ಮುಂಬೈ:ನಟ ಸುಶಾಂತ್ ಸಿಂಗ್​ ರಜಪೂತ್ ಅವರ ಸಾವು ಕೊಲೆಯೋ, ಆತ್ಮಹತ್ಯೆಯೋ? ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಹಲವಾರು ಸಂಸ್ಥೆಗಳಿಂದ ತನಿಖೆ ನಡೆಯುತ್ತಿದ್ದರೂ ಉತ್ತರ ಸಿಕ್ಕಿಲ್ಲ. ಹಾಗಂತ ಸುಮ್ಮನಿರಲಾಗದೆ ಸುಶಾಂತ್​ ಗೆಳೆಯರಿಬ್ಬರು ‘ಗಾಂಧಿಗಿರಿ’ಗೆ ಮುಂದಾಗಿದ್ದಾರೆ.
ಸುಶಾಂತ್ ಗೆಳೆಯರಾದ ಗಣೇಶ್​ ಹಿವಾಕರ್​ ಮತ್ತು ಅಂಕಿತ್ ಆಚಾರ್ಯ ಎಂಬವರೇ ‘ಗಾಂಧಿಗಿರಿ’ಗೆ ಮುಂದಾದವರು. ಮಾದಕವಸ್ತು ನಿಯಂತ್ರಣ ವಿಭಾಗ (ಎನ್​ಸಿಬಿ) ತನಿಖೆ ನಡೆಸುತ್ತಿದ್ದರೂ ಅಲ್ಲಿಂದ ನಮಗಿನ್ನೂ ಯಾವುದೇ ಅಪ್​ಡೇಟ್​ ಸರಿಯಾಗಿ ಸಿಕ್ಕಿಲ್ಲ. ಹೀಗಾಗಿ ನಾವು ಈ ಹಾದಿ ಹಿಡಿದಿದ್ದೇವೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿರುವ ಅವರು, ಅಕ್ಟೋಬರ್​ 2ರಿಂದ 3 ದಿನಗಳ ಕಾಲ ನಾವು ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ಸುಶಾಂತ್ ಸಾವಿನ ಬಗ್ಗೆ ನ್ಯಾಯ ಕೋರಿ ನಾವು ಆರಂಭದಿಂದಲೂ ಒತ್ತಾಯಿಸುತ್ತಿದ್ದರೂ ಕಳೆದ ಕೆಲವು ದಿನಗಳಿಂದ ಎನ್​ಸಿಬಿಯಿಂದ ಯಾವುದೇ ಮಾಹಿತಿ ಇಲ್ಲ ಎಂದು ಅವರು ಅಸಮಾಧಾನ ತೋಡಿಕೊಂಡಿದ್ದಾರೆ. ದೆಹಲಿ ಪೊಲೀಸರು ಅನುಮತಿ ನೀಡಿದರೆ ರಾಜ್​​ಘಾಟ್​ನಲ್ಲಿ ಉಪವಾಸ ಮಾಡುತ್ತೇವೆ. ಇಲ್ಲದಿದ್ದರೆ ನಮ್ಮ ಮನೆಯಲ್ಲೇ ಉಪವಾಸ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
