ಮುಂಬೈ:ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಸುದ್ದಿ ಹೊರಬೀಳುತ್ತಿದ್ದಂತೆ ಆತನ ಅಭಿಮಾನಿಗಳು ದುಃಖದಲ್ಲಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜೋರಾದ ಚರ್ಚೆಗೆ ವೇದಿಕೆಯಾಗಿ ಪರಿಣಮಿಸಿದೆ.
ಖಿನ್ನತೆ ಎಂದರೆ ಮಾನಸಿಕ ಅಸ್ವಸ್ಥತೆ ಎಂದೇ ಪರಿಗಣಿಸಲಾಗುವ ಕಾರಣ ಈವರೆಗೆ ಇದರ ಬಗ್ಗೆ ಪಿಸುಮಾತಿನಲ್ಲೇ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಸುಶಾಂತ್​ ಸಾವು ಖಿನ್ನತೆ ಬಗೆಗಿನ ಚರ್ಚೆಯನ್ನು ಬಹಿರಂಗವಾಗಿ, ಜೋರಾಗಿ ನಡೆಯುವಂತೆ ಮಾಡಿದೆ. ಖಿನ್ನತೆ ಎಂಬ ಪದ ಟ್ವಿಟರ್​ನಲ್ಲಿ ಟ್ರೆಂಡಿಂಗ್​ ಆಗಿದೆ.
ಇದನ್ನೂ ಓದಿ;ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​
ಸಮಸ್ಯೆ ಎಂಥದ್ದೇ ಆಗಿರಲಿ, ನಿಮ್ಮವರಿಗೆ ಕರೆ ಮಾಡಿ, ಅವರೊಂದಿಗೆ ಮಾತನಾಡಿ. ನಿಮ್ಮ ಜತೆಗಿರುವವರೊಂದಿಗೆ ಹಂಚಿಕೊಳ್ಳಿ ಎಂಬ ವಾದ ಸರಣಿ ಶುರುವಾಗಿದೆ. ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎನ್ನುವುದು ಈ ಘಟನೆಯಿಂದ ಸಾಬೀತಾಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಆತ್ಮಹತ್ಯೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಈ ಮಟ್ಟಿಗಿನ ಚರ್ಚೆ ನಡೆಯುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.
ಎಷ್ಟೇ ಪ್ರತಿಭಾವಂತ, ಸಾಧಕನಾಗಿದ್ದರೂ, ಆತ ಅನುಭವಿಸುತ್ತಿದ್ದ ಸಂಕಟ ಈ ಬದುಕನ್ನು ಜೀವಿಸುವುದಕ್ಕಿಂತ ತೊರೆಯುವುದೇ ಲೇಸು ಎಂಬ ನಿರ್ಧಾರಕ್ಕೆ ಬರುವಂತೆ ಮಾಡಿದೆ. ಶಾಂತ ಮುಖಭಾವದ ಹಿಂದೆ ಮಾನಸಿಕ ಕ್ಷೋಭೆಯೇ ಅಡಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ;ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?
ನಿಮ್ಮವರೊಂದಿಗೆ ಮಾತನಾಡಿ, ಕಷ್ಟ ಹಂಚಿಕೊಳ್ಳಿ, ಆಲಂಗಿಸಿ ಎನ್ನುತ್ತೀರಿ ಅದು ಅಷ್ಟು ಸುಲಭವೂ ಅಲ್ಲ ಎನ್ನುತ್ತಾರೆ ಮತ್ತೊಬ್ಬರು. ಫೋನ್​ ಮಾಡಿ ಮಾತನಾಡುವುದು ಮಾನಸಿಕ ಆನಾರೋಗ್ಯಕ್ಕೆ ಪರಿಹಾರವಲ್ಲ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.ಸಂತೋಷವಾಗಿರುವ ವ್ಯಕ್ತಿಯೊಬ್ಬ ತನ್ನ ಕೋಣೆಯಲ್ಲಿ, ಏಕಾಂಗಿತನದಲ್ಲಿ ಏನೆಲ್ಲ ಎದುರಿಸಿರುತ್ತಾನೆ ಎನ್ನುವುದರ ಸಣ್ಣ ಅರಿವೂ ಕೂಡ ನಮಗಿರುವುದಿಲ್ಲ ಎಂದು ಅಭಿಮಾನಿಯೊಬ್ಬ ಬರೆದುಕೊಂಡಿದ್ದಾನೆ.
ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − three =
Remember me
