ಮುಂಬೈ:ಕನ್ನಡದ ನಟ ಚಿರಂಜೀವಿ ತಮ್ಮ 35ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿರು ಸಾವಿನ ಶಾಕ್​ನಿಂದ ಸ್ಯಾಂಡಲ್​ವುಡ್​ ಇನ್ನೂ ಹೊರಬಂದಿಲ್ಲ. ಹೀಗಿರುವಾಗ ಬಾಲಿವುಡ್​ ಮಂದಿ ಇಂದು ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದಾರೆ.
34 ವರ್ಷದ ನಟ ಸುಶಾಂತ್​ ಸಿಂಗ್​ ರಜಪೂತ್​ ಮುಂಬೈನ ಬಾಂದ್ರಾದಲ್ಲಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.ಇದನ್ನೂ ಓದಿ:ನಟ ಸುಶಾಂತ್​ ಸಾವಿಗೆ ಕಂಬನಿ ಮಿಡಿದ ಪ್ರಧಾನಿ ಮೋದಿ
ನಟನ ಸಾವಿನ ಸುತ್ತ ಈಗಾಗಲೇ ಹಲವು ಅನುಮಾನ ಶುರುವಾಗಿದೆ. ಜೂ. 8ರಂದು ಸುಶಾಂತ್​ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ (28) ಆತ್ಮಹತ್ಯೆ ಮಾಡಿಕೊಂಡಿದ್ದರು. ನಗರದ ಮಲಾಡ್​​ನಲ್ಲಿರುವ ಕಟ್ಟಡವೊಂದರಲ್ಲಿ ವಾಸವಿದ್ದ ದಿಶಾ 14ನೇ ಮಹಡಿಯಿಂದ ಹಾರಿ ಮೃತಪಟ್ಟಿದ್ದರು. ದಿಶಾ ಸುಶಾಂತ್​ ಅವರ ಮ್ಯಾನೇಜರ್​ ಆಗಿ ಕೆಲಸ ಮಾಡುವುದಕ್ಕೂ ಮೊದಲು, ಐಶ್ವರ್ಯಾ ರೈ, ಭಾರ್ತಿ ಸಿಂಗ್​, ವರುಣ್​ ಶರ್ಮಾ ಮತ್ತಿತರೊಂದಿಗೆ ಕೂಡ ಕೆಲಸ ಮಾಡಿದ್ದರು.ಇದನ್ನೂ ಓದಿ:ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ದಿಶಾ ಅಂದು ತನ್ನ ಪ್ರಿಯಕರನೊಂದಿಗೆ ಪಾರ್ಟಿ ಮಾಡುತ್ತಿದ್ದಾಗ, ಅವರಿಬ್ಬರ ನಡುವೆ ಜಗಳ ಶುರುವಾಯಿತು. ನಂತರ ಬಾತ್​ರೂಂನಲ್ಲಿ ಲಾಕ್​ ಮಾಡಿಕೊಂಡಿದ್ದಳು. ಅದಾದ ಬಳಿಕ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಅಂದು ತಮ್ಮ ಮಾಜಿ ಮ್ಯಾನೇಜರ್​ ದಿಶಾ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ನಟ ಸುಶಾಂತ್​ ಸಿಂಗ್​ ರಜಪೂತ್​ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದರು. ದಿಶಾ ಸಾವಿನ ಸುದ್ದಿ ಕೇಳಿ ತುಂಬ ದುಃಖವಾಗಿದೆ. ಆಕೆಯ ಸಾವಿನ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ದೇವರು ಕೊಡಲಿ ಎಂದಿದ್ದರು. ಇದೀಗ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)
ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್​ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − seven =
Remember me
