ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅಂತ್ಯಕ್ರಿಯೆ ಸೋಮವಾರ ನಡೆದಿದೆ. ಬಾಲಿವುಡ್​ನ ದಿಗ್ಗಜರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಪೊಲೀಸರು ಈಗಾಗಲೇ ಈ ಪ್ರಕರಣವನ್ನು ಆತ್ಮಹತ್ಯೆ ಎಂದೇ ಕರೆದಿದ್ದಾರೆ. ಆದರೆ ಇದೊಂದು ಕೊಲೆ, ಪೊಲೀಸರು ತನಿಖೆ ನಡೆಸಲೇ ಬೇಕು ಎಂದು ಒತ್ತಾಯಿಸಿದ್ದಾರೆ ನಟನ ಚಿಕ್ಕಪ್ಪ ಆರ್​.ಸಿ ಸಿಂಗ್​.
ಸುಶಾಂತ್​ ಸಿಂಗ್​ ಮೂಲತಃ ಬಿಹಾರದವರು. ಅವರ ಮನೆ ಪಟನಾದಲ್ಲಿದೆ. ಆರಂಭಿಕ ವಿದ್ಯಾಭ್ಯಾಸ ಪಟನಾದಲ್ಲಿಯೇ ನಡೆದಿತ್ತು. ನಂತರ ದೆಹಲಿಗೆ ಅವರ ಕುಟುಂಬ ವಲಸೆ ಬಂದಿತ್ತು. ಬಾಲಿವುಡ್​ ನಂಟಿನ ಬಳಿಕ ಸುಶಾಂತ್​ ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದರು.
ಇದನ್ನೂ ಓದಿ;ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?
ಪಟನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಶಾಂತ್​ ಸಿಂಗ್​ ಚಿಕ್ಕಪ್ಪ ಆರ್​.ಸಿ. ಸಿಂಗ್​, ಇದೊಂದು ಆತ್ಮಹತ್ಯೆ ಎಂದು ನಂಬಲು ಸಾಧ್ಯವಿಲ್ಲ. ಆತನ ಸಾವಿನ ಹಿಂದೆ ಏನೋ ಷಡ್ಯಂತ್ರವಿದೆ. ಅವನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲಿಸರು ತನಿಖೆ ನಡೆಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ, ಜನ್​ ಅಧಿಕಾರ ಪಕ್ಷದ ಮುಖ್ಯಸ್ಥ ಪಪ್ಪು ಯಾದವ್​ ಕೂಡ ಕೇಸ್​ನ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಸುಶಾಂತ್​ ಸಿಂಗ್​ನನ್ನು ನಾನು ಬಲ್ಲೆ. ಆತ ಕರ್ಮ ಯೋಗಿಯಾಗಿದ್ದ, ಬಿಹಾರಕ್ಕೆ ಹೆಮ್ಮೆ ಎನಿಸಿದ್ದ. ಈ ಬಗ್ಗೆ ಕೇಂದ್ರ ಸರ್ಕಾರವೇ ಮುತುವರ್ಜಿ ವಹಿಸಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ;ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್​ ಮೃತದೇಹ ಕಂಡು ಬಂದಿತ್ತು. ಹೀಗಾಗಿ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಘೋಷಿಸಿದ್ದಾರೆ. ಈ ಸಾವು ಇಡೀ ಬಾಲಿವುಡ್​ಗೆ ಶಾಕ್​ ನೀಡಿದೆ.ಸಾವಿಗೆ ಖಿನ್ನತೆ ಜತೆಗೆ, ಆರ್ಥಿಕ ಸಂಕಷ್ಟವೂ ಕಾರಣ ಇರಬಹುದು ಎಂಬ ವಿಶ್ಲೇಷಣೆಗಳು ನಡೆದಿವೆ. ಆದರೆ, ಪೊಲೀಸ್​ ತನಿಖೆಯಿಂದಷ್ಟೇ ನಿಜ ಬಯಲಾಗಲಿದೆ.
ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + thirteen =
Remember me
