ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್​ ಅವರ ಮಾಜಿ ಮ್ಯಾನೇಜರ್​ ದಿಶಾ ಸಲೈನಿ ಅವರು ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ಮಂಗಳವಾರ ನಡೆದಿದೆ.
ಮುಂಬೈನ ಮಲಾಡ್ ನಲ್ಲಿರುವ ಕಟ್ಟಡದ ೧೪ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿದರು.ಇದನ್ನೂ ಓದಿ:ನಾವಷ್ಟೇ ಅಲ್ಲ, ಅಂಡಾಣು ಕೂಡ ಹುಡುಕುತ್ತೆ ಸಂಗಾತಿ, ಗರ್ಭಾಶಯದಲ್ಲೂ ನಡೆಯುತ್ತೆ ಪರಸಂಗ…!
ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತಿಯೊಂದಿಗೆ ಇದ್ದರೆಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಿಶಾ ಪಾಲಕರ ಹಾಗೂ ಪತಿ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಆರಂಭಿಸಿದ ದಿಶಾ, ತನ್ನ ಪ್ರತಿಭೆಯಿಂದಲೇ ಬಹುಬೇಗ ಸೆಲೆಬ್ರಿಟಿಗಳ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸಲು ಆರಂಭಿಸಿದರು. ಮುಂಬೈ ಮೂಲದ ದಿಶಾ, ಸುಶಾಂತ್​ ಹೊರತುಪಡಿಸಿ, ಭಾರ್ತಿ ಸಿಂಗ್​​, ರಹೇ ಚಕ್ರಬೂರ್ತಿ ಮತ್ತು ವರುಣ್​ ಶರ್ಮಾರೊಟ್ಟಿಗೆ ಕೆಲಸ ಮಾಡಿದ್ದಾರೆ.ಇದನ್ನೂ ಓದಿ:ಇದು ಟ್ರೈಂಗಲ್ ಲವ್ ಸ್ಟೋರಿ… ಬ್ರೇಕ್​ ಅಪ್​ ಬಳಿಕ ಎಂಟ್ರಿಕೊಟ್ಟ ಮಾಜಿ ಪ್ರಿಯಕರ ಕಿರಿಕ್​ ಪ್ರೇಯಸಿಗೆ ಹೀಗಾ ಮಾಡೋದು?
ದಿಶಾ ಅವರ ಸಾವಿಗೆ ನಟ ಸುಶಾಂತ್​ ಸಿಂಗ್​ ರಜಪೂತ್​ ಕಂಬನಿ ಮಿಡಿದಿದ್ದು, ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.(ಏಜೆನ್ಸೀಸ್​)
ವರ್ಷಾರಂಭದಿಂದ ಚಿರಂಜೀವಿ ಸರ್ಜಾ ಹೆಸರು ಬದಲಾಗಿತ್ತು, ಗಮನಿಸಿದ್ದೀರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + thirteen =
Remember me
