ಮುಂಬೈ:ಜೀವನದಲ್ಲಿ ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂದು ಎಲ್ಲರೂ ಆಗಾಗ ಅಂದುಕೊಳ್ಳುತ್ತಾರೆ. ಕೆಲವರು ತಾವು ಅಂದುಕೊಂಡಿದ್ದೆಲ್ಲವನ್ನೂ ಬರೆದಿಟ್ಟುಕೊಂಡು ಒಂದೊಂದಾಗಿ ಎಲ್ಲವನ್ನೂ ಸಾಧಿಸುತ್ತಾ ಪ್ರವರ್ಧಮಾನಕ್ಕೆ ಬರುತ್ತಾರೆ.
ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಾಜಪೂತ್​ ಕೂಡ ಎಲ್ಲರಂತೆ ಹಲವು ಕನಸುಗಳನ್ನು ಹೊಂದಿದ್ದರು. ತಮ್ಮೆಲ್ಲ ಕನಸುಗಳನ್ನು ಪಟ್ಟಿ ಮಾಡಿ ಟ್ವೀಟ್​ ಮಾಡಿದ್ದರು. ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದಲ್ಲಿ ಬಾಹ್ಯಾಕಾಶಯಾನದ ತರಬೇತಿ ಪಡೆಯುವುದು, 100 ಮಕ್ಕಳನ್ನು ನಾಸಾದ ಕಾರ್ಯಾಗಾರಕ್ಕೆ ಕಳುಹಿಸುವುದು, 100 ತಾಯಂದಿರ ಬಯಕೆಗಳನ್ನು ಈಡೇರಿಸುವುದು, ಚಂದ್ರನ ಒಂದು ಭಾಗವನ್ನು ತಮ್ಮದಾಗಿಸಿಕೊಳ್ಳುವುದು, ಸ್ಮಶಾನದಲ್ಲಿ ಒಂದು ರಾತ್ರಿ ಕಳೆಯುವುದು, ಐಷಾರಾಮಿ ಲ್ಯಾಂಬೋರ್​ಘಿನಿ ಕಾರನ್ನು ಖರೀದಿಸುವುದು ಸೇರಿ ಒಟ್ಟು 50ಕ್ಕೂ ಹೆಚ್ಚು ಬಯಕೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಇದನ್ನೂ ಓದಿ:ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಹಣಕಾಸು ವ್ಯವಹಾರ ಅಥವಾ ವೈಯಕ್ತಿಕ ಕಾರಣದ ಕುರಿತು ತನಿಖೆ
ಎಲ್ಲಕ್ಕಿಂತ ಮುಖ್ಯವಾಗಿ ಇಂಜಿನಿಯರಿಂಗ್​ ಪದವಿ ವ್ಯಾಸಂಗವನ್ನು ಬಿಟ್ಟು ನಟನಾಗಲು ಮುಂದಾಗಿದ್ದ ಅವರು ತಾವು ಓದುತ್ತಿದ್ದ ದೆಹಲಿಯ ಇಂಜಿನಿಯರಿಂಗ್​ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ತಾವು ಇರುತ್ತಿದ್ದ ಬಿಎಂಎಚ್​-131 ಕೊಠಡಿಯಲ್ಲಿ ಒಂದು ಇಡೀ ದಿನ ಮತ್ತು ರಾತ್ರಿ ಕಳೆಯುವುದು, ಯಾವುದೇ ಪರೀಕ್ಷೆಗೂ ಹಾಜರಾಗದೆ ಪದವಿ ಪ್ರಮಾಣಪತ್ರ ಪಡೆದುಕೊಳ್ಳುವ ಬಯಕೆಯಗಳನ್ನೂ ಹೊಂದಿದ್ದರು.ಸಮುದ್ರದಲ್ಲಿ ಮುಳುಗಿರುವ ಪುರಾತನ ದ್ವಾರಕ ನಗರದ ಅಧ್ಯಯನಕ್ಕಾಗಿ ಡೈವಿಂಗ್​ ಮಾಡುವುದು, ವೇದಗಳನ್ನು ಸ್ವತಃ ಓದಿ, ಅರ್ಥ ಮಾಡಿಕೊಳ್ಳುವುದು, ಒಂದು ಶತಕೋಟಿ ಜನರನ್ನು ಸಬಲೀಕರಣಗೊಳಿಸಲು ಸಮರ್ಪಕವಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಕನಸೂ ಅವರದ್ದಾಗಿತ್ತು.
ಇದನ್ನೂ ಓದಿ:ಅಭಿಮಾನಿಯ ಕೋರಿಕೆಗೆ ಸ್ಪಂದಿಸಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದ ಸುಶಾಂತ್​
ಆದರೆ ಇಷ್ಟೆಲ್ಲ ಕನಸುಗಳನ್ನು ನನಸು ಮಾಡಿಕೊಳ್ಳುವ ಮುನ್ನವೇ ಮಹೇಂದ್ರ ಸಿಂಗ್​ ಧೋನಿಯವರ ಜೀವನಾಧಾರಿತ ಚಿತ್ರದ ನಟ ತಮ್ಮ 34ನೇ ವಯಸ್ಸಿನಲ್ಲೇ ಇಹಲೋಕದಿಂದ ನಿವೃತ್ತಿ ಹೊಂದಿದ್ದಾರೆ.
Sushant’s list of 50 things he dreamt of doing. I am sure he achieved some, didn’t achieve some. We all have dreams. But whether you achieve all or some or none, remember Life itself is a Big Gift. It’s full of happiness if you discover it.#SushantSinghRajputpic.twitter.com/jl2dJTuhhu— Darshan (@omenlyfans)June 14, 2020
Sushant’s list of 50 things he dreamt of doing. I am sure he achieved some, didn’t achieve some. We all have dreams. But whether you achieve all or some or none, remember Life itself is a Big Gift. It’s full of happiness if you discover it.#SushantSinghRajputpic.twitter.com/jl2dJTuhhu
ಅಭಿಮಾನಿಗಳು ಅವರ ಈ ಎಲ್ಲ ಕನಸುಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡು, ಇಷ್ಟೊಂದು ಕನಸುಗಳನ್ನು ಈಡೇರಿಸಿಕೊಳ್ಳುವ ಮುನ್ನವೇ ಬಾರದ ಲೋಕಕ್ಕೆ ಹೋಗಿದ್ದಕ್ಕಾಗಿ ದುಃಖ ಮತ್ತು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಭಾರತ-ನೇಪಾಳ ಗಡಿಯಲ್ಲಿ ಗಡಿ ಗುರುತಿಸುವ ಪಿಲ್ಲರ್​ಗಳು ಮಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
