ಮುಂಬೈ:ಕೇರಳವನ್ನು ದೇವರ ನಾಡು ಎಂದು ಕರೆಯಲಾಗುತ್ತದೆ. ಇಂಥ ದೇವರ ನಾಡು 2018ರಲ್ಲಿ ಉಂಟಾದ ಪ್ರವಾಹದಲ್ಲಿ ಸಂಪೂರ್ಣ ಜರ್ಝರಿತವಾಗಿತ್ತು. ಅಲ್ಲಿನ ನಿವಾಸಿಗಳು ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಂಥ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ವಾಸ್ತವ ಪರಿಸ್ಥಿತಿಯನ್ನು ವಿವರಿಸಿ ದೇಣಿಗೆ ನೀಡುವಂತೆ ಇನ್​ಸ್ಟಾಗ್ರಾಂ ಮೂಲಕ ಸುಶಾಂತ್​ ಸಿಂಗ್ ರಾಜಪೂತ್​​ ಅವರಿಗೆ ಮನವಿ ಮಾಡಿಕೊಂಡಿದ್ದರು.
ಈ ಸಂದೇಶವನ್ನು ಗಮನಿಸಿದ್ದ ಸುಶಾಂತ್​ ಕೇರಳ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಜತೆಗೆ ಇಂಥ ಉದಾತ್ತ ಸೇವೆಯನ್ನು ತಮ್ಮಿಂದ ಮಾಡಿಸಲು ಮುಂದಾಗಿದ್ದಕ್ಕಾಗಿ ಆ ಅಭಿಮಾನಿಯ ಇನ್​ಸ್ಟಾಗ್ರಾಂ ಸಂದೇಶದೊಂದಿಗೆ ಧನ್ಯವಾದವನ್ನೂ ಅರ್ಪಿಸಿದ್ದರು.
ಇದೀಗ ಅವರು 34ನೇ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಅಭಿಮಾನಿಯ ಮನವಿಗೆ ಸ್ಪಂದಿಸಿ, ದೇಣಿಗೆ ನೀಡಿದ ಬಳಿಕ ಸುಶಾಂತ್​ ಮಾಡಿದ್ದ ಆ ಸಂದೇಶದ ತುಣುಕು ಮತ್ತೆ ಮುಖ್ಯಭೂಮಿಕೆಗೆ ಬಂದಿದೆ.
As promised my friend,@subhamranjan66, what you wanted to do has been done. You made me do this, so be extremely proud of yourself. You delivered exactly when it was needed.Lots and lots of love. FLY🦋Cheers 🦋🌪🌏✊🙏🏻❤️#MyKerala🌳☀️💪🙏🏻❤️#KeralaReliefFundspic.twitter.com/fqrFpmKNhK
— Sushant Singh Rajput (@itsSSR)August 21, 2018

ನನ್ನ ಸ್ನೇಹಿತ @subhamranjan66 ಅವರಿಗೆ ಭರವಸೆ ನೀಡಿದ್ದಂತೆ ಅವರು ಬಯಕೆಯಂತೆ ದೇಣಿಗೆಯನ್ನು ನೀಡಲಾಗಿದೆ. ನನ್ನಿಂದ ಇಂಥ ಕೆಲಸ ಮಾಡಿಸಿದ್ದಕ್ಕಾಗಿ ನಿಮಗೆ ಹೆಮ್ಮೆ ಎನಿಸುತ್ತಿರಬಹುದು. ಅಗತ್ಯವಿದ್ದಾಗ ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದೀರಿ. ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಸುಶಾಂತ್​ ಇನ್​ಸ್ಟಾಗ್ರಾಂನಲ್ಲಿ ಸಂದೇಶ ಹಾಕಿದ್ದರು.
ಕೇರಳ ಸಿಎಂ ಕಂಬನಿ:ಸುಶಾಂತ್​ ಅವರ ಈ ಉದಾತ್ತ ನೆರವುನ್ನು ನೆನಪಿಸಿಕೊಂಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್​, ಸುಶಾಂತ್​ ಸಿಂಗ್​ ರಾಜಪೂತ್​ ಅವರ ಅಕಾಲಿಕ ಸಾವಿನ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಬೇಸರವಾಗಿದೆ. ಅವರ ಈ ಹಠಾತ್​ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಕುಟುಂಬ, ಸ್ನೇಹಿತರು ಮತ್ತು ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾರೈಸಿ, ಸಂದೇಶ ರವಾನಿಸಿದ್ದಾರೆ.
ಪ್ರಖ್ಯಾತ ನಟ, ನಟಿಯರು ದೇಣಿಗೆ ನೀಡುವುದು ಸಾಮಾನ್ಯ. ಆದರೆ, ಸುಶಾಂತ್​ ಸಿಂಗ್​ ರಾಜಪೂತ್​ ಕೆಲವೇ ಬಾಲಿವುಡ್​ ನಟ ಪೈಕಿ ತುಂಬಾ ವಿಶೇಷ ಎನಿಸಿದ್ದರು. ಎ-ಲಿಸ್ಟರ್​ ಆಗಿದ್ದರೂ, ಅಭಿಮಾನಿಗಳೊಂದಿಗೆ ನೇರ ಸಂಪರ್ಕದಲ್ಲಿ ಇರುತ್ತಿದ್ದರು. ಅವರ ಪ್ರತಿಯೊಂದು ಕಮೆಂಟ್​ ಅನ್ನು ಓದುತ್ತಿದ್ದರು. ತುಂಬಾ ಇಷ್ಟವಾದವು ಎನಿಸಿದ ಕಮೆಂಟ್​ಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಬೌದ್ಧಿಕ ಚರ್ಚೆಗೆ ಇಂಬು ನೀಡುವ ಚರ್ಚೆಗಳಲ್ಲಿ ಅಭಿಮಾನಿಗಳೊಂದಿಗೆ ತಮ್ಮನ್ನು ತೊಡಗಿಕೊಳ್ಳುತ್ತಿದ್ದರು.
ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಹಣಕಾಸು ವ್ಯವಹಾರ ಅಥವಾ ವೈಯಕ್ತಿಕ ಕಾರಣದ ಕುರಿತು ತನಿಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
