ಮುಂಬೈ:ಹಲವು ದೇವರುಗಳಿಗೆ ಹರಕೆ ಹೊತ್ತ ಬಳಿಕ ಹುಟ್ಟಿದವನು ಸುಶಾಂತ್​ ಸಿಂಗ್​ ರಜಪೂತ್​. ನಮ್ಮ ಪ್ರೀತಿಯ ಹಾಗೂ ವಿಧೇಯ ಪುತ್ರನಾಗಿದ್ದ. ನಮ್ಮ ಏಕೈಕ ಪುತ್ರನಾಗಿದ್ದ ಕಾರಣ ನಮ್ಮ ನಡುವೆ ವಿಶೇಷ ಬಾಂಧವ್ಯವಿತ್ತು ಎಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ತಂದೆ ಕೆ.ಕೆ. ಸಿಂಗ್​ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಕೆ.ಕೆ. ಸಿಂಗ್​, ಸುಶಾಂತ್​ ತುಂಬಾ ಬುದ್ಧಿವಂತನಾಗಿದ್ದ. ಓದಿನಲ್ಲೂ ಚುರುಕಾಗಿದ್ದ. ವಿಶಿಷ್ಠವಾದ ಆಲೋಚನೆಗಳನ್ನು ಹೊಂದಿದ್ದ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಎಂದು ಬಣ್ಣಿಸಿದರು.
ಇದನ್ನೂ ಓದಿ:ಕ್ಯಾನ್ಸರ್​ ಚಿಕಿತ್ಸೆ ಹೋದಾಗ ಆಕೆ ಹೆಣ್ಣಲ್ಲ, ಗಂಡು ಎಂಬುದು ಪತ್ತೆ!
ಮಗುವಾಗಿ ಬೆಳೆಯುತ್ತಿದ್ದಾಗ ಆತ ನಮ್ಮೊಂದಿಗೆ ಪ್ರತಿಯೊಂದು ವಿಷಯವನ್ನೂ ಹಂಚಿಕೊಳ್ಳುತ್ತಿದ್ದ. ಆದರೆ, ತಾನು ಒಬ್ಬ ನಟನಾಗಬೇಕು ಎಂದು ನಿರ್ಧರಿಸಿ, ಪೂರಕವಾಗಿ ನಟನೆ ಮತ್ತು ಡಾನ್ಸ್​ ಅನ್ನು ಕಲಿಯುತ್ತಿರುವ ವಿಷಯವನ್ನು ನಮಗೆ ತಿಳಿಸಿರಲಿಲ್ಲ. ಆದರೆ ತನ್ನ ಅಕ್ಕಂದಿರ ಬಳಿ ಈ ವಿಷಯ ಹೇಳಿಕೊಂಡಿದ್ದ. ಕೊನೆಗೆ ಆತ ನಟನಾಗಲು ಹೊರಟಾಗ ನಾವೆಲ್ಲರೂ ಒಟ್ಟಾಗಿ ಆತನನ್ನು ಬೆಂಬಲಿಸಿದ್ದೆವು. ನಟನಾ ಕ್ಷೇತ್ರದಲ್ಲಿ ಆತ ಉನ್ನತ ಸ್ಥಾನಕ್ಕೆ ಏರುತ್ತಾನೆ ಎಂಬ ನಂಬಿಕೆ ನಮ್ಮಲ್ಲಿತ್ತು ಎಂದು ತಿಳಿಸಿದರು.
ಸ್ವತಂತ್ರ ಬದುಕಿನ ಅಭಿಲಾಷೆ ಹೊಂದಿದ್ದ ಆತ ತುಂಬಾ ಜವಾಬ್ದಾರಿಯುಳ್ಳ ವ್ಯಕ್ತಿಯಾಗಿದ್ದ. ಹಾಗಾಗಿ ನಾವು ಆತನ ಪ್ರತಿಯೊಂದು ನಿರ್ಧಾರವನ್ನು ಮುಕ್ತವಾಗಿ ಬೆಂಬಲಿಸುತ್ತಿದ್ದೆವು ಎಂದು ಹೇಳಿದರು.
ನನ್ನಲ್ಲಿ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುತ್ತಿದ್ದ ಆತ, ಸಾಯುವ ಕೆಲವು ದಿನಗಳ ಮೊದಲು ಅದೆಲ್ಲವನ್ನೂ ನಿಲ್ಲಿಸಿದ್ದ. ಏನೊಂದು ತಿಳಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ಡೌನ್ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 1 =
Remember me
