ಪಟನಾ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ವಿಚಾರವಾಗಿ ನಟ ಶೇಖರ್​ ಸುಮನ್​ ಅಚ್ಚರಿಯ ವಿಷಯವೊಂದನ್ನು ಹೊರ ಹಾಕಿದ್ದಾರೆ.
ಬಾಲಿವುಡ್​ನಲ್ಲಿರುವ ಗುಂಪುಗಾರಿಕೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜತೆಗೆ, ಸುಶಾಂತ್​ ಸಿಂಗ್​ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಈ ಬೆಳವಣಿಗೆ ಬಗ್ಗೆ ಸುಶಾಂತ್​ ಸಿಂಗ್​ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಸುಶಾಂತ್​ ಸಿಂಗ್​ ಸಾವಿನ ಹೆಸರಲ್ಲಿ ರಾಜಕೀಯ ನಡೆಸುವುದು ಬೇಡ ಎಂದು ಹೇಳಿದೆ.
ಇದನ್ನೂ ಓದಿ;ಸುಶಾಂತ್​ ಸಿಂಗ್​ ಸಾವಿನ ಪ್ರಕರಣದ ಸಾಕ್ಷ್ಯಾಧಾರಗಳ ನಾಶ; ಬಿಜೆಪಿ ಸಂಸದೆ ಅನುಮಾನಕ್ಕೂ ಇದೆ ಸಾಕ್ಷ್ಯ
ಪಟನಾದಲ್ಲಿರುವ ಸುಶಾಂತ್​ ಸಿಂಗ್​ ಮನೆಗೆ ಭೇಟಿ ನೀಡಿದ್ದ ಶೇಖರ್​ ಸುಮನ್​ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಬಳಿಕ ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಸುಶಾಂತ್​ ಸಾವಿನ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಈ ವೇಳೆ ಬಾಲಿವುಡ್​ನಲ್ಲಿ ಭಾರಿ ಗುಂಪುಗಾರಿಕೆ ಇದ್ದು, ಅದನ್ನು ಎದುರಿಸಿ ಜಯಿಸುವುದು ಕಷ್ಟದ ಕೆಲಸ. ಇದನ್ನೂ ಮುರಿಯಬೇಖಿದೆ. ಸುಶಾಂತ್​ ಪತ್ರವೊಂದನ್ನು ಬರೆದಿಟ್ಟಿರಲೇಬೇಕು ಎಂಬುದು ನನ್ನ ವಾದ ಎಂದು ಹೇಳಿದ್ದರು. ಜತೆಗೆ, ಸುಶಾಂತ್​ ಸಿಂಗ್​ 50 ಸಿಮ್​ಗಳನ್ನು ಬದಲಾಯಿಸಿದ್ದರು ಎಂಬ ವಿಚಾರವನ್ನು ತಿಳಿಸಿದ್ದರು.
ಇದನ್ನೂ ಓದಿ;ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ
ಇದೇ ವೇಳೆ ಸುಶಾಂತ್​ ಗೆಳೆಯ ಎಂದು ಹೇಳಿಕೊಳ್ಳುತ್ತಿರುವ ಸಂದೀಪ್​ ಸಿಂಗ್​, ಸುಶಾಂತ್​ ಸಾವು ದುರದೃಷ್ಟದ ಘಟನೆ ಸಾವಿನ ಬಗ್ಗೆ ಅನುಮಾನಪಡುವುದು ಏನೂ ಇಲ್ಲ. ನಾವೆಲ್ಲ ತಿಳಿದುಕೊಂಡಿರುವುದು ತಪ್ಪು ಎಂದು ಹೇಳಿಕೆ ನೀಡಿದ್ದರು. ಈಗ ಆ ವ್ಯಕ್ತಿಯೇ ಸಿಬಿಐ ತನಿಖೆಗೆ ಒತ್ತಾಯಿಸಿದ ಶೇಖರ್​ ಸುಮನ್​ ಜತೆಗೆ ವೇದಿಕೆ ಹಂಚಿಕೊಂಡಿದ್ದಾನೆ. ಇವರೆಲ್ಲ ರಾಜಕೀಯ ಕಾರಣಗಳಿಗಾಗಿ ಸುಶಾಂತ್​ ಸಾವಿನ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
