ಮುಂಬೈ:ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಆತ್ಮಹತ್ಯೆಯಿಂದ ಆಗಿದೆ ಎಂದು ಪೊಲೀಸರು ಈಗಾಗಲೇ ಖಚಿತಪಡಿಸಿದ್ದಾರೆ. ಆದರೆ, ಆತ್ಮಹತ್ಯೆಗೆ ಕಾರಣವೇನು ಹಾಗೂ ಸಾವಿಗೆ ಸಂಬಂಧಿಸಿದಂತೆ ದಾಖಲಾಗಿರುವ ಕೆಲ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುಶಾಂತ್​ ಸಿಂಗ್​ನ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದ ಶ್ರುತಿ ಮೋದಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ನಟನ ಆರ್ಥಿಕ ವಹಿವಾಟುಗಳ ಬಗ್ಗೆ ವಿವರ ನೀಡಿದ್ದಾರೆ.
ಇದನ್ನೂ ಓದಿ;ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?
ಸುಶಾಂತ್​ ಸಿಂಗ್​ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರಲಿಲ್ಲ. ಅವರ ಹಣಕಾಸಿನ ಸ್ಥಿತಿ ಚೆನ್ನಾಗಿತ್ತು ಎಂದು ಶ್ರುತಿ ಹೇಳಿದ್ದಾರೆ. ಸುಶಾಂತ್​ ತಿಂಗಳ ವೆಚ್ಚ 10 ಲಕ್ಷ ರೂ. ಗೂ ಹೆಚ್ಚಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಬಾಂದ್ರಾದಲ್ಲಿ ಸುಶಾಂತ್​ ನೆಲೆಸಿದ್ದ ಮನೆಗೆ ತಿಂಗಳಿಗೆ ನಾಲ್ಕೂವರೆ ಲಕ್ಷ ರೂ. ಬಾಡಿಗೆ ಪಾವತಿಸಲಾಗುತ್ತಿತ್ತು. ಜತೆಗೆ, ಲೋನಾವಲದಲ್ಲಿ ಸುಶಾಂತ್​ ಫಾರ್ಮ್​ಹೌಸ್​ ಬಾಡಿಗೆಗೆ ಪಡೆದಿದ್ದರು. ಇದಕ್ಕಾಗಿ ತಿಂಗಳಿಗೆ ಲಕ್ಷಾಂತರ ರೂ. ಪಾವತಿಸುತ್ತಿದ್ದರು ಎಂದಿದ್ದಾರೆ.ಇದಲ್ಲದೇ ಸುಶಾಂತ್​ಗೆ ವಿಲಾಸಿ, ಐಷಾರಾಮಿ ಕಾರು ಬೈಕ್​ಗಳ ಕ್ರೇಜ್​ ಇತ್ತು. ರೇಂಜ್​ ರೋವರ್​, ಮಸೆರೆಟ್ಟಿ, ಕ್ವಾಟ್ರೋಪೋರ್ಟ್​ ಕಾರು ಹೊಂದಿದ್ದರು. ಜತೆಗೆ ಬಿಎಂಡಬ್ಲ್ಯು ಬೈಕ್​ ಕೂಡ ಇತ್ತು.
ಇದನ್ನೂ ಓದಿ;ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್​ ಸಿಂಗ್​; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ; ನಿಗೂಢವಾಗುತ್ತಿದೆ ಆತ್ಮಹತ್ಯೆ ಕಾರಣ
ಜತೆಗೆ, ಸುಶಾಂತ್ ನಾಲ್ಕು ಪ್ರಾಜೆಕ್ಟ್​ಗಳಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾಗಳ ಹೊರತಾಗಿ ವರ್ಚುವಲ್​ ರಿಯಾಲಿಟಿಗೆ ಸಂಬಂಧಿಸಿದ ರೆಡ್​ ರಿಯಲಿಸ್ಟಿಕ್​ ಎಂಬ ಕಂಪನಿ ಆರಂಭಿಸಿದ್ದರು. ನಾಸಾ ಹಾಗೂ ಇಸ್ರೋ ಚಟುವಟಿಕೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ನೇಷನ್​ ಇಂಡಿಯಾ ಫಾರ್​ ವರ್ಲ್ಡ್​ ಎಂಬ ಸಂಸ್ಥೆ ನಡೆಸುತ್ತಿದ್ದರು. ಇದಲ್ಲದೇ ಜಿನಿಯಸ್​ ಆ್ಯಂಡ್​ ಡ್ರಾಪ್​ಔಟ್​ ಎಂಬ ಸಾಮಾಜಿಕ ಸೇವಾ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಶ್ರುತಿ ಮಾಹಿತಿ ನೀಡಿದ್ದಾರೆ.
ಖಗೋಳದ ಬಗ್ಗೆ ಅತೀವ ಉತ್ಸಾಹ ಹೊಂದಿದ್ದ ಸುಶಾಂತ್​ ಮನೆಯಲ್ಲಿ ವಿಶೇಷ ಟೆಲಿಸ್ಕೋಪ್​ ಇತ್ತು ಶ್ರುತಿ ಮೋದಿ ಪೊಲೀಸರಿಗೆ ವಿವರಿಸಿದ್ದಾರೆ.
ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
