ಮುಂಬೈ:ಬಾಲಿವುಡ್ ಯುವನಟ, ಸ್ಫುರದ್ರುಪಿ ಯುವಕ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಅವರ ಟ್ವಿಟರ್ ಕವರ್​ ಪೇಜ್​ನ ವರ್ಣಚಿತ್ರಕಾರನೂ ಆತ್ಮಹತ್ಯೆಗೆ ಶರಣಾಗಿದ್ದ ಎನ್ನುವ ವಿಚಾರ ಚರ್ಚೆಯಾಗುತ್ತಿದೆ.
ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್​ ತನ್ನ ಟ್ವಿಟರ್​ಗೆ ಕವರ್​ ಚಿತ್ರವನ್ನಾಗಿ ಖ್ಯಾತ ವರ್ಣಚಿತ್ರಕಾರ ಡಚ್‍ನ ವಿನ್ಸೆಂಟ್ ವಿಲ್ಲೆಮ್ ವಾನ್ ಗೋ ಅವರ “ಸ್ಟಾರಿ ನೈಟ್ಸ್” ಎಂಬ ಪ್ರಸಿದ್ಧ ಚಿತ್ರಕಲೆಯನ್ನು ಹಾಕಿಕೊಂಡಿದ್ದರು. ಆದರೆ, ಈ ಚಿತ್ರವನ್ನು ಸ್ವತಃ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಮಯದಲ್ಲಿ ವಿನ್ಸೆಂಟ್ ವಾನ್ ಗೋ ಚಿತ್ರಿಸಿದ್ದರಂತೆ.ಇದನ್ನೂ ಓದಿರಿನಟ ಸುಶಾಂತ್​ ಸಾವಿಗೆ ಕಂಬನಿ ಮಿಡಿದ ಪ್ರಧಾನಿ ಮೋದಿ
1889ರಲ್ಲಿ ವಿನ್ಸೆಂಟ್ ವಾನ್ ಗೋ ಖಿನ್ನತೆಯಿಂದ ಬಳಲುತ್ತಿರುವಾಗ ಸ್ಟಾರಿ ನೈಟ್ ಅನ್ನು ಚಿತ್ರಿಸಿದ್ದರು. ಇದಾದ ಬಳಿಕ ಅಂದರೆ 1890ರ ಜುಲೈ 29ರಂದು ಬೆಳಗ್ಗೆ ಉತ್ತರ ಫ್ರಾನ್ಸ್‌ನ ಆವೆರ್ಸ್ ಸುರ್ ಓಯಿಸ್​ನಲ್ಲಿರುವ ಮನೆಯ ಕೋಣೆಯಲ್ಲಿ ಹೊಟ್ಟೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
1853ರ ಮಾರ್ಚ್ 30ರಂದು ಜನಿಸಿದ್ದ ವಿನ್ಸೆಂಟ್ ವಾನ್ ಗೋ 1890ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ 37ರ ವಯಸ್ಸಿಗೇ ಬದುಕನ್ನು ದುರಂತ ಅಂತ್ಯವಾಗಿಸಿಕೊಂಡರು. ಇವರು ಪ್ರಾಣಹತ್ಯೆ ಮಾಡಿಕೊಂಡದ್ದು ತಾನೇ ರಚಿಸಿದ ಕೃತಿಯೊಂದರ (ಕಾರ್ನ್ಫೀಲ್ದ್ಸ್ ವಿತ್ ಫ್ಲೈಟ್ ಆಫ್ ಬಡ್ರ್ಸ್‌) ಎದುರಿನಲ್ಲಿ.
ಸುಶಾಂತ್​ ಕೂಡ ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದ್ದು, ಈ ಹಿಂದೆ ಅವರು ಟ್ವಿಟರ್​ ಕವರ್​ ಪೇಜ್​ಗೆ ಹಾಕಿಕೊಂಡಿದ್ದ ಡಚ್ ವರ್ಣಚಿತ್ರಕಾರನ ಚಿತ್ರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಸೇಂಟ್ ರೆಮಿ ಡಿ ಪ್ರೊವೆನ್ಸ್‌ನಲ್ಲಿ ವಿನ್ಸೆಂಟ್ ವಾನ್ ಗೋ ಆಶ್ರಯಿಸಿದ್ದ ವೇಳೆ ಈ ಚಿತ್ರವನ್ನು ರಚಿಸಿದ್ದು, ಇದು ಸೂರ್ಯೋದಯಕ್ಕೂ ಮುನ್ನ ಒಂದು ಆದರ್ಶ ಹಳ್ಳಿಯನ್ನು ಚಿತ್ರಣವನ್ನು ತೋರಿಸುತ್ತದೆ.
Little analysis of#SushantSinghRajputTwitter profile.His cover image is a famous painting "Starry Nights" by Vincent Van Gogh. Gogh painted Starry Night in 1889 during his stay at the asylum when he was fighting#depression.Gogh allegedly committed suicide in 1890. 😪pic.twitter.com/1PKrE6rQek
— Kumar Manish (@kumarmanish9)June 14, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 9 =
Remember me
