ ತನಿಖೆ ಈಗಾಗಲೆ ಆರಂಭವಾಗಿದೆ. ಮುಂಬೈ ಪೊಲೀಸ್​ ಬಳಿ ಇರುವ ಕೇಸ್​ ಡೈರಿ ಮತ್ತಿತರ ಮುಖ್ಯವಾದ ದಾಖಲೆಗಳನ್ನು ಸಂಗ್ರಹಿಸುವ ಸಲುವಾಗಿ ಪಟನಾ ಪೊಲೀಸ್​ನ 4 ಸದಸ್ಯರ ತಂಡವನ್ನು ಮುಂಬೈಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:18 ಜಿಲ್ಲೆಗಳಲ್ಲಿ ನೂರು ದಾಟಿದ ಹೊಸ ಸೋಂಕಿತರ ಪ್ರಮಾಣ; ರಾಜ್ಯದಲ್ಲಿ ಮುಂದುವರಿದ ಕರೊನಾ ಏರುಗತಿ
ಸುಶಾಂತ್​ ಸಿಂಗ್​ ರಜಪೂರ್​ ಜೂ.14ರಂದು ಮುಂಬೈನ ತಮ್ಮ ಫ್ಲ್ಯಾಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಕಳೆದ ತಿಂಗಳು ರಿಯಾ ಚಕ್ರವರ್ತಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಅಲ್ಲದೆ, ಅವರ ಸಹೋದರ ಶೋವಿಕ್​ ಚಕ್ರವರ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದರು.
ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡಾಗಿನಿಂದಲೂ ರಿಯಾ ಚಕ್ರವರ್ತಿ ಸಿಕ್ಕಾಪಟ್ಟೆ ಟ್ರೋಲಿಂಗ್​ಗೆ ಒಳಗಾಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಒಬ್ಬ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆ ಸಂದೇಶವನ್ನೂ ಕಳಿಸಿದ್ದ. ಇದಕ್ಕೆ ರಿಯಾ ಚಕ್ರವರ್ತಿ ವಿಪರೀತ ಖಾರವಾದ ಪ್ರತಿಕ್ರಿಯೆ ನೀಡಿ, ಸುಶಾಂತ್​ ಅವರನ್ನು ಬಳಸಿಕೊಂಡೆ ಎಂದರು, ಸಹಿಸಿಕೊಂಡೆ, ನನ್ನನ್ನು ಕೊಲೆಗಾರ್ತಿ ಎಂದರು… ಅದನ್ನೂ ಒಪ್ಪಿಕೊಂಡೆ… ನನ್ನನ್ನು ವೇಶ್ಯೆ ಎಂದರು… ಅದಕ್ಕೂ ಸುಮ್ಮನಾದೆ… ಆದರೆ ಈಗ ನನ್ನನ್ನು ರೇಪ್​ ಮಾಡಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದೀರಿ… ಅಂದರೆ ನನ್ನ ಮೌನವನ್ನು ದೌರ್ಬಲ್ಯ ಎಂದು ಭಾವಿಸಿದ್ದೀರಾ @mannu_raaut? ಎಂದು ಪ್ರಶ್ನಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್​ ಕ್ರೈಂ ಪೊಲೀಸರು, ಮನ್ನೂ ರಾತ್​ ವಿರುದ್ಧ ಕ್ರಮ ಕೈಗೊಂಡಿದ್ದರು.
ಎಮ್ಮೆಗಳ ಕಾದಾಟ, ಬಾವಿಗೆ ಜಿಗಿದ ಗರ್ಭಿಣಿ ಎಮ್ಮೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
