ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೆ ಬಾಲಿವುಡ್​ನ ಕೆಲವು ಸ್ಟಾರ್ ಕಲಾವಿದರು ಮತ್ತು ನಿರ್ವಪಕರ ವಿರುದ್ಧ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಎಂಟು ಜನರ ಮೇಲೆ ಕೇಸ್ ದಾಖಲಾಗಿದೆ.
ಸುಧೀರ್ ಕುಮಾರ್ ಓಜಾ ಎಂಬ ವಕೀಲರು ಐಪಿಸಿ ಸೆಕ್ಷನ್ 306, 109, 504 ಮತ್ತು 506 ಅಡಿಯಲ್ಲಿ ಬಿಹಾರದ ಮುಜಾಫರ್​ಪುರ್ ಕೋರ್ಟ್​ನಲ್ಲಿ ಕೇಸ್ ಹಾಕಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ಏಕ್ತಾ ಕಪೂರ್ ಸೇರಿ ಇನ್ನೂ ಹಲವರ ಹೆಸರುಗಳಿವೆ. ಇವರೆಲ್ಲರ ಕಡೆಯಿಂದ ಸುಶಾಂತ್​ಗೆ ಮಾನಸಿಕವಾಗಿ ಚಿತ್ರಹಿಂಸೆ ಉಂಟಾಗಿದ್ದು, ಅದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.
ಇದನ್ನೂ ಓದಿ;ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ಡಿಪ್ರೆಶನ್ ವಿಚಾರ ಗೊತ್ತಿರಲಿಲ್ಲ:ಈಗಾಗಲೇ ಪೊಲೀಸರು, ಸುಶಾಂತ್ ಸ್ನೇಹಿತರು ಮತ್ತು ಕುಟುಂಬವರ್ಗದವರ ವಿಚಾರಣೆ ನಡೆಸಿದ್ದು, ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಈ ಸಂಬಂಧ ಅವರ ತಂದೆಯನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ತಮ್ಮ ಮಗನಿಗೆ ಡಿಪ್ರೆಷನ್ ಇದ್ದ ವಿಚಾರ ತಮಗೆ ಗೊತ್ತಿರಲಿಲ್ಲ ಎಂದು ಸುಶಾಂತ್ ತಂದೆ ಕೆ.ಕೆ. ಸಿಂಗ್ ಅವರು ಹೇಳಿಕೆ ಕೊಟ್ಟಿದ್ದಾರೆ.
ಇನ್ನು ಸುಶಾಂತ್ ಅವರ ಲ್ಯಾಪ್​ಟಾಪ್ ಮತ್ತು ಮೊಬೈಲ್ ವಶಕ್ಕೆ ಪಡೆದು, ಫಾರೆನ್ಸಿಕ್ ಲ್ಯಾಬ್​ಗೆ ಕಳುಹಿಸಿದ್ದಾರೆ. ಸುಶಾಂತ್ ಅವರ ಮ್ಯಾನೇಜರ್ ಆಗಿದ್ದ ಸಿದ್ಧಾರ್ಥ್ ಪಠಾಣಿ ಅವರನ್ನು ವಿಚಾರಣೆ ಮಾಡಿ, ಅವರಿಂದ ಹಲವು ಮಾಹಿತಿಗಳನ್ನು ಪೊಲೀಸರು ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ;ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ; ನೆಟ್ಟಿಗರ ಕೋಪಕ್ಕೆ ಯಾವುದರ ಮೇಲೆ?
ಸಲ್ಮಾನ್ ಖಾನ್ ಪ್ರತಿಕೃತಿಗೆ ಬೆಂಕಿ:ಈ ಮಧ್ಯೆ, ಸುಶಾಂತ್ ಸಿಂಗ್ ಹುಟ್ಟೂರು ಪಾಟ್ನಾದಲ್ಲಿ ಅವರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬಾಲಿವುಡ್​ನಲ್ಲಾಗುತ್ತಿರುವ ಸ್ವಜನ ಪಕ್ಷಪಾತ ವಿರುದ್ಧ ಧಿಕ್ಕಾರ ಮೊಳಗಿಸಿದ್ದಾರೆ. ಬಾಲಿವುಡ್​ನ ಕೆಲವು ನಿರ್ಮಾಣ ಸಂಸ್ಥೆಗಳು ಸುಶಾಂತ್ ಅವರನ್ನು ಬ್ಯಾನ್ ಮಾಡಿದ್ದು, ಇದರಿಂದ ಬೇಸರಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಟ ಕಮಾಲ್ ಖಾನ್ ಮಂಗಳವಾರವಷ್ಟೇ ಟ್ವೀಟ್ ಮಾಡಿದ್ದರು. ಇದನ್ನೇ ಗುರಿಯಾಗಿಟ್ಟುಕೊಂಡ ಸುಶಾಂತ್ ಅಭಿಮಾನಿಗಳು, ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ, ಪ್ರತಿಭಟನೆ ಮಾಡಿದ್ದಾರೆ.
ಬಂಧನಕ್ಕೊಳಗಾಗುತ್ತಿದ್ದಂತೆ ಕರಗಿತು ಏಳು ಸಾವಿರ ಕೋಟಿ ರೂ. ಸಂಪತ್ತು…!

04
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 16 =
Remember me
