ಮುಂಬೈ:ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ನಟ ಸುಶಾಂತ್​ ರಜಪೂತ್​ ಅವರ ಅಂತ್ಯಕ್ರಿಯೆ ನಾಳೆ (ಸೋಮವಾರ) ಮುಂಬೈನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸುಶಾಂತ್​ ತಂದೆ ಪಟನಾ(ಬಿಹಾರ್​) ದಿಂದ ನಾಳೆ ಮುಂಬೈಗೆ ಆಗಮಿಸಲಿದ್ದಾರೆ.
ಸುಶಾಂತ್​ ಅವರು ಮೂಲತಃ ಬಿಹಾರದ ಪಟನಾದವರು. ಅಲ್ಲಿನ ಪೂರ್ಣಿಯಾ ಎಂಬ ಹಳ್ಳಿಯಲ್ಲಿ 1986ರಲ್ಲಿ ಹುಟ್ಟಿದ್ದಾರೆ. 16ನೇ ವಯಸ್ಸಿನಲ್ಲಿದ್ದಾಗ ತಮ್ಮ ಪ್ರೀತಿಯ ತಾಯಿಯನ್ನು ಕಳೆದುಕೊಂಡಿದ್ದಾರೆ. ಅಂದಿನಿಂದ ಅವರ ಬದುಕೇ ಬದಲಾಗಿತ್ತು.
ಸುಶಾಂತ್​ ತಾಯಿಯ ನಿಧನದ ನಂತರ ತಮ್ಮ ಕುಟುಂಬದೊಂದಿಗೆ ಪಟನಾದಿಂದ ದೆಹಲಿಗೆ ಬಂದು ನೆಲೆಸಿದ್ದರು. ಅಲ್ಲಿಯೇ ಮೂರು ವರ್ಷ ಇಂಜಿನಿಯರಿಂಗ್​ ಓದಿದ್ದಾರೆ. ನಂತರ ಓದು ನಿಲ್ಲಿಸಿ, ಮೂಟೆಗಳಷ್ಟು ಕನಸುಹೊತ್ತು ಮುಂಬೈಗೆ ಬಂದಿದ್ದರು. ಒಂದು ಬ್ಯಾಗ್ ಹೊತ್ತು ಮುಂಬೈಗೆ ಕಾಲಿಟ್ಟಿದ್ದ ಅವರು, ಟಿವಿ ಶೋ ಮೂಲಕವೇ ಮೊದಲು ಪ್ರಸಿದ್ಧರಾದರು. ಅದಾದ ಬಳಿಕ ಒಂದಾದ ಮೇಲೆ ಒಂದರಂತೆ ಹಿಟ್​ ಸಿನಿಮಾಗಳನ್ನು ನೀಡಿದವರು.ಎಂ.ಎಸ್.ಧೋನಿ-ದಿ ಅನ್​ಟೋಲ್ಡ್ ಸ್ಟೋರಿಯಿಂದ ಶುರುವಾಗಿ ಚಿಚೋರೆವರೆಗಿನ ಅವರ ಸಿನಿ ಪ್ರಯಾಣ ಯಶಸ್ವಿಯಾಗಿ ಸಾಗಿತ್ತು. 2019ರಲ್ಲಿ ಬಿಡುಗಡೆಯಾಗಿದ್ದ ಚಿಚೋರೆ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು.ಇದನ್ನೂ ಓದಿ:ಮಾಜಿ ಪ್ರೇಯಸಿಯ ನಿಶ್ಚಿತಾರ್ಥ ಸುಶಾಂತ್​ ನೋವಿಗೆ ಕಾರಣ? ಇವರ ಸಾವಿನ ಸುದ್ದಿ ಕೇಳಿ ಫೋನ್​ ಕೆಳಗಿಟ್ಟ ಅಂಕಿತಾ
ಇನ್ನೂ 34 ವರ್ಷದ ಯುವ ನಟ. ಜೀವನದಲ್ಲೂ ಹಂತಹಂತವಾಗಿ ಮೇಲೇರುತ್ತಿದ್ದ ಸುಶಾಂತ್​ ಆತ್ಮಹತ್ಯೆ ಈ ಕ್ಷಣಕ್ಕೆ ಕೂಡ ಕಗ್ಗಂಟಾಗೇ ಉಳಿದಿದೆ. ಇಡೀ ಬಾಲಿವುಡ್​ ಶಾಕ್​ನಲ್ಲಿದೆ. ಅಭಿಮಾನಿಗಳೂ ತೀವ್ರ ದುಃಖಿತರಾಗಿದ್ದಾರೆ. (ಏಜೆನ್ಸೀಸ್​)
2019ರ ಜೂನ್​ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್​ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
