ಪಟನಾ:ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣ ದಿನದಿನಕ್ಕೂ ನಿಗೂಢವಾಗುತ್ತಲೇ ಸಾಗುತ್ತಿದೆ. ಇದೀಗ ಅವರು 50ಕ್ಕೂ ಹೆಚ್ಚು ಸಿಮ್​ಕಾರ್ಡ್​ಗಳನ್ನು ಬಳಸುತ್ತಿದ್ದರು. ತುಂಬಾ ತ್ವರಿತವಾಗಿ ಅವರು ಮೊಬೈಲ್​ ನಂಬರ್​ಗಳನ್ನು ಬದಲಿಸುತ್ತಿದ್ದರು ಎಂಬ ಮಾತು ಕೇಳಿ ಬಂದ ಹಿಂದೆಯೇ, ಅವರು ಬಳಸುತ್ತಿದ್ದ ಸಿಮ್​ಕಾರ್ಡ್​ಗಳು ಯಾವುವೂ ಅವರ ಹೆಸರಿನಲ್ಲಿ ನೋಂದಣಿಯಾಗಿರಲಿಲ್ಲ ಎಂಬ ಸಂಗತಿ ಬಹಿರಂಗಗೊಂಡಿದೆ.
ಅವರು ಬಳಸುತ್ತಿದ್ದ ಒಂದು ಸಿಮ್​ಕಾರ್ಡ್​ ಅವರ ಫ್ಲ್ಯಾಟ್​ಮೇಟ್​ ಹಾಗೂ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾದ ಸಿದ್ಧಾರ್ಥ್​ ಪಿಥಾನಿ ಅವರ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂಬ ಸಂಗತಿ ಪತ್ತೆಯಾಗಿದೆ. ವಾಸ್ತವದಲ್ಲಿ ಸುಶಾಂತ್​ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಮೊದಲ ವ್ಯಕ್ತಿ ಇವರದ್ದಾಗಿದ್ದರು ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ಇದನ್ನೂ ಓದಿ:ಯುಎಸ್​ ಓಪನ್​ ಆಡಲ್ಲ ಸಾನಿಯಾ, ಕಾದುನೋಡಲಿದ್ದಾರೆ ಬೋಪಣ್ಣ
ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ದಾಖಲಿಸಿರುವ ದೂರನ್ನು ಆಧರಿಸಿ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರು ಇದೀಗ ಸುಶಾಂತ್​ ಅವರ ಕಾಲ್​ ಡಿಟೇಲ್​ ರೆಕಾರ್ಡ್​ಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಜತೆಗೆ ಸುಶಾಂತ್​ ಆತ್ಮಹತ್ಯೆಗೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್​ ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಅವರ ಕುಟುಂಬ ವರ್ಗದವರನ್ನು ಕೂಡ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ದಿಶಾ ಅವರ ಕುಟುಂಬ ವರ್ಗದವರು ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಕಳೆದ ಕೆಲವು ತಿಂಗಳಲ್ಲಿ ಸುಶಾಂತ್​ ಸಿಂಗ್​ ರಜಪೂತ್​ 50 ಬಾರಿ ಸಿಮ್​ಕಾರ್ಡ್​ ಬದಲಿಸಿದ್ದರು. ಅವರ ಕುಟುಂಬ ವರ್ಗದವರಿಗೆ ಕೂಡ ಸುಶಾಂತ್​ ಯಾವ ಮೊಬೈಲ್​ಸಂಖ್ಯೆಯನ್ನು ಬಳಸುತ್ತಿದ್ದಾರೆ ಎಂಬುದು ತಿಳಿಯದಾಗಿತ್ತು. ಅವರು ಅಷ್ಟು ತ್ವರಿತವಾಗಿ ಮೊಬೈಲ್​ ಸಂಖ್ಯೆಗಳನ್ನು ಬದಲಿಸುತ್ತಿದ್ದರು ಎಂದು ಸುಶಾಂತ್​ ಅವರ ಸ್ನೇಹಿತೆ ಸ್ಮಿತಾ ಪಾರೀಖ್​ ಹೇಳಿದ್ದರು.
ಟ್ರೊಪಿಕಲ್ ಐಲ್ಯಾಂಡ್​​​ ಟ್ರಿಪ್ ಮಿಸ್ ಆಯ್ತು ಅಂತ ಬೇಜಾರ್ ಮಾಡ್ಕೋಬೇಡಿ ಪ್ಲೀಸ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − nine =
Remember me
