ಮುಂಬೈ:ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ಅವರ ಕೊನೆಯ ಕ್ಷಣಗಳ ಬಗ್ಗೆ ನಿಖರವಾದ ಮಾಹಿತಿ ಹೊರಬಿದ್ದಿದೆ. ಇದರ ಪ್ರಕಾರ, ಬೆಳಗ್ಗೆ ಬೇಗನೆ ಎದ್ದಿದ್ದ ಸುಶಾಂತ್​ ಸಿಂಗ್​ ರಜಪೂತ್​, ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಕುರುಹು ತೋರಿರಲಿಲ್ಲ ಎನ್ನಲಾಗಿದೆ.
ಭಾನುವಾರ ಬೆಳಗ್ಗೆ 6.30ಕ್ಕೆ ಎದ್ದಿದ್ದ ಅವರು ತಮ್ಮ ಬಾಣಸಿಗರಿಗೆ ಹೇಳಿ ಒಂದು ಗ್ಲಾಸ್​ ದಾಳಿಂಬೆ ಜ್ಯೂಸ್​ ಮಾಡಿಸಿಕೊಂಡು ಕುಡಿದಿದ್ದರು. ಬಳಿಕ ಅವರು ತಮ್ಮ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು.
ಇದಾಗಿ ಒಂದು ಗಂಟೆಯ ಬಳಿಕ ಉಪಹಾರಕ್ಕೆ ಏನು ಮಾಡಬೇಕು ಎಂದು ಕೇಳಲು ಅವರ ಕೋಣೆಯ ಬಾಗಿಲು ತಟ್ಟಿದ್ದರು. ಆದರೆ, ಅತ್ತಕಡೆಯಿಂದ ಉತ್ತರ ಬಂದಿರಲಿಲ್ಲ. ಇದರಿಂದ ಹೆದರಿದ ಆತ ನಿರಂತರವಾಗಿ ಬಾಗಿಲು ಬಡಿದು ಸುಶಾಂತ್​ ಜತೆ ಮಾತನಾಡಲು ಯತ್ನಿಸಿದ್ದ.
ಇದನ್ನೂ ಓದಿ:ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನದ್ದು ಕೊಲೆ; ತನಿಖೆಯಾಗಬೇಕು ಎಂದ ಕುಟುಂಬ
ಇಷ್ಟಾದರೂ ಬಾಗಿಲು ತೆಗೆಯದಿದ್ದಾಗ ಸುಶಾಂತ್​ ಅವರ ಕೋಣೆಯಲ್ಲಿದ್ದ ಅವರ ಗೆಳೆಯ ಕೂಡ ಬಾಗಿಲು ಬಡಿದಿದ್ದಲ್ಲದೆ, ಸುಶಾಂತ್​ ಅವರ ಮೊಬೈಲ್​ಗೆ ಕರೆ ಮಾಡಿದ್ದರು. ಆದರೂ ಸುಶಾಂತ್​ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡ ಅವರು, ಮುಂಬೈನಲ್ಲೇ ಇದ್ದ ಸುಶಾಂತ್​ ಅವರ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಅವರು ಸುಶಾಂತ್​ ಮನೆಗೆ ಬಂದ ಬಳಿಕ ಬೀಗ ದುರಸ್ತಿ ಮಾಡುವವರನ್ನು ಕರೆಸಿ, ಬೀಗ ತೆಗೆಸಲಾಗಿತ್ತು. ಆಗ ಸುಶಾಂತ್​ ತಮ್ಮ ಕೋಣೆಯಲ್ಲಿದ್ದ ಫ್ಯಾನ್​ಗೆ ಬೆಡ್​ಶೀಟ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿತ್ತು.
ಸುಶಾಂತ್ ಕೊನೆಯ ಚಿತ್ರಕ್ಕೆ ನೂರೆಂಟು ವಿಘ್ನಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + ten =
Remember me
